ಕನ್ನಡ ಸುದ್ದಿ  /  Photo Gallery  /  Education News Summer Camp Organize A Summer Camp This Time With Your Friends Follow These 7 Tips Rst

Summer Camp: ನಿಮ್ಮ ಫ್ರೆಂಡ್ಸ್ ಜೊತೆ ಸೇರಿ ಈ ಸಲ ನೀವೇ ಬೇಸಿಗೆ ಶಿಬಿರ ಆಯೋಜಿಸಿ, ಈ 7 ಟಿಪ್ಸ್ ಫಾಲೊ ಮಾಡಿ

  • ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಯಿತು ಎಂದರೆ ಅಲ್ಲಲ್ಲಿ ಸಮ್ಮರ್‌ ಕ್ಯಾಂಪ್‌ಗಳು ಆಯೋಜನೆಯಾಗುತ್ತವೆ. ಬೇಸಿಗೆ ಶಿಬಿರಕ್ಕೆ ಸೇರಲು ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಅದರ ಬದಲು ನೀವೇ ಸಮ್ಮರ್‌ ಕ್ಯಾಂಪ್‌ ಆಯೋಜಿಸಬಹುದು. ಅದಕ್ಕಾಗಿ ಈ ಟಿಪ್ಸ್‌ ಫಾಲೋ ಮಾಡಿ.

ಬೇಸಿಗೆ ರಜೆಯನ್ನು ಮಜವಾಗಿ ಹಾಗೂ ಅರ್ಥಪೂರ್ಣವಾಗಿ ಕಳೆಯಲು ಸಮ್ಮರ್‌ ಕ್ಯಾಂಪ್‌ಗಳಲ್ಲಿ ಭಾಗವಹಿಸುವುದು ಸಹಜ, ಆಟ-ಪಾಠಗಳ ಸಮ್ಮಿಶ್ರಣವಾಗಿರುವ ಸಮ್ಮರ್‌ ಕ್ಯಾಂಪ್‌ಗಳು ರಜಾದಿನಗಳನ್ನು ಅರ್ಥಪೂರ್ಣವಾಗಿಸುವುದರಲ್ಲಿ ಅನುಮಾನವಿಲ್ಲ. ಇದರಲ್ಲಿ ಮೋಜು-ಮಸ್ತಿಯ ಜೊತೆಗೆ ಜೀವನ ಕೌಶಲವನ್ನೂ ಕಲಿಯಬಹುದು. ಆದರೆ ಇದಕ್ಕಾಗಿ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಅದರ ಬದಲು ನೀವೇ ಬೇಸಿಗೆ ಶಿಬಿರ ಆಯೋಜಿಸಬಹುದು. ನಿಮ್ಮ ಸ್ನೇಹಿತರ ಜೊತೆ ಎಂಜಾಯ ಮಾಡಬಹುದು. ಅದಕ್ಕಾಗಿ ಈ ಟಿಪ್ಸ್‌ಗಳನ್ನು ಅನುಸರಿಸಿ. 
icon

(1 / 9)

ನಿಮ್ಮ ವಯಸ್ಸಿನವರನ್ನೂ ಕೂಡಿಕೊಳ್ಳಿ: ಸಮ್ಮರ್‌ ಕ್ಯಾಂಪ್‌ ಆಯೋಜಿಸಲು ನೀವು ನಿಮ್ಮ ಸಮ ವಯಸ್ಕರ ಗುಂಪು ಮಾಡಿಕೊಳ್ಳುವುದು ಬಹಳ ಮುಖ್ಯ. ಇದರಿಂದ ನೀವು ಸಮ್ಮರ್‌ ಕ್ಯಾಂಪ್‌ ಅನ್ನು ಚೆನ್ನಾಗಿ ಎಂಜಾಯ್‌ ಮಾಡಬಹುದು.
icon

(2 / 9)

ಪ್ಲಾನ್‌ ಮಾಡಿ:  ಒಂದು ನೋಟ್‌ ಬುಕ್‌ ತೆಗೆದುಕೊಳ್ಳಿ. ಅದರಲ್ಲಿ ಎರಡು ತಿಂಗಳ ಕಾಲ ಏನೆಲ್ಲಾ ಚಟುವಟಿಕೆಗಳನ್ನು ಆಯೋಜಿಸಬಹುದು ಎಂಬುದನ್ನು ಬರೆಯಿರಿ. ಹೀಗೆ ಪ್ಲಾನ್‌ ಮಾಡುವುದರಿಂದ ನಿಮ್ಮ ಬೇಸಿಗೆ ಶಿಬಿರ ಯಶಸ್ಸು ಕಾಣುವುದರಲ್ಲಿ ಅನುಮಾನವೇ ಬೇಡ. ಪೋಷಕರು ಹಾಗೂ ಸ್ನೇಹಿತರ ನೆರವು ಪಡೆಯಿರಿ. 
icon

