ಜಮ್ಮು ಕಾಶ್ಮೀರದಲ್ಲಿ ದಶಕದ ಬಳಿಕ ವಿಧಾನಸಭೆ ಚುನಾವಣೆ: ಹೀಗಿತ್ತು ಕಣಿವೆ ರಾಜ್ಯದಲ್ಲಿನ ಪ್ರಜಾಪ್ರಭುತ್ವದ ಸಂಭ್ರಮ ಕ್ಷಣಗಳು photos
- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಹತ್ತು ವರ್ಷಗಳ ಬಳಿಕ ಬುಧವಾರ ನಡೆಯಿತು. ಹೀಗಿತ್ತು ಮತದಾನದ ಕ್ಷಣಗಳು.
- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಹತ್ತು ವರ್ಷಗಳ ಬಳಿಕ ಬುಧವಾರ ನಡೆಯಿತು. ಹೀಗಿತ್ತು ಮತದಾನದ ಕ್ಷಣಗಳು.
(1 / 9)
ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಮೊದಲ ಹಂತ ಚುನಾವಣೆ ಸಂಭ್ರಮ. 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಾಗ ಮೊಮ್ಮಗನೊಂದಿಗೆ ಆಗಮಿಸಿ ಮತ ಚಲಾಯಿಸಿದ ಹಿರಿಯ ಮಹಿಳೆ.
(2 / 9)
ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಮತದಾನ ಸುಸೂತ್ರವಾಗಿ ನೆರವೇರಿತು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿದರು.
(3 / 9)
ಜಮ್ಮು ಮತ್ತು ಕಾಶ್ಮೀರದ ಹಲವು ಕಡೆ ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಮಹಿಳೆಯರೇ ಚುನಾವಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು.
(4 / 9)
ಬೆಳಗಿನ ಚಳಿ ಹಾಗೂ ಎಳೆ ಬಿಸಿಲನ ನಡುವೆಯೇ ಕಣಿವೆ ರಾಜ್ಯದ ಹಲವು ಕಡೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಸಾಲು ಗಟ್ಟಿ ನಿಂತಿದ್ದುಕಂಡು ಬಂದಿತು.
(5 / 9)
ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಉಗ್ರರ ಉಪಟಳ ಇರುವುದರಿಂದ ಭಾರೀ ಭದ್ರತೆಯನ್ನು ಮತದಾನ ಕೇಂದ್ರಗಳಿಗೆ ಕಲ್ಪಿಸಲಾಗಿತ್ತು.
(7 / 9)
ಜಮ್ಮುವಿನ ಹಲವು ಗ್ರಾಮಾಂತರ ಪ್ರದೇಶಗಳಲ್ಲೂ ಮತದಾನ ಬಿರುಸಾಗಿತ್ತು. ಅಲ್ಲಲ್ಲಿ ಸಾಲಲ್ಲಿ ನಿಂತು ಮತದಾನಕ್ಕಾಗಿ ಕಾಯುತ್ತಿರುವವರ ಸಂಖ್ಯೆಯೂ ಕಾಣ ಸಿಕ್ಕಿತು.
(8 / 9)
ಜಮ್ಮುವಿನ ಪುಲ್ವಾಮ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಸರದಿಯಲ್ಲಿ ನಿಂತಿದ್ದ ಮತದಾರರು ತಮಗೆ ನೀಡಿದ ಮತ ಚೀಟಿಯನ್ನು ಪ್ರದರ್ಶಿಸಿದರು.
ಇತರ ಗ್ಯಾಲರಿಗಳು