ಗೆದ್ದ ಇಂಗ್ಲೆಂಡ್-ಸೋತ ಪಾಕ್ಗೆ ಅಂಕಪಟ್ಟಿಯಲ್ಲಿ ಯಾವ ಸ್ಥಾನ; ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯದ ಶ್ರೀಲಂಕಾ
- World Cup 2023 Points Table: ನವೆಂಬರ್ 12ರ ಶನಿವಾರದಂದು ಏಕದಿನ ವಿಶ್ವಕಪ್ ಲೀಗ್ ಪಂದ್ಯಗಳ ನಂತರ 3 ತಂಡಗಳು ಟೂರ್ನಿಯಿಂದ ಹೊರಬಿದ್ದವು. ಗುಂಪು ಹಂತದ ಅಂಕಪಟ್ಟಿಯಲ್ಲಿ ಯಾವ ತಂಡವು ಯಾವ ಸ್ಥಾನ ಪಡೆದಿವೆ ಎಂಬುದನ್ನು ಈ ಮುಂದೆ ನೋಡೋಣ.
- World Cup 2023 Points Table: ನವೆಂಬರ್ 12ರ ಶನಿವಾರದಂದು ಏಕದಿನ ವಿಶ್ವಕಪ್ ಲೀಗ್ ಪಂದ್ಯಗಳ ನಂತರ 3 ತಂಡಗಳು ಟೂರ್ನಿಯಿಂದ ಹೊರಬಿದ್ದವು. ಗುಂಪು ಹಂತದ ಅಂಕಪಟ್ಟಿಯಲ್ಲಿ ಯಾವ ತಂಡವು ಯಾವ ಸ್ಥಾನ ಪಡೆದಿವೆ ಎಂಬುದನ್ನು ಈ ಮುಂದೆ ನೋಡೋಣ.
(1 / 10)
ವಿಶ್ವಕಪ್‌ನ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಗಳಿಸಿದ ಇಂಗ್ಲೆಂಡ್, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಮುಗಿಸಿದೆ. 9 ಪಂದ್ಯಗಳಲ್ಲಿ 3 ಗೆಲುವು, 6ಸೋಲು ಕಂಡಿರುವ ಹಾಲಿ ಚಾಂಪಿಯನ್ 6 ಅಂಕಗಳೊಂದಿಗೆ ವಿಶ್ವಕಪ್ ಅಭಿಯಾನ ಪೂರ್ಣಗೊಳಿಸಿದೆ. ನೆಟ್ ರನ್ ರೇಟ್ -0.572. ಇಂಗ್ಲೆಂಡ್ ಈ ಗೆಲುವಿನೊಂದಿಗೆ ಚಾಂಪಿಯನ್ಸ್ ಟ್ರೋಫಿಗೂ ಅರ್ಹತೆ ಪಡೆದಿದೆ.
(2 / 10)
ಇಂಗ್ಲೆಂಡ್ ವಿರುದ್ಧ ಸೋತ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ವಿಫಲವಾಯಿತು. ಸೋಲಿನೊಂದಿಗೆ ಅಭಿಯಾನ ಮುಗಿಸಿದ ಬಾಬರ್ ಪಡೆ, 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲು ಕಂಡಿತು. 8 ಅಂಕ ಪಡೆದು ವಿಶ್ವಕಪ್ ಅಭಿಯಾನ ಮುಗಿಸಿದೆ. ನೆಟ್ ರನ್ ರೇಟ್ -0.199. ಪಾಕ್ ವಿಶ್ವಕಪ್ನಿಂದ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಪೂರ್ಣಗೊಳಿಸಿದೆ.
(3 / 10)
ಭಾರತ ಆಡಿದ 8 ಪಂದ್ಯಗಳಲ್ಲಿ ಗೆದ್ದಿದೆ. 16 ಅಂಕ ಪಡೆದಿರುವ ರೋಹಿತ್ ಪಡೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಕೊನೆಯ ಲೀಗ್ ಪಂದ್ಯದಲ್ಲಿಂದು ನೆದರ್ಲೆಂಡ್ಸ್ ವಿರುದ್ಧ ಭಾರತ ಗೆಲ್ಲುವ ಫೇವರಿಟ್ ಎನಿಸಿದೆ. ಇಂದು ಗೆದ್ದು ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ನೆಟ್ ರನ್-ರೇಟ್ +2.456.
(4 / 10)
ದಕ್ಷಿಣ ಆಫ್ರಿಕಾ ತಾನಾಡಿದ 9 ಪಂದ್ಯಗಳ ಪೈಕಿ 7 ಗೆಲುವು, 2 ಸೋಲು ಕಂಡಿದೆ. 14 ಅಂಕಗಳೊಂದಿಗೆ ಲೀಗ್ ಅಭಿಯಾನ ಮುಗಿಸಿದೆ. ನೆಟ್ ರನ್-ರೇಟ್ +1.261. ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ.
(5 / 10)
ಬಾಂಗ್ಲಾದೇಶ ವಿರುದ್ಧ ದೊಡ್ಡ ಅಂತರದಿಂದ ಗೆದ್ದರೂ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಸಾಧ್ಯವಾಗಲಿಲ್ಲ. ಆಸೀಸ್ 9 ಪಂದ್ಯಗಳಲ್ಲಿ 7 ಗೆಲುವು, 2 ಸೋಲು ಕಂಡಿದ್ದು, 14 ಅಂಕ ಸಂಪಾದಿಸಿ 3ನೇ ಸ್ಥಾನದಲ್ಲಿದೆ. ನೆಟ್ ರನ್-ರೇಟ್ +0.841.
(6 / 10)
ನ್ಯೂಜಿಲೆಂಡ್ 4ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಕಿವೀಸ್ 9 ಪಂದ್ಯಗಳ ಪೈಕಿ 5 ಗೆಲುವು, 4 ಸೋಲು ಕಂಡಿದೆ. ಒಟ್ಟು 10 ಅಂಕ ಪಡೆದು ಲೀಗ್ ಅಭಿಯಾನ ಪೂರ್ಣಗೊಳಿಸಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಕಿವೀಸ್, ನೆಟ್ ರನ್-ರೇಟ್ +0.743.
(7 / 10)
ಅಫ್ಘಾನಿಸ್ತಾನ ತಂಡವು 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲು ಕಂಡಿದೆ. 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಅಭಿಯಾನ ಮುಗಿಸಿದೆ. ನೆಟ್ ರನ್ ರೇಟ್ -0.336.
(8 / 10)
ಬಾಂಗ್ಲಾದೇಶ 9 ಪಂದ್ಯಗಳಲ್ಲಿ 2 ಗೆಲುವು, 7 ಸೋಲು ಕಂಡಿದೆ. 4 ಅಂಕಗಳೊಂದಿಗೆ ವಿಶ್ವಕಪ್ ಅಭಿಯಾನ ಪೂರ್ಣಗೊಳಿಸಿದೆ. ನೆಟ್ ರನ್-ರೇಟ್ -1.087. ಶಕೀಬ್ ಪಡೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
(9 / 10)
ಶ್ರೀಲಂಕಾ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳ ಪೈಕಿ 2 ಗೆಲುವು, 7ರಲ್ಲಿ ಸೋತಿದೆ. ದ್ವೀಪರಾಷ್ಟ್ರವು 4 ಅಂಕ ಪಡೆದಿದೆ. ನೆಟ್ ರನ್-ರೇಟ್ -1.419. 2025ರ ಚಾಂಪಿಯನ್ಸ್ ಟ್ರೋಫಿಗೂ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಇತರ ಗ್ಯಾಲರಿಗಳು