ಫೆನ್ಸಿಂಗ್ ಕ್ರೀಡೆ: ಈಜಿಫ್ಟ್ನ 7 ತಿಂಗಳ ಗರ್ಭಿಣಿಯೊಬ್ಬರು ಸ್ಪರ್ಧೆ; 16ನೇ ಸುತ್ತಿನಲ್ಲಿ ಸೋತರೋ, ಗೆದ್ದರೋ...
- Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನ ಫೆನ್ಸರ್ ಸ್ಪರ್ಧೆಯಲ್ಲಿ ಈಜಿಪ್ಟ್‌ನ ಗರ್ಭಿಣಿಯೊಬ್ಬರು ಭಾಗವಹಿಸಿದ್ದರು. ಆದರೆ ಮೊದಲ ಪಂದ್ಯದಲ್ಲಿ ಗೆದ್ದರೂ 16ನೇ ಸುತ್ತಿನಲ್ಲಿ ನಿರ್ಗಮಿಸಿದರು.
- Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನ ಫೆನ್ಸರ್ ಸ್ಪರ್ಧೆಯಲ್ಲಿ ಈಜಿಪ್ಟ್‌ನ ಗರ್ಭಿಣಿಯೊಬ್ಬರು ಭಾಗವಹಿಸಿದ್ದರು. ಆದರೆ ಮೊದಲ ಪಂದ್ಯದಲ್ಲಿ ಗೆದ್ದರೂ 16ನೇ ಸುತ್ತಿನಲ್ಲಿ ನಿರ್ಗಮಿಸಿದರು.
(1 / 6)
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಏಳು ತಿಂಗಳ ಗರ್ಭಿಣಿಯೊಬ್ಬರು ಕಣಕ್ಕಿಳಿದಿದ್ದು, ತಾನು ಸ್ಪರ್ಧಿಸಿದ್ದ ಫೆನ್ಸರ್ ಸ್ಪರ್ಧೆಯಲ್ಲಿ ರೌಂಡ್-16 ರಲ್ಲಿ ಸೋತು ಹೊರ ಬಿದ್ದಿದ್ದಾರೆ.
(AP)(2 / 6)
ಮಹಿಳೆಯರ ಫೆನ್ಸರ್ ವೈಯಕ್ತಿಕ ಸ್ಪರ್ಧೆಯ 16ನೇ ಸುತ್ತಿನಲ್ಲಿ ಪರಾಭವಗೊಂಡ ಈಜಿಪ್ಟ್‌ನ ಫೆನ್ಸರ್ ನಾಡಾ ಹಫೀಜ್ ಅವರೇ ತಾನು ಗರ್ಭಿಣಿ ಎಂದು ಬಹಿರಂಗಪಡಿಸಿದ್ದಾರೆ.
(3 / 6)
ಅಮೆರಿಕದ ಎಲಿಜಬೆತ್ ಟಾರ್ಟಕೋವ್‌ಸ್ಕಿ ವಿರುದ್ಧ ನಾಡಾ ಹಫೀಜ್ ತಮ್ಮ ಮೊದಲ ಪಂದ್ಯವನ್ನು 15-13 ಅಂತರದಿಂದ ಗೆದ್ದರು.
(4 / 6)
ನಂತರ ಜುಲೈ 29ರಂದು ಸೋಮವಾರ ಫ್ರೆಂಚ್ ರಾಜಧಾನಿಯ ಗ್ರ್ಯಾಂಡ್ ಪಲೈಸ್‌ನಲ್ಲಿ ನಡೆದ 16ರ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೋನ್ ಹಯಂಗ್ ವಿರುದ್ಧ ಸೋತರು.
(AP)(5 / 6)
ಸೋತ ಕೆಲವು ಗಂಟೆಗಳ ನಂತರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಾಡಾ ಹಫೀಜ್, ನಾನು 7 ತಿಂಗಳ ಗರ್ಭಿಣಿ ಒಲಿಂಪಿಯನ್ ಎಂದು ಪೋಸ್ಟ್ ಹಾಕಿದ್ದಾರೆ.
(REUTERS)ಇತರ ಗ್ಯಾಲರಿಗಳು