Eid milad 2024: ಕರ್ನಾಟಕದಲ್ಲಿ ಈದ್ ಮಿಲಾದ್ ಸಂಭ್ರಮ, ಮೆರವಣಿಗೆ, ಸೌಹಾರ್ದ ಕಾರ್ಯಕ್ರಮಗಳ ಆಯೋಜನೆ ಹೀಗಿತ್ತು photos
Eid milad 2024 ಈದ್ ಮಿಲಾದ್ ಹಬ್ಬವನ್ನು ಮುಸ್ಲೀಂ ಬಾಂಧವರ ಜತೆಗೆ ಹಿಂದೂಗಳೂ ಕೂಡಿ ಅಲ್ಲಲ್ಲಿ ಸಡಗರ, ಸಂಭ್ರಮದಿಂದಲೇ ಕರ್ನಾಟಕದ ನಾನಾ ಭಾಗಗಳಲ್ಲಿ ಆಚರಿಸಿದರು. ಈ ಕ್ಷಣಗಳು ಹೀಗಿದ್ದವು.
(1 / 10)
ಶಿವಮೊಗ್ಗ ಜಿಲ್ಲೆ ಹೊಸನಗರ ಪಟ್ಟಣದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮುಸ್ಲೀಂ ಬಾಂಧವರು ಮೆರವಣಿಗೆ ನಡೆಸಿದರು.
(2 / 10)
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
(3 / 10)
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಆಯೋಜನೆಗೊಂಡಿದ್ದ ಈದ್ ಮಿಲಾದ್ ನಲ್ಲಿ ಭಾಗಿಯಾದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಮಸೀದಿ ಸಮಿತಿಯವರು ಅಭಿನಂದಿಸಿದರು.
(4 / 10)
ಅರಸಿಕೆರೆಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮಗಳ ವೇಳೆ ದರ್ಗಾಕ್ಕೆ ಮಾಜಿ ಸಚಿವ ಗಂಡಸಿ ಶಿವರಾಂ ಭೇಟಿ ನೀಡಿ ಗೌರವ ಸಮರ್ಪಿಸಿದರು.
(5 / 10)
ಕೊಪ್ಪಳ ತಾಲೂಕು ಗಿಣಿಗೇರ ಗ್ರಾಮದಲ್ಲಿ ಅದ್ದೂರಿಯಾಗಿ ಈದ್ ಮಿಲಾದ್ ಹಬ್ಬದ ಅಂಗವಾಗಿ ರಾಜ ಬೀದಿಯಲ್ಲಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು
(6 / 10)
ಕೊಪ್ಪಳದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಖುದ್ದು ಟ್ರಾಕ್ಟರ್ ಚಲಾಯಿಸುವ ಮೂಲಕ ಭಾಗಿಯಾದರು,
(7 / 10)
ಮಂಗಳೂರು ಹೊರ ವಲಯದ ಉಳ್ಳಾಲದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಭಾಗಿಯಾದರು.
(8 / 10)
ಗದಗ ಜಿಲ್ಲೆ ನರಗುಂದ ನಗರದ ಅರ್ಭಾಣ ಓಣಿಯ ಪತ್ತೆ ಮಜೀದ್ ಆವರಣದ ಹಾಶಿಮ್ ಫೀರ್ ದರ್ಗಾ ಮತ್ತು ಹಜರತ್ ಮಹಿಬೂಬ ಸುಭಾನಿ ದರ್ಗಾದಲ್ಲಿ ಫಾತೆಖಾನೇ ಮಾಡಿ ಧ್ವಜ ನೆರವೇರಿಸಿದರು . ಅರ್ಭಾಣ ಓಣಿಯ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ್ ದಿಂದ ಸಮಸ್ತ ಹಿಂದೂ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್' ಹಬ್ಬವು ಆಚರಣೆ ಮಾಡಲಾಯಿತು.
(9 / 10)
ತುಮಕೂರು ನಗರದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಮತ್ತಿತರರು ಭಾಗಿಯಾಗಿ ಶುಭ ಕೋರಿದರು.
ಇತರ ಗ್ಯಾಲರಿಗಳು