ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Josh Baker: ಹುಟ್ಟುಹಬ್ಬಕ್ಕೆ 14 ದಿನಗಳಿರುವಾಗ ತನ್ನ 20ನೇ ವಯಸ್ಸಿಗೆ ಇಂಗ್ಲೆಂಡ್ ಕ್ರಿಕೆಟಿಗ ನಿಧನ

Josh Baker: ಹುಟ್ಟುಹಬ್ಬಕ್ಕೆ 14 ದಿನಗಳಿರುವಾಗ ತನ್ನ 20ನೇ ವಯಸ್ಸಿಗೆ ಇಂಗ್ಲೆಂಡ್ ಕ್ರಿಕೆಟಿಗ ನಿಧನ

  • Josh Baker Died : ಇಂಗ್ಲೆಂಡ್​ 20 ವರ್ಷದ ಯುವ ಆಟಗಾರ ಎಡಗೈ ಸ್ಪಿನ್ ಬೌಲರ್ ಜೋಶ್ ಬೇಕರ್ ಅಕಾಲಿಕ ಮರಣ ಹೊಂದಿದ್ದಾರೆ. ಇಡೀ ಕ್ರಿಕೆಟ್ ಲೋಕವೇ ಅವರ ಸಾವಿಗೆ ಕಂಬನಿ ಮಿಡಿದಿದೆ.

ವೋರ್ಸೆಸ್ಟರ್‌ಶೈರ್ ಎಡಗೈ ಸ್ಪಿನ್ ಬೌಲರ್ ಜೋಶ್ ಬೇಕರ್ ಅವರು ತಮ್ಮ 20ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ದಿಗ್ಭ್ರಮೆಗೊಂಡಿದೆ. ಈ ಬಗ್ಗೆ ಕ್ಲಬ್ ಕ್ರಿಕೆಟ್​ ದೃಢಪಡಿಸಿದೆ.
icon

(1 / 6)

ಬೇಕರ್ ತನ್ನ ಹುಟ್ಟುಹಬ್ಬಕ್ಕೆ 14 ದಿನಗಳ ಮೊದಲು ನಿಧನರಾಗಿದ್ದಾರೆ. ಮೇ 16 ರಂದು ತಮ್ಮ 21 ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದರು. ಆದರೆ ಅವರ ಸಾವಿಗೆ ಕಾರಣ ಬಹಿರಂಗಗೊಂಡಿಲ್ಲ.
icon

(2 / 6)

2021ರಲ್ಲಿ 17ನೇ ವಯಸ್ಸಿನಲ್ಲಿ ಕ್ಲಬ್‌ನೊಂದಿಗೆ ತನ್ನ ಮೊದಲ ಒಪ್ಪಂದಕ್ಕೆ ಸಹಿ ಹಾಕಿದ ಬೇಕರ್, 22 ಪ್ರಥಮ ದರ್ಜೆ ಪಂದ್ಯಗಳಲ್ಲಿ 43 ವಿಕೆಟ್‌, 25 ವೈಟ್-ಬಾಲ್ ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದಾರೆ.
icon

(3 / 6)

ಜುಲೈ 2023ರಲ್ಲಿ ಗ್ಲೌಸೆಸ್ಟರ್‌ಶೈರ್ ವಿರುದ್ಧ 75 ರನ್ ಬಾರಿಸಿದ್ದರು. ಅವರು ಎರಡು ಅರ್ಧ-ಶತಕಗಳ ಮೂಲಕ ಆಲ್​ರೌಂಡರ್​ ಆಗಿ ಗುರುತಿಸಿಕೊಳ್ಳುತ್ತಿದ್ದ ಅವಧಿಯಲ್ಲೇ ಸಾವನ್ನಪ್ಪಿದ್ದಾರೆ.
icon

(4 / 6)

ರೆಡ್ಡಿಚ್‌ನಲ್ಲಿ ಜನಿಸಿದ ಬೇಕರ್, ಅಂಡರ್-19 ಮಟ್ಟದಲ್ಲಿ ಇಂಗ್ಲೆಂಡ್​ನಿಂದ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. 2022ರಲ್ಲಿ ದೇಶದ ಅಂಡರ್​-19ರ ವಿಶ್ವಕಪ್ ತಂಡಕ್ಕೆ ಮೀಸಲು ಆಟಗಾರನಾಗಿ ಪ್ರಯಾಣಿಸಿದ್ದರು.
icon

(5 / 6)

ಕಳೆದ ತಿಂಗಳು ಮಾರ್ಚ್​​​ನಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಡರ್ಹಾಮ್ ವಿರುದ್ಧ ಕೊನೆಯದಾಗಿ ಕಾಣಿಸಿಕೊಂಡಿದ್ದರು.  ಜೋಶ್ ನಿಧನದ ಸುದ್ದಿಯಿಂದ ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ ಎಂದು ವೋರ್ಸೆಸ್ಟರ್‌ಶೈರ್ ಸಿಇಒ ಆಶ್ಲೇ ಗೈಲ್ಸ್ ಹೇಳಿದ್ದಾರೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು