ಎಲಾನ್ ಮಸ್ಕ್ ವಿಶ್ವದ ನಂಬರ್ 1 ಸಿರಿವಂತ; ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್. ವಿಶ್ವದ ಹತ್ತು ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿ ಇಲ್ಲಿದೆ. ಅವರು ಯಾರ್ಯಾರು ಇಲ್ಲಿ ತಿಳಿದುಕೊಳ್ಳೋಣ.
(1 / 11)
ವಿಶ್ವದ ಹತ್ತು ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿ ಇಲ್ಲಿದೆ. ಅವರು ಯಾರ್ಯಾರು ಇಲ್ಲಿ ತಿಳಿದುಕೊಳ್ಳೋಣ.
(Image credit: Reuters)(2 / 11)
ಎಲಾನ್ ಮಸ್ಕ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಮೇ 2024 ರಿಂದ ಅವರು ಈ ಬಿರುದನ್ನು ಹೊಂದಿದ್ದಾರೆ. ಅಮೆರಿಕದ ಎಲಾನ್ ಮಸ್ಕ್ ವಯಸ್ಸು 53. ಟೆಸ್ಲಾ, ಸ್ಪೇಸ್ಎಕ್ಸ್, ಎಕ್ಸ್ ಮಾಲೀಕರಾಗಿರುವ ಮಸ್ಕ್ ನಿವ್ವಳ ಮೌಲ್ಯ ಡಾಲರ್ 386.5 ಬಿಲಿಯನ್.
(Image credit: Reuters)(3 / 11)
ಜೆಫ್ ಬೆಜೋಸ್: ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ 60 ವರ್ಷ ವಯಸ್ಸಿನ ಜೆಫ್ ಬೆಜೋಸ್ ನಿವ್ವಳ ಮೌಲ್ಯ ಡಾಲರ್ 201.6 ಬಿಲಿಯನ್. ಅಮೆಜಾನ್ ಸಂಸ್ಥಾಪರಾಗಿರುವ ಇವರು ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಾಲ್ಲಿ ವಾಸಿಸುತ್ತಿದ್ದಾರೆ.
(Image credit: Getty Images)(4 / 11)
ಮಾರ್ಕ್ ಜುಕರ್‌ಬರ್ಗ್: ವಿಶ್ವದ 3ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ 40 ವರ್ಷ ವಯಸ್ಸಿನ ಮಾರ್ಕ್ ಜುಕರ್‌ಬರ್ಗ್, ನಿವ್ವಳ ಮೌಲ್ಯ ಡಾಲರ್ 190 ಬಿಲಿಯನ್. ಮೆಟಾ (ಫೇಸ್‌ಬುಕ್) ಒಡೆತನ ಹೊಂದಿರುವ ಜುಕರ್‌ಬರ್ಗ್ ಕೂಡ ಅಮೆರಿಕ ಮೂಲದವರು.
(Image credit: AP Photo)(5 / 11)
ಲ್ಯಾರಿ ಎಲಿಸನ್: ವಿಶ್ವದ 4ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ ಲ್ಯಾರಿ ಎಲಿಸನ್ ನಿವ್ವಳ ಮೌಲ್ಯ ಡಾಲರ್ 176.9 ಬಿಲಿಯನ್. 80 ವರ್ಷ ವಯಸ್ಸು ಹೊಂದಿರುವ ಲ್ಯಾರಿ ಎರಿಸನ್, ಒರಾಕಲ್ ಒಡೆತನ ಹೊಂದಿದ್ದಾರೆ.
(Image credit: AP )(6 / 11)
ವಾರೆನ್ ಬಫೆಟ್: ವಿಶ್ವದ 5ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ ವಾರೆನ್ ಬಫೆಟ್ ನಿವ್ವಳ ಮೌಲ್ಯ ಡಾಲರ್ 166.4 ಬಿಲಿಯನ್. 94 ವರ್ಷ ವಯಸ್ಸಾಗಿರುವ ಬಫೆಟ್ ಅಮೆರಿಕದ ಒಮಾಹಾದಲ್ಲಿ ವಾಸ ಮಾಡುತ್ತಿದ್ದಾರೆ.
(Image credit: AP )(7 / 11)
ಬರ್ನಾರ್ಡ್ ಅರ್ನಾಲ್ಟ್: ವಿಶ್ವದ 6ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ ಬರ್ನಾರ್ಡ್ ಅರ್ನಾಲ್ಟ್ ನಿವ್ವಳ ಮೌಲ್ಯ ಡಾಲರ್ 146.5 ಬಿಲಿಯನ್. ಅರ್ನಾಲ್ಟ್‌ಗೆ 75 ವರ್ಷ ವಯಸ್ಸಾಗಿದ್ದು, ಫ್ರಾನ್ಸ್‌ನ ಪ್ಯಾರಿಸ್‍ನಲ್ಲಿ ವಾಸಿಸುತ್ತಿದ್ದಾರೆ.
(Image credit: AP )(8 / 11)
ಲ್ಯಾರಿ ಪೇಜ್: ವಿಶ್ವದ 7ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ ಲ್ಯಾರಿ ಪೇಜ್ ಗೂಗಲ್ ಸಹ-ಸಂಸ್ಥಾಪಕರು. ಇವರ ನಿವ್ವಳ ಮೌಲ್ಯ ಡಾಲರ್ 132.7 ಬಿಲಿಯನ್.
(Image credit: Reuters)(9 / 11)
ಸೆರ್ಗೆ ಬ್ರಿನ್: ವಿಶ್ವದ 8ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ ಸೆರ್ಗೆ ಬ್ರಿನ್ ಗೂಗಲ್ ಸಹ-ಸಂಸ್ಥಾಪಕರು. ಇವರ ನಿವ್ವಳ ಮೌಲ್ಯ ಡಾಲರ್ 127.2 ಬಿಲಿಯನ್.
(Image credit: Reuters)(10 / 11)
ಅಮಾನ್ಸಿಯೊ ಒರ್ಟೆಗಾ: ವಿಶ್ವದ 9ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ ಅಮಾನ್ಸಿಯೊ ಒರ್ಟೆಗಾ ನಿವ್ವಳ ಮೌಲ್ಯ ಡಾಲರ್ 114.4 ಬಿಲಿಯನ್. ಒರ್ಟೆಗಾ ಸ್ಪೇನ್ ಮೂಲವದವರು.
ಇತರ ಗ್ಯಾಲರಿಗಳು