ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Upsc: ಯುಪಿಎಸ್‌ಸಿ ಪರೀಕ್ಷೆ ಬರೆಯೋರಿಗೆ ಸ್ಪೂರ್ತಿ ನೀಡುವ ಡಾ. ತನು ಜೈನ್‌ ಕೇಂದ್ರ ನಾಗರಿಕ ಸೇವಾ ಹುದ್ದೆ ಬಿಟ್ಟದ್ದು ಏಕೆ, ಇಲ್ಲಿದೆ ಉತ್ತರ

UPSC: ಯುಪಿಎಸ್‌ಸಿ ಪರೀಕ್ಷೆ ಬರೆಯೋರಿಗೆ ಸ್ಪೂರ್ತಿ ನೀಡುವ ಡಾ. ತನು ಜೈನ್‌ ಕೇಂದ್ರ ನಾಗರಿಕ ಸೇವಾ ಹುದ್ದೆ ಬಿಟ್ಟದ್ದು ಏಕೆ, ಇಲ್ಲಿದೆ ಉತ್ತರ

  • Dr Tanu Jain IAS: ತನು ಜೈನ್‌ ಐಎಎಸ್‌ ಎಂದರೆ ಎಲ್ಲರಿಗೂ ಚಿರಪರಿಚಿತ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಇವರು ಸೋಷಿಯಲ್‌ ಮೀಡಿಯಾದಲ್ಲಿ ಉಪಯುಕ್ತ ಸಲಹೆ ನೀಡುತ್ತಾರೆ. ಅಂದಹಾಗೆ, ಇವರು ಏಕೆ ಕೇಂದ್ರ ನಾಗರಿಕ ಸೇವಾ ಹುದ್ದೆಯನ್ನು ತ್ಯಜಿಸಿದ್ದಾರೆ? ತಿಳಿದುಕೊಳ್ಳೋಣ ಬನ್ನಿ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಡಾ. ತನು ಜೈನ್‌ ಪರಿಚಯ ಇರಬಹುದು. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂದು ಇವರು ಸಲಹೆ ನೀಡುತ್ತಾರೆ. ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ರೀಲ್‌, ಸಣ್ಣ ವಿಡಿಯೋಗಳ ಮೂಲಕ ಟಿಪ್ಸ್‌ ನೀಡುವ ಇವರಲ್ಲಿ "ನೀವ್ಯಾಕೆ ಐಎಎಸ್‌ ಹುದ್ದೆ ತೊರೆದಿರಿ?" ಎಂಬ ಪ್ರಶ್ನೆಯನ್ನು ಕೇಳುತ್ತಾರೆ.
icon

(1 / 6)

ಈ ಪ್ರಶ್ನೆಗೆ ಸ್ವತಃ ತನು ಜೈನ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. "ನನಗೆ ಐಎಎಸ್‌ ಹುದ್ದೆಯಲ್ಲಿ ಏನೂ ತೊಂದರೆ ಇರಲಿಲ್ಲ. ಏಳೂವರೆ ವರ್ಷ ಕೆಲಸ ಮಾಡಿದೆ. ಈ ನಡುವೆ ಯುಪಿಎಸ್‌ಸಿ ಮಾರ್ಗದರ್ಶನ ನೀಡುತ್ತಿದ್ದೆ. ಅಲ್ಲಲ್ಲಿ ಪಾಠ ಮಾಡುತ್ತಿದ್ದೆ.  ನನ್ನಲ್ಲಿ ಬೋಧಕನ ವಿಶೇಷತೆ ಇದೆ ಎಂದು ತಿಳಿಯುತು. ಕಲಿಸುವ ಉತ್ಸಾಹ ನನ್ನಲ್ಲಿ ಹೆಚ್ಚಿರುವುದನ್ನು ತಿಳಿದುಕೊಂಡೆ" ಎಂದು ಅವರು ಹೇಳಿದ್ದಾರೆ. 
icon

(2 / 6)

