ಐಪಿಎಲ್ 2024ರಿಂದ ಹೊರಗುಳಿದ ಹ್ಯಾರಿ ಬ್ರೂಕ್; ಬದಲಿ ಆಟಗಾರನ ಹುಡುಕಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್
- Harry Brook: ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್, ಐಪಿಎಲ್ 2024ರ ಆವೃತ್ತಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಬ್ರೂಕ್ ಅವರನ್ನು ಫ್ರಾಂಚೈಸಿಯು ಬಿಡುಗಡೆ ಮಾಡಿತ್ತು. ಹೀಗಾಗಿ ಅವರನನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು.

(1 / 5)
ವೈಯಕ್ತಿಕ ಕಾರಣಗಳಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿಯುವುದಾಗಿ ಬ್ರೂಕ್ ಹೇಳಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.(AFP)
(2 / 5)
ಕ್ರಿಕ್‌ಬಜ್‌ನಲ್ಲಿನ ವರದಿಯ ಪ್ರಕಾರ, ಹೆಚ್ಚಿನ ವಿರಾಮ ಪಡೆಯುವ ಸಲುವಾಗಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ಅವರು, ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಕೂಡಾ ಮಿಸ್ ಮಾಡಿಕೊಂಡಿದ್ದರು.(AFP)
(3 / 5)
ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ ನಂತರ ಕೊನೆಯ ಕ್ಷಣದಲ್ಲಿ ಅವರ ಹೆಸರನ್ನು ತೆಗೆಯಲಾಯ್ತು.(PTI)
(4 / 5)
ಬ್ರೂಕ್ ಅನುಪಸ್ಥಿತಿಯು ಮುಂಬರುವ ಋತುವಿನಲ್ಲಿ ಡೆಲ್ಲಿ ತಂಡಕ್ಕೆ ಕಾಡಲಿದೆ. ಹೀಗಾಗಿ ಅವರ ಬದಲಿಗೆ ಡೆಲ್ಲಿ ತಂಡವು ಬೇರೊಬ್ಬ ಆಟಗಾರನ ಹುಡುಕಾಟದಲ್ಲಿದೆ.(AFP)
ಇತರ ಗ್ಯಾಲರಿಗಳು