Bakrid Celebration: ಬಕ್ರೀದ್‌ ಸಂಭ್ರಮಕ್ಕೆ ಕೈಗಳ ಅಂದ ಹೆಚ್ಚಿಸಲಿ ಮೆಹಂದಿ ವಿನ್ಯಾಸ; ಇಲ್ಲಿದೆ ವೆರೈಟಿ ಡಿಸೈನ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bakrid Celebration: ಬಕ್ರೀದ್‌ ಸಂಭ್ರಮಕ್ಕೆ ಕೈಗಳ ಅಂದ ಹೆಚ್ಚಿಸಲಿ ಮೆಹಂದಿ ವಿನ್ಯಾಸ; ಇಲ್ಲಿದೆ ವೆರೈಟಿ ಡಿಸೈನ್ಸ್‌

Bakrid Celebration: ಬಕ್ರೀದ್‌ ಸಂಭ್ರಮಕ್ಕೆ ಕೈಗಳ ಅಂದ ಹೆಚ್ಚಿಸಲಿ ಮೆಹಂದಿ ವಿನ್ಯಾಸ; ಇಲ್ಲಿದೆ ವೆರೈಟಿ ಡಿಸೈನ್ಸ್‌

  • Eid ul Adha 2023: ನಾಡಿನಾದ್ಯಂತ ಮುಸ್ಲಿಮರು ನಾಳೆ (ಜೂನ್‌ 29) ಬಕ್ರೀದ್‌ ಆಚರಿಸುತ್ತಾರೆ. ಹಬ್ಬದ ಸಂಭ್ರಮಕ್ಕೆ ಕೈಗಳನ್ನು ಮೆಹಂದಿಯಿಂದ ಸಿಂಗರಿಸಿಕೊಳ್ಳುವುದು ವಾಡಿಕೆ. ಈ ಬಕ್ರೀದ್‌ಗೆ ಯಾವ ರೀತಿ ಮೆಹಂದಿ ಅಲಂಕಾರ ಮಾಡಿಕೊಳ್ಳುವುದು ಎಂದು ಚಿಂತಿಸುತ್ತಿದ್ದೀರಾ? ಇಲ್ಲಿದೆ ನೋಡಿ ವೆರೈಟಿ ಡಿಸೈನ್ಸ್‌.

ಈದ್‌-ಉಲ್‌-ಅದ್ಹಾ ಅಥವಾ ಬಕ್ರೀದ್‌ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದು. ಪ್ರತಿವರ್ಷವು ಈ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ, ಭಾವದಿಂದ ಆಚರಿಸುತ್ತಾರೆ. ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿಯುವುದು ಈ ಹಬ್ಬದ ವಾಡಿಕೆ. ಹೊಸ ಬಟ್ಟೆ ಹಾಗೂ ಮೆಹಂದಿ ವಿನ್ಯಾಸದ ರಂಗು ಕೂಡ ಹಬ್ಬದ ಭಾಗಗಳಲ್ಲೊಂದು. ಈ ವರ್ಷ ಬಕ್ರೀದ್‌ಗೆ ನೀವು ಯಾವ ರೀತಿ ಮೆಹಂದಿ ಡಿಸೈನ್‌ ಹಾಕಿಕೊಳ್ಳುವುದು ಎಂದು ಚಿಂತಿಸುತ್ತಿದ್ದರೆ ಇಲ್ಲಿ ನೋಡಿ. ಸರಳ, ಸಂಕೀರ್ಣ ವಿನ್ಯಾಸದಿಂದ ಸುಂದರ, ಆಕರ್ಷಕ ವಿನ್ಯಾಸದ ಮೆಹಂದಿ ಡಿಸೈನ್‌ಗಳು ಇಲ್ಲಿವೆ. 
icon

(1 / 6)

(Pinterest)

