ಬೆಳಗ್ಗೆ ಬೇಗ ಅಥವಾ ರಾತ್ರಿ; ಪರೀಕ್ಷೆಗೆ ಓದಲು ಸೂಕ್ತ ಸಮಯ ಯಾವುದು, ಯಾವಾಗ ಓದಿದರೆ ನೆನಪಿಟ್ಟುಕೊಳ್ಳಲು ಸಾಧ್ಯ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಳಗ್ಗೆ ಬೇಗ ಅಥವಾ ರಾತ್ರಿ; ಪರೀಕ್ಷೆಗೆ ಓದಲು ಸೂಕ್ತ ಸಮಯ ಯಾವುದು, ಯಾವಾಗ ಓದಿದರೆ ನೆನಪಿಟ್ಟುಕೊಳ್ಳಲು ಸಾಧ್ಯ?

ಬೆಳಗ್ಗೆ ಬೇಗ ಅಥವಾ ರಾತ್ರಿ; ಪರೀಕ್ಷೆಗೆ ಓದಲು ಸೂಕ್ತ ಸಮಯ ಯಾವುದು, ಯಾವಾಗ ಓದಿದರೆ ನೆನಪಿಟ್ಟುಕೊಳ್ಳಲು ಸಾಧ್ಯ?

  • ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಕೂಡಾ ಈಗ ಪರೀಕ್ಷೆಯ ಚಿಂತೆಯಲ್ಲೇ ಇರುತ್ತಾರೆ. ಓದುವುದು, ಮನನ ಮಾಡುವ ಮೂಲಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಪೋಷಕರು ಕೂಡಾ ಒತ್ತಡ ಅನುಭವಿಸುತ್ತಾರೆ. ಈ ನಡುವೆ ಓದಲು ಸೂಕ್ತ ಸಮಯ ಯಾವುದು ಎಂಬ ಗೊಂದಲ ಹಲವರಿಗಿದೆ.

ವಿದ್ಯಾರ್ಥಿಗಳು ಒಂದೊಂದು ಸಮಯದಲ್ಲಿ ಓದಲು ಇಷ್ಟಪಡುತ್ತಾರೆ. ಬೆಳಗ್ಗೆ, ಸಂಜೆ ಅಥವಾ ರಾತ್ರಿ, ಇದರಲ್ಲಿ ಯಾವ ಸಮಯ ಓದಿದರೆ ಒಳ್ಳೆಯದು ಎಂಬ ಗೊಂದಲವೂ ಹಲವರಿಗಿದೆ.
icon

(1 / 6)

(pexels)

ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಮುಂಚಿತವಾಗಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ಪಠ್ಯವನ್ನು ಓದಿ ಪೂರ್ಣಗೊಳಿಸಲು ಹಗಲು ರಾತ್ರಿ ಅಧ್ಯಯನ ಮಾಡುತ್ತಾರೆ. ಆದರೆ, ಎಷ್ಟೇ ಓದಿದರೂ ಕೆಲವೊಬ್ಬರಿಗೆ ಅರ್ಥವಾಗುವುದಿಲ್ಲ. ಓದಿದ್ದನ್ನು ಗ್ರಹಿಸುವ ಸಾಮರ್ಥ್ಯ ಕಡಿಮೆ ಇರುತ್ತದೆ. ಅಂಥಾ ಸಮಯದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಓದುವುದು ಒಳ್ಳೆಯದು.
icon

(2 / 6)

ಅನೇಕ ಅಧ್ಯಯನಗಳ ಪ್ರಕಾರ, ದಿನದ ಆರಂಭದಲ್ಲಿ ಅಧ್ಯಯನ ಮಾಡುವುದು ಉತ್ತಮ. ವಿಶೇಷವಾಗಿ ಬೆಳಗ್ಗೆ ಬೇಗನೆ ಎದ್ದು ಓದಿದರೆ ಅರ್ಥವಾಗುತ್ತದೆ. ಏಕೆಂದರೆ, ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ದೇಹಕ್ಕೆ ವಿಶ್ರಾಂತಿ ಸಿಕ್ಕಂತಾಗುತ್ತದೆ. ಆಗ ಮಾನವ ದೇಹದ ಶಕ್ತಿಯ ಮಟ್ಟವು ಹೆಚ್ಚಾಗಿರುತ್ತದೆ. ಹೀಗಾಗಿ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬಹುದು. ಶ್ರದ್ಧೆಯಿಂದ ಓದಿದರೆ ನೆನಪಿನಲ್ಲಿ ಉಳಿಯುತ್ತದೆ.
icon

