ಮೂರನೇ ಟೆಸ್ಟ್ಗೂ ಮುನ್ನಾದಿನ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ ಇಂಗ್ಲೆಂಡ್; ತಂಡದಲ್ಲಿ ಪ್ರಮುಖ ಎರಡು ಬದಲಾವಣೆ
- IND vs ENG 3rd Test : ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಫೆಬ್ರವರಿ 15ರಂದು ಗುರುವಾರ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನಾ ದಿನ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಆಡುವ 11ರ ಬಳಗವನ್ನು ಪ್ರಕಟಿಸಿದೆ.
- IND vs ENG 3rd Test : ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಫೆಬ್ರವರಿ 15ರಂದು ಗುರುವಾರ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನಾ ದಿನ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಆಡುವ 11ರ ಬಳಗವನ್ನು ಪ್ರಕಟಿಸಿದೆ.
(1 / 5)
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ವಿರುದ್ಧದ 3ನೇ ಟೆಸ್ಟ್‌ಗೆ ಇಂಗ್ಲೆಂಡ್ ಆಡುವ 11ರ ಬಳಗ ಪ್ರಕಟಿಸಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶೋಯೆಬ್ ಬಶೀರ್ ಬದಲಿಗೆ ಮಾರ್ಕ್ವುಡ್ಗೆ ಮಣೆ ಹಾಕಲಾಗಿದೆ.
(2 / 5)
ಇಂಗ್ಲೆಂಡ್ ಇಬ್ಬರು ಸ್ಪೆಷಲಿಸ್ಟ್ ವೇಗಿಗಳು, ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್ಗಳನ್ನು ರಾಜ್‌ಕೋಟ್ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ರಾಜ್‌ಕೋಟ್ ಗ್ರೀನ್ ಪಿಚ್ ಆಗಿರುವ ಕಾರಣ ಸ್ಟೋಕ್ಸ್, ಮೊದಲ ಬಾರಿಗೆ ಇಬ್ಬರು ಪರಿಣಿತ ವೇಗಿಗಳನ್ನು ಕಣಕ್ಕಿಳಿಸಿದ್ದಾರೆ.
(3 / 5)
ವೀಸಾ ಸಮಸ್ಯೆಗಳ ನಡುವೆಯೂ ಯುವ ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು 3ನೇ ಟೆಸ್ಟ್ ತಂಡದಲ್ಲಿ ಸೇರಿಸಲಾಗಿದೆ. ಮತ್ತೊಬ್ಬ ಸ್ಪಿನ್ನರ್ ಆಗಿ ಟಾಮ್ ಹಾರ್ಟ್ಲೆ ಕಣಕ್ಕಿಳಿಸಲಿದ್ದಾರೆ. ಮೂರನೇ ಸ್ಪಿನ್ನರ್ ಆಗಿ ಜೋ ರೂಟ್ ಸೇವೆ ಸಲ್ಲಿಸಲಿದ್ದಾರೆ.
(4 / 5)
ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ್ದ ಇಂಗ್ಲೆಂಡ್, ಎರಡನೇ ಟೆಸ್ಟ್ನಲ್ಲಿ ಮುಗ್ಗರಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಲು ಇಂಗ್ಲೆಂಡ್ ಸಿದ್ಧಗೊಂಡಿದೆ.
ಇತರ ಗ್ಯಾಲರಿಗಳು