Tejas fighter jet: ಭಾರತದ 'ತೇಜಸ್' ಯುದ್ಧ ವಿಮಾನ ಖರೀದಿಗೆ ಈಜಿಪ್ಟ್, ಅರ್ಜೆಂಟೀನಾ ಸಿದ್ಧ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tejas Fighter Jet: ಭಾರತದ 'ತೇಜಸ್' ಯುದ್ಧ ವಿಮಾನ ಖರೀದಿಗೆ ಈಜಿಪ್ಟ್, ಅರ್ಜೆಂಟೀನಾ ಸಿದ್ಧ!

Tejas fighter jet: ಭಾರತದ 'ತೇಜಸ್' ಯುದ್ಧ ವಿಮಾನ ಖರೀದಿಗೆ ಈಜಿಪ್ಟ್, ಅರ್ಜೆಂಟೀನಾ ಸಿದ್ಧ!

  • ನಮಗೆ 20 ಯುದ್ಧ ವಿಮಾನಗಳ ಅಗತ್ಯವಿದೆ ಎಂದು ಈಜಿಪ್ಟ್ ಹೇಳಿದರೆ, ಮತ್ತೊಂದೆಡೆ ಅರ್ಜೆಂಟೀನಾಗೆ 15 ಹೊಸ ಯುದ್ಧ ವಿಮಾನಗಳು ಬೇಕಿದೆ. ಈ ಎರಡು ದೇಶಗಳಿಗೆ ಯುದ್ಧ ವಿಮಾನಗಳ ಮಾರಾಟ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿದೆ. 

ಈಜಿಪ್ಟ್ ಮತ್ತು ಅರ್ಜೆಂಟೀನಾಕ್ಕೆ ಯಾವ ಯುದ್ಧವಿಮಾನಗಳನ್ನು ಮಾರಾಟ ಮಾಡಬಹುದು? ಭಾರತ ಈಗ ಆ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಈಗಾಗಲೇ ಆ ದೇಶಗಳ ನಿಯೋಗಗಳೊಂದಿಗೆ ಚರ್ಚೆ ಆರಂಭವಾಗಿದೆ. ಭಾರತ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್’ ಅನ್ನು ಈಜಿಪ್ಟ್ ಮತ್ತು ಅರ್ಜೆಂಟೀನಾ ವಾಯುಪಡೆಗೆ ಮಾರಾಟ ಮಾಡಬಹುದೇ ಎಂಬ ಚರ್ಚೆ ನಡೆಯುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್-ಹೆಚ್ಎಎಲ್ ಅಧ್ಯಕ್ಷ ಸಿಬಿ ಅನಂತಕೃಷ್ಣನ್ ಹೇಳಿದ್ದಾರೆ. (ಫೋಟೋ ಫೈಲ್-ANI)
icon

(1 / 5)

ಈಜಿಪ್ಟ್ ಮತ್ತು ಅರ್ಜೆಂಟೀನಾಕ್ಕೆ ಯಾವ ಯುದ್ಧವಿಮಾನಗಳನ್ನು ಮಾರಾಟ ಮಾಡಬಹುದು? ಭಾರತ ಈಗ ಆ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಈಗಾಗಲೇ ಆ ದೇಶಗಳ ನಿಯೋಗಗಳೊಂದಿಗೆ ಚರ್ಚೆ ಆರಂಭವಾಗಿದೆ. ಭಾರತ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್’ ಅನ್ನು ಈಜಿಪ್ಟ್ ಮತ್ತು ಅರ್ಜೆಂಟೀನಾ ವಾಯುಪಡೆಗೆ ಮಾರಾಟ ಮಾಡಬಹುದೇ ಎಂಬ ಚರ್ಚೆ ನಡೆಯುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್-ಹೆಚ್ಎಎಲ್ ಅಧ್ಯಕ್ಷ ಸಿಬಿ ಅನಂತಕೃಷ್ಣನ್ ಹೇಳಿದ್ದಾರೆ. (ಫೋಟೋ ಫೈಲ್-ANI)(ANI)

ಭಾರತ ಎರಡು ದೇಶಗಳಿಗೆ ವಿಮಾನಗಳನ್ನು ಮಾರಾಟ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈಗ 20 ಯುದ್ಧವಿಮಾನಗಳ ಅಗತ್ಯವಿದೆ ಎಂದು ಈಜಿಪ್ಟ್ ಹೇಳಿದೆ. ಮತ್ತೊಂದೆಡೆ ಅರ್ಜೆಂಟೀನಾಗೆ 15 ಹೊಸ ಯುದ್ಧ ವಿಮಾನಗಳ ಅಗತ್ಯವಿದೆ ಎಂದಿದೆ. ಆದರೂ ಖರೀದಿಸುವ ಬಗ್ಗೆ ಅಂತಿಮ ಒಪ್ಪಂದ ಆಗಿಲ್ಲ. (ಫೋಟೋ-ಬ್ಲೂಮ್ ಬರ್ಗ್)
icon