(3 / 6)

ಕೆಲವು ಅಧ್ಯಯನಗಳ ಪ್ರಕಾರ, ಮೆದುಳಿನ ಸಾಮರ್ಥ್ಯವು ಬೆಳಗ್ಗೆ 4ರಿಂದ 9 ಗಂಟೆಯವರೆಗ ಮತ್ತು ಸಂಜೆ 4 ರಿಂದ 10ರವರೆಗೆ ಅತ್ಯಧಿಕವಾಗಿರುತ್ತದೆ ಎಂದು ಹೇಳಿವೆ. ಹೊಸದನ್ನು ಓದಲು ಇದು ಸೂಕ್ತ ಸಮಯ. ಪ್ರಾತಃಕಾಲ ಓದಲು ಪ್ರಶಾಂತ ಸಮಯವಾಗಿದೆ.
icon

(4 / 6)

ಪರೀಕ್ಷೆಯು ಸಂಪೂರ್ಣವಾಗಿ ನಿಮ್ಮ ಸ್ವಂತ ಆತ್ಮವಿಶ್ವಾಸದ ಮೇಲೆ ಇರುತ್ತದೆ. ನಿಮ್ಮ ಮೇಲೆ ನಂಬಿಕೆ ಇಟ್ಟು ಓದಬೇಕು. ಇಡೀ ದಿನ ಓದುತ್ತಾ ಕೂರುವ ಬದಲಿಗೆ, ಓದಿದ ಸಮಯದಲ್ಲಿ ಗುಣಮಟ್ಟದ ಓದು ಸಾಧ್ಯವಾಗುವಂತಿರಬೇಕು. ಪರೀಕ್ಷೆಯ ದಿನಗಳಲ್ಲಿ ಅತಿಯಾಗಿ ನಿದ್ದೆಗೆಟ್ಟು ಓದುವುದು ಸರಿಯಲ್ಲ. ಆಗ ದೇಹಕ್ಕೆ ಸರಿಯಾಗಿ ವಿಶ್ರಾಂತಿ ಸಿಗಬೇಕು. ಸಮತೋಲಿತ ಆಹಾರ ಸೇವಿಸಿ ದೇಹ ಶಕ್ತಿಯುತವಾಗಿರಬೇಕು.
icon

(5 / 6)

ವಾಸ್ತವವಾಗಿ ಎಲ್ಲವೂ ನಿಮ್ಮ ವೈಯಕ್ತಿಕ ಸಾಮರ್ಥ್ಯ ಹಾಗೂ ದೇಹದ ಮೇಲೆ ಅವಲಂಬಿತವಾಗಿರುತ್ತದೆ. ಮೊದಲನೆಯದಾಗಿ ಚೆನ್ನಾಗಿ ನಿದ್ದೆ ಆಗಬೇಕು. ವಿದ್ಯಾರ್ಥಿಗಳು ದಿನಕ್ಕೆ 8ರಿಂದ 9 ಗಂಟೆಗಳ ಕಾಲ ಮಲಗಬೇಕು. ನೀವು ರಾತ್ರಿ ಬೇಗನೆ ಮಲಗಿದರೆ ಬೆಳಗ್ಗೆ ಬೇಗ ಎದ್ದು ಓದುವ ಸಮಯ ಹೊಂದಿಸಬೇಕು. ರಾತ್ರಿ ಬೇಗ ನಿದ್ದೆ ಬರದಿದ್ದರೆ, ಸಂಜೆ ಓದುವ ಸಮಯ ಹೊಂದಿಸಿ ಬೆಳಗ್ಗೆ ಎದ್ದು ಸ್ವಲ್ಪ ಸಮಯ ಹೊಂದಿಸುವುದು ಉತ್ತಮ. (ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಬರಹ)
icon

(6 / 6)

(Pexel)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು