Elephant Day 2024: ಮೈಸೂರು ಅರಮನೆ ದ್ವಾರಗಳಿಗೂ ಆನೆಗಳ ಹೆಸರು, ಏನಿದರ ಮಹತ್ವ photos
- ಮೈಸೂರು ಅರಮನೆಗೂ ಆನೆಗಳಿಗೂ ಮರೆಯಲಾಗದ ನಂಟು. ಮೈಸೂರು ಅರಮನೆಯಲ್ಲಿ ದಸರಾ ಹಾಗೂ ಆನೆಗಳ ಜತೆಗೆ ಅಲ್ಲಿನ ಎರಡು ದ್ವಾರಗಳಿಗೆ ಎರಡು ಆನೆಗಳ ಹೆಸರನ್ನೇ ಇಡಲಾಗಿದೆ. ಇದರ ಆಸಕ್ತಿದಾಯಕ ಮಾಹಿತಿ ಇಲ್ಲಿದೆ
- ಮೈಸೂರು ಅರಮನೆಗೂ ಆನೆಗಳಿಗೂ ಮರೆಯಲಾಗದ ನಂಟು. ಮೈಸೂರು ಅರಮನೆಯಲ್ಲಿ ದಸರಾ ಹಾಗೂ ಆನೆಗಳ ಜತೆಗೆ ಅಲ್ಲಿನ ಎರಡು ದ್ವಾರಗಳಿಗೆ ಎರಡು ಆನೆಗಳ ಹೆಸರನ್ನೇ ಇಡಲಾಗಿದೆ. ಇದರ ಆಸಕ್ತಿದಾಯಕ ಮಾಹಿತಿ ಇಲ್ಲಿದೆ
(1 / 7)
ಮೈಸೂರು ಅರಮನೆ ಎಂದರೆ ಹತ್ತಾರು ರೋಚಕ ಕಥೆಗಳ ತಾಣ. ದಸರಾ ಹಾಗೂ ಆನೆಗಳದ್ದಂತೂ ಇನ್ನಷ್ಟು ರೋಚಕ. ಏಕೆಂದರೆ ಮೈಸೂರು ಮಹಾರಾಜರಿಗೆ ಆನೆಗಳೆಂದರೆ ಎಲ್ಲಿಲ್ಲದ ಪ್ರೀತಿ. ಸಾಕಷ್ಟು ಆನೆಗಳು ಅರಮನೆಯಲ್ಲಿ ನೆಲೆ ಕಂಡುಕೊಂಡಿದ್ದವು.
(2 / 7)
ಮೈಸೂರು ಅರಮನೆಯ ಆವರಣದಲ್ಲಿರುವ ಏಳು ದ್ವಾರದಲ್ಲಿ ಎರಡಕ್ಕೆ ಆನೆಗಳ ಹೆಸರನ್ನೇ ಇಡಲಾಗಿದೆ. ಒಂದು ಜಯಮಾರ್ತಾಂಡ ದ್ವಾರ. ಇನ್ನೊಂದು ಜಯರಾಮ ಬಲರಾಮ ದ್ವಾರ. ಬೆಂಗಳೂರು ಊಟಿ ರಸ್ತೆಯ ವಸ್ತು ಪ್ರದರ್ಶನ ಪ್ರಾಧಿಕಾರ ಎದುರು ಇರುವುದೇ ಜಯಮಾರ್ತಾಂಡ ದ್ವಾರ. ಜಯಮಾರ್ತಾಂಡ ಎನ್ನುವ ಆನೆ ಹೆಸರಿನಲ್ಲಿ ಈ ದ್ವಾರವಿದೆ
(3 / 7)
ಜಯಮಾರ್ತಾಂಡ ದ್ವಾರವು ಪೂರ್ವ ಭಾಗದಲ್ಲಿದೆ, ಇದು ಎಲ್ಲಕ್ಕಿಂತ ದೊಡ್ಡದಾಗಿದೆ. ಈ ದ್ವಾರವನ್ನು ಗುಡ್ಡಗಾಡು ಪ್ರದೇಶಗಳಿಗೆ ಪ್ರಯಾಣಿಸಲು ಬಳಸಲಾಗುತ್ತಿತ್ತು. ರಾಜವಂಶದ ಆನೆಗಳು, ಒಂಟೆಗಳು ಮತ್ತು ಕುದುರೆಗಳ ಪ್ರವೇಶಕ್ಕೆ ಬಳಸಲಾಗುವ ಏಕೈಕ ದ್ವಾರವೆಂದರೆ ಜಯಮಾರ್ತಾಂಡ ದ್ವಾರ. ಹೆಚ್ಚುವರಿಯಾಗಿ, ಈ ದೈವಿಕ ಜೀವಿಗಳನ್ನು ಸ್ವಾಗತಿಸಲು ವರ್ಷಕ್ಕೊಮ್ಮೆ ಮಾತ್ರ ಗೇಟ್ ತೆರೆಯಲಾಗುತ್ತದೆ.