(2 / 5)

ಭಾರತ ಎರಡು ದೇಶಗಳಿಗೆ ವಿಮಾನಗಳನ್ನು ಮಾರಾಟ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈಗ 20 ಯುದ್ಧವಿಮಾನಗಳ ಅಗತ್ಯವಿದೆ ಎಂದು ಈಜಿಪ್ಟ್ ಹೇಳಿದೆ. ಮತ್ತೊಂದೆಡೆ ಅರ್ಜೆಂಟೀನಾಗೆ 15 ಹೊಸ ಯುದ್ಧ ವಿಮಾನಗಳ ಅಗತ್ಯವಿದೆ ಎಂದಿದೆ. ಆದರೂ ಖರೀದಿಸುವ ಬಗ್ಗೆ ಅಂತಿಮ ಒಪ್ಪಂದ ಆಗಿಲ್ಲ. (ಫೋಟೋ-ಬ್ಲೂಮ್ ಬರ್ಗ್)(Bloomberg)

ಈ ಎರಡು ದೇಶಗಳಿಗೆ ಭಾರತದ ಯುದ್ಧ ವಿಮಾನಗಳನ್ನು  ಖರೀಸಲಿವೆ ಎಂಬ ಭರವಸೆ ಇದೆ. ಮಲೇಷ್ಯಾಕ್ಕೆ ವಿಮಾನಗಳನ್ನು ಮಾರಾಟ ಮಾಡುವ ಯೋಜನೆ ಈಗಾಗಲೇ ನನೆಗುದಿಗೆ ಬಿದ್ದಿದೆ. ಕೊರಿಯಾದ ಸಂಸ್ಥೆಯು ಹೆಚ್‌ಎಎಲ್ ಜೊತೆಗಿನ ಒಪ್ಪಂದದಲ್ಲಿ ಹಿನ್ನಡೆಯಾಗಿತ್ತು. ಆದರೆ ಸದ್ಯಕ್ಕೆ ಈಜಿಪ್ಟ್ ಮತ್ತು ಅರ್ಜೆಂಟೀನಾ ಮೇಲೆ ಭಾರತ ಕಣ್ಣಿಟ್ಟಿದೆ. (ಫೈಲ್ ಫೋಟೋ: ಪಿಟಿಐ)
icon

(3 / 5)

ಈ ಎರಡು ದೇಶಗಳಿಗೆ ಭಾರತದ ಯುದ್ಧ ವಿಮಾನಗಳನ್ನು  ಖರೀಸಲಿವೆ ಎಂಬ ಭರವಸೆ ಇದೆ. ಮಲೇಷ್ಯಾಕ್ಕೆ ವಿಮಾನಗಳನ್ನು ಮಾರಾಟ ಮಾಡುವ ಯೋಜನೆ ಈಗಾಗಲೇ ನನೆಗುದಿಗೆ ಬಿದ್ದಿದೆ. ಕೊರಿಯಾದ ಸಂಸ್ಥೆಯು ಹೆಚ್‌ಎಎಲ್ ಜೊತೆಗಿನ ಒಪ್ಪಂದದಲ್ಲಿ ಹಿನ್ನಡೆಯಾಗಿತ್ತು. ಆದರೆ ಸದ್ಯಕ್ಕೆ ಈಜಿಪ್ಟ್ ಮತ್ತು ಅರ್ಜೆಂಟೀನಾ ಮೇಲೆ ಭಾರತ ಕಣ್ಣಿಟ್ಟಿದೆ. (ಫೈಲ್ ಫೋಟೋ: ಪಿಟಿಐ)(PTI)

ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಸೋಮವಾರ ಬೆಂಗಳೂರಿನ ಯಲಹಂಕಾ ಏರ್ ಬೇಸ್ ನಲ್ಲಿ ಉಪಸ್ಥಿತರಿದ್ದರು. ಏರೋ ಇಂಡಿಯಾ ಪ್ರದರ್ಶನದ ಮುನ್ನಾದಿನದಂದು, ಭಾರತವು ಪ್ರಸ್ತುತ ವಿಮಾನಗಳನ್ನು ರಫ್ತು ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ವಾಯುಪಡೆಯು ತನ್ನದೇ ಆದ ಆವಿಷ್ಕಾರಗಳನ್ನು ಅಳವಡಿಸಲು ಯೋಜಿಸುತ್ತಿದೆ. (ಫೈಲ್ ಫೋಟೋ: ಎಪಿ)
icon