ಮಿನಿಮಲಿಸ್ಟಿಕ್‌ ಡಿಸೈನ್‌: ಇದು ಹೆಸರೆ ಹೇಳುವಂತೆ ಸರಳವಾಗಿ ಹಾಗೂ ಅಲ್ಲಲ್ಲಿ ಬಿಡಿಸಿಕೊಳ್ಳುವ ಚಿತ್ತಾರ. ನೀವು ಸರಳ ಹಾಗೂ ಕ್ಲಾಸಿ ಲುಕ್‌ ಇಷ್ಟ ಪಡುವವರಾದರೆ ಈ ಡಿಸೈನ್‌ ಆರಿಸಿಕೊಳ್ಳಬಹುದು. ಇದು ಕೈಗಳ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.
icon

(2 / 6)

ಫುಲ್‌ ಹ್ಯಾಂಡ್‌ ಮೆಹಂದಿ: ಇದು ಸಾಮಾನ್ಯವಾಗಿ ಎಲ್ಲಾ ಕಾಲಕ್ಕೂ, ಎಲ್ಲಾ ರೀತಿಯ ಹಬ್ಬ, ಕಾರ್ಯಕ್ರಮಗಳಿಗೂ ಸಲ್ಲುವ ಡಿಸೈನ್‌. ಇಂಡಿಯನ್‌, ಅರೇಬಿಕ್‌ ವಿನ್ಯಾಸದ ಫುಲ್‌ ಹ್ಯಾಂಡ್‌ ಮೆಹಂದಿಯನ್ನು ನೀವು ಆರಿಸಿಕೊಳ್ಳಬಹುದು. ಇದು ಕೈಗಳ ಅಂದ ಹೆಚ್ಚಿಸಲು ಹೇಳಿ ಮಾಡಿಸಿದ್ದು. 
icon

(3 / 6)

ಅಂಗೈ ಡಿಸೈನ್‌: ನೀವು ಕೈತುಂಬಾ ಆಭರಣ ಧರಿಸುವವರಾದರೆ ಅಂಗೈಗೆ ಮಾತ್ರ ಚೆಂದದ ವಿನ್ಯಾಸದ ಮೆಹಂದಿ ಡಿಸೈನ್‌ ಬಿಡಿಸಿಕೊಳ್ಳಬಹುದು. ಅಂಗೈನ ಅಂದ ಹೆಚ್ಚಿಸುವ ಹಲವು ವಿನ್ಯಾಸಗಳು ಇಂಡಿಯನ್‌ ಹಾಗೂ ಅರೇಬಿಕ್‌ ಶೈಲಿಯಲ್ಲಿದೆ. ಇದನ್ನು ಧರಿಸಿ ಕೈತುಂಬಾ ಆಭರಣ ಧರಿಸಬಹುದು.  
icon

(4 / 6)

ಅಂಗೈ ಹಿಂಭಾಗದ ಡಿಸೈನ್‌: ಈ ಬಕ್ರೀದ್‌ಗೆ ಅಂಗೈನ ಹಿಂಭಾಗಕ್ಕೆ ಮಾತ್ರ ಸರಳ ವಿನ್ಯಾಸದ ಮೆಹಂದಿ ಹಚ್ಚಿಕೊಳ್ಳುವ ಮೂಲಕ ಸಂಭ್ರಮಿಸಬಹುದು. ಸರಳ ಹಾಗೂ ಸಂಕೀರ್ಣ ವಿನ್ಯಾಸವು ಇದಕ್ಕೆ ಹೊಂದುತ್ತದೆ. 
icon

(5 / 6)

ಅರ್ಧ ಕೈ ವಿನ್ಯಾಸ: ಕೆಲವೊಂದು ಮೆಹಂದಿ ವಿನ್ಯಾಸಗಳು ಮಣಿಕಟ್ಟಿನ ಮೇಲೆ ಮಾತ್ರ ಬಿಡಿಸಲಾಗುತ್ತದೆ. ಇವು ಸರಳವಾಗಿ ಕಂಡರೂ ಸುಂದರವಾಗಿರುತ್ತವೆ. ಇದನ್ನು ಸರಳವಾಗಿ ಹಾಗೂ ತಕ್ಷಣಕ್ಕೆ ವಿನ್ಯಾಸ ಮಾಡಬಹುದಾಗಿದೆ. 
icon

(6 / 6)

ಇತರ ಗ್ಯಾಲರಿಗಳು