ಸೈಫ್ ಅಲಿ ಖಾನ್​ಗೂ ಮುನ್ನ ಈ ಬಾಲಿವುಡ್​ ಸ್ಟಾರ್ ನಟರ ಮೇಲೆ ನಡೆದಿತ್ತು ಭೀಕರ ದಾಳಿ; ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೈಫ್ ಅಲಿ ಖಾನ್​ಗೂ ಮುನ್ನ ಈ ಬಾಲಿವುಡ್​ ಸ್ಟಾರ್ ನಟರ ಮೇಲೆ ನಡೆದಿತ್ತು ಭೀಕರ ದಾಳಿ; ಪಟ್ಟಿ ಇಲ್ಲಿದೆ

ಸೈಫ್ ಅಲಿ ಖಾನ್​ಗೂ ಮುನ್ನ ಈ ಬಾಲಿವುಡ್​ ಸ್ಟಾರ್ ನಟರ ಮೇಲೆ ನಡೆದಿತ್ತು ಭೀಕರ ದಾಳಿ; ಪಟ್ಟಿ ಇಲ್ಲಿದೆ

Saif Ali Khan: ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆದಾಗ್ಯೂ, ಈ ಹಿಂದೆಯೂ ಹಲವಾರು ಬಾಲಿವುಡ್ ನಟರ ಮೇಲೆ ಇದೇ ರೀತಿಯ ದಾಳಿಗಳು ನಡೆದಿವೆ. ಅವರು ಯಾರು ಎಂದು ನೋಡೋಣ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಗುರುವಾರ (ಜನವರಿ 16) ಮುಂಜಾನೆ ಹಲ್ಲೆ ನಡೆದಿದ್ದು, ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಕುಟುಂಬ ಸದಸ್ಯರೊಂದಿಗೆ ಮಲಗಿದ್ದಾಗ ಸೈಫ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
icon

(1 / 11)

(AFP)

ಮನೆಗೆ ನುಗ್ಗಿದ ದುಷ್ಕರ್ಮಿ 6 ಬಾರಿ ಇರಿದು, ನಟನ ಕೈ-ಕುತ್ತಿಗೆ, ಬೆನ್ನು ಮೂಳೆಗೆ ಗಾಯಗೊಳಿಸಿದ ಶಂಕಿತ ಆರೋಪಿ ಮೊದಲ ಫೋಟೋ ಮತ್ತು ಸಿಸಿಟಿವಿ ವಿಡಿಯೋ ಬಹಿರಂಗವಾಗಿದೆ. ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈಫ್ ಅವರ ಆರೋಗ್ಯ ಸ್ಥಿರವಾಗಿದೆ.
icon

(2 / 11)

ಸೈಫ್ ಅವರಿಗಿಂತ ಈ ಹಿಂದೆಯೂ ಹಲವಾರು ಬಾಲಿವುಡ್ ನಟರ ಮೇಲೆ ಇದೇ ರೀತಿಯ ದಾಳಿಗಳು ನಡೆದಿವೆ. ಅವರು ಯಾರು ಎಂದು ನೋಡೋಣ.
icon

(3 / 11)

ಮುಂಬೈನಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟಮೆಂಟ್‌ನ ಮನೆಗೆ ಗುಂಡಿನ ದಾಳಿ ನಡೆಸಲಾಗಿತ್ತು. ಬೈಕ್​ನಲ್ಲಿ ಬಂದಿದ್ದ ಇಬ್ಬರು ಗುಂಡು ಹಾರಿಸಿದ್ದರು.
icon

(4 / 11)

(AP)

ಈ ಘಟನೆ ನಂತರ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಇದರ ಹೊಣೆ ಹೊತ್ತಿದ್ದರು. ಬಳಿಕ ತನ್ನ ಅಪಾರ್ಟ್​ಮೆಂಟ್​ಗೆ ಬಾಲ್ಕನಿಗೆ ಬುಲೆಟ್ ಪ್ರೂಫ್ ಹಾಕಿಸಿದ್ದರು.
icon

(5 / 11)

(PTI)

ಪಂಜಾಬಿ ಗಾಯಕ ಎಪಿ ಧಿಲ್ಲಾನ್ ಅವರ ಕೆನಡಾದ ಮನೆಯ ಮೇಲೆ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ 14 ಬಾರಿ ಗುಂಡು ಹಾರಿಸಲಾಗಿತ್ತು. ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದ.
icon

(6 / 11)

ಧಿಲ್ಲಾನ್ ಅವರು ಸಲ್ಮಾನ್ ಖಾನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದನ್ನು ಲಾರೆನ್ಸ್ ಉಲ್ಲೇಖಿಸಿದ್ದ. ಸಲ್ಮಾನ್​ರಿಂದ ದೂರ ಇರುವಂತೆ ಗಾಯಕನಿಗೆ ಎಚ್ಚರಿಕೆ ನೀಡಿದ್ದ.
icon

(7 / 11)

ಉದಿತ್ ನಾರಾಯಣ್ ಅವರ ಪುತ್ರ ಆದಿತ್ಯ ನಾರಾಯಣ್ ವಿವಾದಗಳ ಮೂಲಕವೇ ಹೆಚ್ಚು ಸದ್ದು ಮಾಡಿದ್ದಾರೆ. ಅಂತಹ ಒಂದು ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆದಿತ್ಯ ನಾರಾಯಣ್ ಅವರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದಾರೆ. 
icon

(8 / 11)

ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮೇಲೂ ಈ ಹಿಂದೆ ಹಲ್ಲೆ ನಡೆದಿತ್ತು. ಕೋಲ್ಕತ್ತಾದಲ್ಲಿ ಅವರ ಮೇಲೆ ಇಬ್ಬರು ವ್ಯಕ್ತಿಗಳು ನೇರವಾಗಿ ಹಲ್ಲೆ ನಡೆಸಿದ್ದರು.
icon

(9 / 11)

ಬಾಲಿವುಡ್ ಹಾಸ್ಯ ಕಲಾವಿದ ಸುನಿಲ್ ಪಾಲ್ ಅವರು ಅಪಹರಣಕ್ಕೆ ಒಳಗಾಗಿದ್ದರು. ಆಗ ಕಿಡ್ನ್ಯಾಪರ್ಸ್ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸುನಿಲ್ ಪಾಲ್ ಅಷ್ಟು ದುಡ್ಡು ಕೊಡಲು ಸಾಧ್ಯವಾಗದೇ 8 ಲಕ್ಷ ಕೊಟ್ಟರು ಎಂದು ವರದಿಯಾಗಿದೆ.
icon

(10 / 11)

ಕಾರ್ಯಕ್ರಮವೊಂದಕ್ಕೆ ಮೀರತ್​ಗೆ ಹೊರಟಿದ್ದ ನಟ ಮುಷ್ತಾಕ್ ಖಾನ್ ಅವರನ್ನು ಮಧ್ಯ ದಾರಿಯಲ್ಲೇ ಕಿಡ್ನ್ಯಾಪ್ ಮಾಡಲಾಗಿತ್ತು. ನಟನಿಗೆ ಕಿರುಕುಳ ಕೊಟ್ಟಿದ್ದ ಕಿಡ್ನ್ಯಾಪರ್, 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
icon

(11 / 11)

ಇತರ ಗ್ಯಾಲರಿಗಳು