(4 / 7)
ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತ ಮೊದಲ ಆನೆ 'ಜಯಮಾರ್ತಾಂಡ'. ಜಯಮಾರ್ತಾಂಡ ಆನೆ ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತಿತ್ತು. ಸುಮಾರು 45 ವರ್ಷ ಈ ಕಾರ್ಯ ನಿಭಾಯಿಸಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಹೀಗಾಗಿಯೇ, ಅರಮನೆಯ ಮುಖ್ಯದ್ವಾರಕ್ಕೆ ಜಯಮಾರ್ತಾಂಡ ದ್ವಾರ ಎಂದು ಹೆಸರಿಡಲಾಗಿದೆ. ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಹಿರಿಮೆ ಜಯಮಾರ್ತಾಂಡ ಆನೆಗೆ. ಈಗಲೂ ಈ ಆನೆಯ ದಾಖಲೆ ಇತಿಹಾಸವಾಗಿದೆ. ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲ ಬಾರಿ ಅಂಬಾರಿಯನ್ನು ಹೊತ್ತಿತ್ತು. ಒಡೆಯರ್ ಕಾಲದಲ್ಲಿ ಆರಂಭವಾದ ವಿಜಯದಶಮಿಯಿಂದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಈ ರೀತಿ ಆನೆಯೊಂದಕ್ಕೆ ಗೌರವ ಸಿಕ್ಕಿದ್ದು ವಿಶೇಷವೂ ಹೌದು.
(5 / 7)
ಮೈಸೂರಿನ ಚಾಮರಾಜೇಂದ್ರ ವೃತ್ತದ ಎದುರಿನ ಕೋಟೆ ಆಂಜನೇಯಸ್ವಾಮಿ ದೇಗುಲ ಪಕ್ಕ ದ್ವಾರವೇ ಜಯರಾಮ ಬಲರಾಮ ದ್ವಾರಗಳು. ಅರಮನೆಯ ಉತ್ತರ ಭಾಗದಲ್ಲಿ ಜಯರಾಮ ಮತ್ತು ಬಲರಾಮ ದ್ವಾರವನ್ನು ಉತ್ಸವಗಳು ಮತ್ತು ಮೆರವಣಿಗೆಗಳಿಗೆ ಬಳಸಲಾಗುತ್ತದೆ.
(6 / 7)
ಜಯರಾಮ ಬಲರಾಮ ಎನ್ನುವ ಆನೆಗಳು ಅಂಬಾರಿ ಹೊತ್ತ ಇತಿಹಾಸವಿದೆ. ಈ ಕಾರಣದಿಂದಲೇ ಈ ದ್ವಾರಕ್ಕೆ ಜಯರಾಮ ಬಲರಾಮ ಎನ್ನುವ ಹೆಸರಿದೆ. ಅರಮನೆ ಮುಂದೆ ಗಣ್ಯರ ಪುಷ್ಪಾರ್ಚನೆ ನಂತರ ಅಂಬಾರಿ ಸಾಗುವುದು ಜಯರಾಮ ಬಲರಾಮ ಮಾರ್ಗದ ಮೂಲಕವೇ
ಇತರ ಗ್ಯಾಲರಿಗಳು