(4 / 5)

ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಸೋಮವಾರ ಬೆಂಗಳೂರಿನ ಯಲಹಂಕಾ ಏರ್ ಬೇಸ್ ನಲ್ಲಿ ಉಪಸ್ಥಿತರಿದ್ದರು. ಏರೋ ಇಂಡಿಯಾ ಪ್ರದರ್ಶನದ ಮುನ್ನಾದಿನದಂದು, ಭಾರತವು ಪ್ರಸ್ತುತ ವಿಮಾನಗಳನ್ನು ರಫ್ತು ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ವಾಯುಪಡೆಯು ತನ್ನದೇ ಆದ ಆವಿಷ್ಕಾರಗಳನ್ನು ಅಳವಡಿಸಲು ಯೋಜಿಸುತ್ತಿದೆ. (ಫೈಲ್ ಫೋಟೋ: ಎಪಿ)(AP)

ಈ ಹಿಂದೆ ಏರೋ ಇಂಡಿಯಾ-2021ರಲ್ಲಿ ರಕ್ಷಣಾ ಸಚಿವಾಲಯವು ಭಾರತೀಯ ವಾಯು ಸೇನೆಗಾಗಿ 83 LCA Mk-1A ಜೆಟ್‌ಗಳಿಗಾಗಿ 48,000 ಕೋಟಿ ಮೌಲ್ಯದ ಗುತ್ತಿಗೆಯನ್ನು ಹೆಚ್ಎಎಲ್ ಗೆ ನೀಡಿತ್ತು. ಆ ಕೆಲಸವನ್ನು ಈಗ ಹೆಚ್‌ಎಎಲ್‌ ವೇಗವಾಗಿ ಹೆಚ್ಚಿಸುತ್ತಿದೆ. ಮೊದಲ Mk-1A ವಿಮಾನವನ್ನು ಫೆಬ್ರವರಿ 2024 ರಲ್ಲಿ ವಾಯುಪಡೆಗೆ ಹಸ್ತಾಂತರಿಸಲಾಗುತ್ತದೆ. ಉಳಿದ ವಿಮಾನಗಳನ್ನು 2029 ರ ವೇಳೆಗೆ ಸೇನೆಗೆ ಸೇರಿಸಲಾಗುತ್ತದೆ ಎಂದು ಹೆಚ್‌ಎಎಲ್ ಮುಖ್ಯಸ್ಥರು ಹೇಳಿದ್ದಾರೆ. (ಫೈಲ್ ಫೋಟೋ: ಎಪಿ)
icon

(5 / 5)

ಈ ಹಿಂದೆ ಏರೋ ಇಂಡಿಯಾ-2021ರಲ್ಲಿ ರಕ್ಷಣಾ ಸಚಿವಾಲಯವು ಭಾರತೀಯ ವಾಯು ಸೇನೆಗಾಗಿ 83 LCA Mk-1A ಜೆಟ್‌ಗಳಿಗಾಗಿ 48,000 ಕೋಟಿ ಮೌಲ್ಯದ ಗುತ್ತಿಗೆಯನ್ನು ಹೆಚ್ಎಎಲ್ ಗೆ ನೀಡಿತ್ತು. ಆ ಕೆಲಸವನ್ನು ಈಗ ಹೆಚ್‌ಎಎಲ್‌ ವೇಗವಾಗಿ ಹೆಚ್ಚಿಸುತ್ತಿದೆ. ಮೊದಲ Mk-1A ವಿಮಾನವನ್ನು ಫೆಬ್ರವರಿ 2024 ರಲ್ಲಿ ವಾಯುಪಡೆಗೆ ಹಸ್ತಾಂತರಿಸಲಾಗುತ್ತದೆ. ಉಳಿದ ವಿಮಾನಗಳನ್ನು 2029 ರ ವೇಳೆಗೆ ಸೇನೆಗೆ ಸೇರಿಸಲಾಗುತ್ತದೆ ಎಂದು ಹೆಚ್‌ಎಎಲ್ ಮುಖ್ಯಸ್ಥರು ಹೇಳಿದ್ದಾರೆ. (ಫೈಲ್ ಫೋಟೋ: ಎಪಿ)(AP)


ಇತರ ಗ್ಯಾಲರಿಗಳು