ಗಣತಿ ವೇಳೆ ದರ್ಶನ ಕೊಟ್ಟ ಆನೆಗಳು; ಕರ್ನಾಟಕ, ತಮಿಳುನಾಡು, ಕೇರಳದ ಅರಣ್ಯ ಪ್ರದೇಶಗಳಲ್ಲಿ ಕರಿಪಡೆ ಗಣತಿ
ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಆನೆ ಗಣತಿ ಆರಂಭಗೊಂಡಿದ್ದು. ಎರಡನೇ ದಿನವೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಆನೆ ಲೆಕ್ಕದಲ್ಲಿ ತೊಡಗಿದ್ದರು. ಇದರ ಚಿತ್ರನೋಟ ಇಲ್ಲಿದೆ.
(1 / 6)
ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಮೇ 25 ರವರೆಗೆ ವಾರ್ಷಿಕ ಆನೆ ಗಣತಿ ಕಾರ್ಯವನ್ನು ಸಂಘಟಿಸುವ ಮತ್ತು ನಡೆಸುವ ಕಾರ್ಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸತತ ಎರಡನೇ ವರ್ಷವೂ ಮುಂಚೂಣಿಯಲ್ಲಿದ್ದು. ನಾಗರಹೊಳೆ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಆನೆ ಗಣತಿ ನಡೆದಿದೆ.
(2 / 6)
ಹಿಂದಿನ ವರ್ಷದಂತೆ ಈ ಬಾರಿಯೂ ಮೈಸೂರು ಆನೆ ಮೀಸಲು ಪ್ರದೇಶದ ಜತೆಗೆ, 10 ಗಡಿ ಅರಣ್ಯ ವಿಭಾಗಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ., ಕರ್ನಾಟಕದ ಕಾಫಿ ಎಸ್ಟೇಟ್‌ಗಳಾದ ಕೊಡಗು ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ವಾಸಿಸುವ ಆನೆಗಳನ್ನು ಸಹ ಗಣತಿ ಕಾರ್ಯದಲ್ಲಿ ಪರಿಗಣಿಸಲಾಗುತ್ತಿದ್ದು,. ಅರಣ್ಯ ಪ್ರದೇಶದಲ್ಲಿ ಆನೆಗಳು ಹೆಜ್ಜೆಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.
(3 / 6)
ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನಿಗದಿಪಡಿಸಿದ ಸ್ವರೂಪವನ್ನು ಮೌಲ್ಯಮಾಪನಕ್ಕಾಗಿ ಬಳಸಲಾಗುತ್ತದೆ. ಗಣತಿಯಲ್ಲಿ ಎರಡು ವಿಧಾನ. ಒಂದು ನೇರ ಎಣಿಕೆ, ಲದ್ದಿ ವಿಶ್ಲೇಷಣೆ ಮತ್ತು ಆನೆ ಪ್ರೊಫೈಲಿಂಗ್ ಪರೋಕ್ಷ ವಿಧಾನವಾಗಿವೆ. ಐಐಎಸ್‌ಸಿ ಜತೆಗೆ ಆನೆ ತಜ್ಞರು ಸಹ ಈ ಕೆಲಸದಲ್ಲಿ ಭಾಗಿಯಾಗಿದ್ದಾರೆ.ಕೊನೆ ದಿನವಾದ ಭಾನುವಾರ ಆನೆ ಲದ್ದಿ ಮೂಲಕ ಅವುಗಳ ಗಣತಿ ನಡೆಯಲಿದೆ.
(4 / 6)
ಮೈಸೂರು ಆನೆ ಮೀಸಲು ಪ್ರದೇಶ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ಅಭಯಾರಣ್ಯ, ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ, ಕೊಳ್ಳೇಗಾಲ, ಬಿಆರ್‌ಟಿ ಹುಲಿ ಮೀಸಲು ಪ್ರದೇಶ, ಬಂಡೀಪುರ ಹುಲಿ ಮೀಸಲು ಪ್ರದೇಶ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ ಮತ್ತು ಭದ್ರ ಹುಲಿ ಮೀಸಲು ಪ್ರದೇಶಗಳನ್ನು ಒಳಗೊಂಡಿದೆ. ನಾಗರಹೊಳೆಯಲ್ಲಿ ಗಣತಿ ವೇಳೆ ಆನೆಗಳು ಕಂಡು ಬಂದವು,
(5 / 6)
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ಅಭಯಾರಣ್ಯ, ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ, ಬಿಆರ್‌ಟಿ ಹುಲಿ ಮೀಸಲು ಪ್ರದೇಶ, ಬಂಡೀಪುರ ಹುಲಿ ಮೀಸಲು ಪ್ರದೇಶ, ಭದ್ರ ಹುಲಿ ಮೀಸಲು ಪ್ರದೇಶ, ವಿರಾಜಪೇಟೆ, ಮಡಿಕೇರಿ-ವನ್ಯಜೀವಿ ಮತ್ತು ಪ್ರಾದೇಶಿಕ ಹಾಗೂ ಕೋಲಾರದ ಹತ್ತು ಅರಣ್ಯ ವಿಭಾಗಗಳಾಗಿದ್ದು, ಎಲ್ಲೆಡೆ ಗಣತಿ ನಡೆದು ಕೆಲವೆಡೆ ನೇರವಾಗಿ ಆನೆಗಳನ್ನು ಗುರುತಿಸಲಾಗಿದೆ.
ಇತರ ಗ್ಯಾಲರಿಗಳು