ಯುಪಿಎಸ್‌ಸಿ ತಯಾರಿಯ ಕಷ್ಟ ನನಗೆ ತಿಳಿದಿದೆ. ನಾನೂ ಕೂಡ ಯುಪಿಎಸ್‌ಸಿಗೆ ಸಿದ್ಧತೆ ನಡೆಸುವಾಗ ಸಾಕಷ್ಟು ಕಷ್ಟಪಟ್ಟಿದ್ದೆ. ತಯಾರಿ ನಡೆಸುವಾಗ ನಡೆಸುವ ತಪ್ಪುಗಳೇನು ಎಂದು ನನಗೆ ತಿಳಿದಿದೆ. ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಮಾಹಿತಿ ನೀಡಲು ನನಗೆ ಇದೊಂದು ಅವಕಾಶ ತಿಳಿದಿದ್ದೇನೆ. ನನ್ನ ಪತಿ ಈಗಾಗಲೇ ನಾಗರಿಕ ಸೇವೆಯಲ್ಲಿದ್ದಾರೆ. ಹೀಗಾಗಿ, ನಾನು ಕೆಲಸ ಬಿಡುವ ರಿಸ್ಕ್‌ ತೆಗೆದುಕೊಳ್ಳಬಹುದು ಅನಿಸಿತು. ಸಾಕಷ್ಟು ಯೋಚಿಸಿ ಕೆಲಸ ಬಿಡಲು ಮುಂದಾದೆ ಎಂದು ಅವರು ಹೇಳಿದ್ದಾರೆ.
icon

(3 / 6)

ತನು ಜೈನ್ ಅವರು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು Tathastu-ICS  ಹೆಸರಿನ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದಾರೆ. ಇದರ ಪ್ರಯೋಜನವನ್ನು ಸಾಕಷ್ಟು ಯುಪಿಎಸ್‌ಸಿ ಆಕಾಂಕ್ಷಿಗಳು ಪಡೆಯುತ್ತಿದ್ದಾರೆ.
icon

(4 / 6)

ಡಾ.ತನು ಜೈನ್ ಅವರ ಪತಿ ವಾತ್ಸಲ್ಯ ಪಂಡಿತ್ ಕೂಡ ಐಎಎಸ್ ಅಧಿಕಾರಿ. ಡಾ. ತನು ಜೈನ್ ಮತ್ತು ಅವರ ಪತಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳನ್ನು ಪ್ರೇರೇಪಿಸುತ್ತಿರುವುದನ್ನು ಅವರ ಕೆಲವು ಯೂಟ್ಯೂಬ್‌ ವಿಡಿಯೋಗಳಲ್ಲಿ ನೋಡಬಹುದು.
icon

(5 / 6)

ಸೇವಾವಧಿಯಲ್ಲಿ ಡಾ.ತನು ಜೈನ್ ಅವರು ಡಿಆರ್‌ಡಿಒದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ತನು ಜೈನ್ ದೆಹಲಿಯ ಸದರ್ ಬಜಾರ್ ಪ್ರದೇಶದ ನಿವಾಸಿ. ಅವರು ಕೇಂಬ್ರಿಡ್ಜ್ ಶಾಲೆಯಲ್ಲಿ ಓದಿದ್ದಾರೆ. ದ್ವಿತೀಯ ಪಿಯುಸಿ ಬಳಿಕ ಬಿಡಿಎಸ್ ಶಿಕ್ಷಣ ಪಡೆದರು. ಇದಾದ ನಂತರ ದಂತವೈದ್ಯರಾಗುವ ಬದಲು ನಾಗರಿಕ ಸೇವಾ ಪರೀಕ್ಷೆ ಆಯ್ಕೆ ಮಾಡಿಕೊಂಡರು.  2014ರಲ್ಲಿ 3ನೇ ಪ್ರಯತ್ನದಲ್ಲಿ 648ನೇ ರಾಂಕ್‌ ಗಳಿಸಿದರು. 
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು