School Time: ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ, ಮೊದಲ ದಿನ ಹೀಗಿತ್ತು ಸಂಭ್ರಮದ ಕ್ಷಣ photos
- Education News ಕರ್ನಾಟಕದಲ್ಲಿ ಒಂದೂವರೆ ತಿಂಗಳ ಬಿಡುವಿನ ನಂತರ ಶಾಲೆಗಳು ಪುನಾರಂಭಗೊಂಡವು. ಮೊದಲ ದಿನದ ಮಕ್ಕಳ ಆಗಮನ, ತಯಾರಿಯ ಸಡಗರ ಕ್ಷಣಗಳು ಹೀಗಿದ್ದವು.
- Education News ಕರ್ನಾಟಕದಲ್ಲಿ ಒಂದೂವರೆ ತಿಂಗಳ ಬಿಡುವಿನ ನಂತರ ಶಾಲೆಗಳು ಪುನಾರಂಭಗೊಂಡವು. ಮೊದಲ ದಿನದ ಮಕ್ಕಳ ಆಗಮನ, ತಯಾರಿಯ ಸಡಗರ ಕ್ಷಣಗಳು ಹೀಗಿದ್ದವು.
(1 / 8)
ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಆಕ್ಮೆಶಾಲೆಯಲ್ಲಿ ಮೊದಲ ದಿನದಂದು ಶಾಲೆಗೆ ಆಗಮಿಸಿದ ಪುಟಾಣಿಗಳ ಖುಷಿ ಹೀಗಿತ್ತು.
(2 / 8)
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಬರ ಮಾಡಿಕೊಳ್ಳಲು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.
(3 / 8)
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಅವರು ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದರು.
(4 / 8)
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಮೆರವಣಿಗೆ ನಡೆಯಿತು. ಎಸ್‌ಡಿಎಂಸಿ ಪ್ರತಿನಿಧಿಗಳು, ಶಿಕ್ಷಕರು, ಮಕ್ಕಳು ಭಾಗಿಯಾದರು,
(5 / 8)
ರಾಮನಗರ ತಾಲ್ಲೂಕಿನ ಕೋರನಹಳ್ಳಿ ಗ್ರಾಮದ ಸರ್ಕೃಿ ಪ್ರೌಢಶಾಲೆ ಆರಂಭೋತ್ಸವದಲ್ಲಿ ಡಿಡಿಪಿಐ ಪುರುಷೋತ್ತಮ್ ಅವರು ಭಾಗಿಯಾಗಿ ಪುಸ್ತಕ ವಿತರಿಸಿದರು.
(6 / 8)
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಶಿರಮಳ್ಳಿ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಬರಮಾಡಿಕೊಂಡ ಯಕ್ಷಗಾನ ಕಲಾವಿದರ ಕಟೌಟ್‌ಗಳು.
(7 / 8)
ಬೆಂಗಳೂರು ನಗರದ ಸಾಣೆಗುರುವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಮೊದಲ ದಿನವನ್ನು ಬರ ಮಾಡಿಕೊಳ್ಳಲಾಯಿತು, ಶಿಕ್ಷಕರು ಜತೆಗಿದ್ದರು.
ಇತರ ಗ್ಯಾಲರಿಗಳು