(3 / 9)

ನಿರ್ದಿಷ್ಟ ಹಣ ನಿಗದಿ ಪಡಿಸಿ: ನೀವು ಸ್ನೇಹಿತರೇ ಸೇರಿಕೊಂಡು ಕ್ಯಾಂಪ್‌ ಆಯೋಜಿಸುವುದಾದರೂ ಕ್ಯಾಂಪ್‌ ಆಯೋಜನೆಗೆ ಒಂದಿಷ್ಟು ಹಣ ಖಂಡಿತ ಬೇಕು. ಊಟ-ತಿಂಡಿ ಖರ್ಚುಗಳನ್ನು ನಿಭಾಯಿಸುವಷ್ಟು ಹಣವನ್ನು ಎಲ್ಲರಿಂದಲೂ ಸಂಗ್ರಹಿಸಿ. ಅದನ್ನು ಪುಸ್ತಕವೊಂದರಲ್ಲಿ ಬರೆದಿಡಿ. ಪ್ರತಿದಿನ ಎಷ್ಟು ಖರ್ಚಾಯಿತು ಎಂಬ ಲೆಕ್ಕಾಚಾರವೂ ಇರಲಿ. 
icon

(4 / 9)

ಸ್ಥಳ ಆಯ್ಕೆ ಮಾಡಿ: ಇದು ಎಲ್ಲದಕ್ಕಿಂತ ಬಹಳ ಮುಖ್ಯ. ಸಮ್ಮರ್‌ ಕ್ಯಾಂಪ್‌ ಆಯೋಜಿಸಲು ಸೂಕ್ತ ಸ್ಥಳವೂ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ನೀವು ಹೊಂದುವ ಸ್ಥಳವನ್ನು ಆಯ್ಕೆ ಮಾಡಿ. ಹಣ ನೀಡುವ ಜಾಗವಾದರೆ ಸಾಧ್ಯವಾದಷ್ಟು ಕಡಿಮೆ ಬಾಡಿಗೆ ಇರುವ ಜಾಗ ಹುಡುಕಿ. ಎಲ್ಲರಿಗೂ ಹತ್ತಿರವಾಗುವ ಸ್ಥಳ ಆಯ್ಕೆ ಮಾಡುವುದು ಅವಶ್ಯ.
icon

(5 / 9)

ಪೋಷಕರೂ ಕೂಡಿಕೊಳ್ಳಲಿ: ನಿಮ್ಮ ಸಮ್ಮರ್‌ಕ್ಯಾಂಪ್‌ನಲ್ಲಿ ಸ್ನೇಹಿತರೊಂದಿಗೆ ಸಮಯವಿದ್ದಾಗ ಅವರ ಪೋಷಕರಿಗೂ ಸೇರಿಕೊಳ್ಳುವಂತೆ ಹೇಳಿ. ಎಲ್ಲರೂ ಸೇರಿ ಎಂಜಾಯ್‌ ಮಾಡಬಹುದು. ಮಾತ್ರವಲ್ಲ ಒಬ್ಬರ ಪರಿಚಯ ಇನ್ನೊಬ್ಬರಿಗೆ ಆದಂತೆ ಆಗುತ್ತದೆ. 
icon

(6 / 9)

ಕ್ರಿಯಾತ್ಮಕವಾಗಿರಲಿ: ಸಮ್ಮರ್‌ ಕ್ಯಾಂಪ್‌ ಎಂದರೆ ಬರಿ ಆಟವಾಡುವುದು ಎಂದಲ್ಲ. ಇಲ್ಲಿ ಸೃಜನಾತ್ಮಕ ಚಟುವಟಿಕೆಗಳಿಗೂ ಅವಕಾಶ ಇರಬೇಕು, ಪೇಂಟಿಂಗ್‌, ಡ್ರಾಯಿಂಗ್‌, ಕ್ರಾಫ್ಟ್‌ಗಳಿಗೂ ಅವಕಾಶ ನೀಡಿ. 
icon

(7 / 9)

ರಿಟರ್ನ್‌ ಗಿಫ್ಟ್‌:  ಒಮ್ಮೆ ಸಮ್ಮರ್‌ ಕ್ಯಾಂಪ್‌ ಮುಗಿಯಿತು ಎಂದಾಗ ರಿಟರ್ನ್‌ ಗಿಫ್ಟ್‌ ಕೊಡಲು ಮರೆಯಬೇಡಿ. ಅಲ್ಲದೇ ಕ್ಯಾಂಪ್‌ನಲ್ಲಿ ಕಾಂಪಿಟಿಷನ್‌ಗಳನ್ನು ಆಯೋಜಿಸಿ ಅದಕ್ಕೂ ಗಿಫ್ಟ್‌ಗಳನ್ನು ನೀಡಿ.   
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಇತರ ಗ್ಯಾಲರಿಗಳು