ಕೇರಳ ಶಾಲೆಗಳಲ್ಲಿ ವಾಟರ್ ಬ್ರೇಕ್ ಮರುಜಾರಿ; ಏನಿದು ಯೋಜನೆ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರೇಷನ್ ವಿರಾಮದ ಅಗತ್ಯವನ್ನ ತಿಳಿಯಿರಿ
- Water Bell in Kerala Schools: ಕೇರಳದ ಶಾಲೆಗಳಲ್ಲಿ ವಾಟರ್ ಬೆಲ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗಿದೆ. ಏನಿದು ವಾಟರ್ ಬೆಲ್, ಇದರಿಂದ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ ಅನ್ನೋದರ ಮಾಹಿತಿ ಇಲ್ಲಿದೆ.
- Water Bell in Kerala Schools: ಕೇರಳದ ಶಾಲೆಗಳಲ್ಲಿ ವಾಟರ್ ಬೆಲ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗಿದೆ. ಏನಿದು ವಾಟರ್ ಬೆಲ್, ಇದರಿಂದ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ ಅನ್ನೋದರ ಮಾಹಿತಿ ಇಲ್ಲಿದೆ.
(1 / 6)
ದಕ್ಷಿಣ ಭಾರತದಲ್ಲಿ ಸುಡು ಬಿಸಿಲಿಗೆ ಜನರು ನಲುಗಿ ಹೋಗುತ್ತಿದ್ದು, ಮನೆಯಿಂದ ಹೊರ ಬರೋದಿಕ್ಕೂ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಾಪಮಾನ ಏರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗದಂತೆ ಕೇರಳ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
(2 / 6)
ಕೇರಳ ಶಾಲೆಗಳಲ್ಲಿ ವಾಟರ್ ಬೆಲ್ ವ್ಯವಸ್ಥೆಯನ್ನು ಮರು ಜಾರಿ ಮಾಡಲಾಗಿದೆ. ತರಗತಿಗಳ ಸಮಯದಲ್ಲಿ ವಿದ್ಯಾರ್ಥಿಗಳು ಸಮರ್ಪಕವಾದ ಹೈಡ್ರೀಕರಣವನ್ನು ಹೊಂದುವಂತೆ ಮಾಡುವುದೇ ಇದರ ಉದ್ದೇಶವಾಗಿದೆ.
(3 / 6)
ತಾಪಮಾನ ಹೆಚ್ಚಾದ ಪರಿಣಾಮ 2019ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕೇರಳ ಪಡೆದುಕೊಂಡಿತ್ತು. ಇದೀಗ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವಾಟರ್ ಬೆಲ್ ವ್ಯವಸ್ಥೆಯನ್ನ ಮರುಜಾರಿ ಮಾಡಿದೆ.
(4 / 6)
ಬಿಸಿಲಿನಿಂದಾಗಿ ವಿದ್ಯಾರ್ಥಿಗಳು ಡಿಹೈಡ್ರೇಷನ್ ಆಗದಂತೆ ತಡೆಯುವುದು, ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ
(5 / 6)
ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಅಗತ್ಯ ನೀರು ಕುಡಿಯಲು ಪ್ರೇರಿಸುವ ವ್ಯವಸ್ಥೆ ಇದಾಗಿದೆ. ಶಾಲಾ ಅವಧಿಯಲ್ಲಿ ದಿನಕ್ಕೆ 2 ಬಾರಿ ಅಂದರೆ ಬೆಳಗ್ಗೆ 10.30 ಮತ್ತು ಮಧ್ಯಾಹ್ನ 2.30ಕ್ಕೆ ಬೆಲ್ ಹೊಡೆದಾಗ 5 ನಿಮಿಷಗಳ ಕಾಲ ವಿದ್ಯಾರ್ಥಿಗಳು ನೀರು ಕುಡಿಯಬಹುದು.
ಇತರ ಗ್ಯಾಲರಿಗಳು