ತಮನ್ನಾ, ರಾಮ್ ಚರಣ್‌ರಿಂದ ವಿಜಯ್ ತನಕ ಸೌತ್ ಸ್ಟಾರ್‌ಗಳ ಸೈಡ್ ಬಿಜಿನೆಸ್ ನೋಡಿ, ಏರ್‌ಲೈನ್ಸ್, ರೆಸ್ಟೋರೆಂಟ್ ಇನ್ನೂ ಏನೇನೋ
South Celebs Side Business: ಸಿನಿಮಾ ನಟ, ನಟಿಯರು ಕೇವಲ ನಟನೆಗೆ ತಮ್ಮನ್ನು ಸೀಮಿತಗೊಳಿಸಲ್ಲ. ಸಿನಿಮಾ ಮುಖ್ಯ ವೃತ್ತಿಯಾದರೂ ಅನೇಕರು ಸೈಡ್ ಬಿಜಿನೆಸ್ ಹೊಂದಿದ್ಧಾರೆ. ಏರ್‌ಲೈನ್ಸ್, ರೆಸ್ಟೋರೆಂಟ್ ಇನ್ನೂ ಏನೇನೋ ಇವೆ. ತಮನ್ನಾ, ರಾಮ್ ಚರಣ್‌ರಿಂದ ವಿಜಯ್ ತನಕ ಸೌತ್ ಸ್ಟಾರ್‌ಗಳ ಸೈಡ್ ಬಿಜಿನೆಸ್ ಹೀಗಿವೆ ನೋಡಿ.
(1 / 7)
ಸಿನಿಮಾ ಸೆಲೆಬ್ರಿಟಿಗಳು ಚಲನಚಿತ್ರಗಳಲ್ಲಿ ನಟಿಸುವುದಷ್ಟೇ ಅಲ್ಲ, ಅವುಗಳೊಂದಿಗೆ ಉದ್ಯಮ, ವ್ಯವಹಾರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ದಕ್ಷಿಣ ಭಾರತದ ಪ್ರಮುಖ ಆಯ್ದ ನಟ, ನಟಿಯರ ಸೈಡ್ ಬಿಜಿನೆಸ್ ಬಗ್ಗೆ ತಿಳಿಯೋಣ.
(2 / 7)
ರಾಮ್ ಚರಣ್: ದಕ್ಷಿಣ ಸೂಪರ್‌ಸ್ಟಾರ್ ರಾಮ್ ಚರಣ್ ಅವರು 'ಟ್ರೂಜೆಟ್' ಎಂಬ ವಿಮಾನಯಾನ ಸಂಸ್ಥೆಯನ್ನು ಹೊಂದಿದ್ದಾರೆ. ಇದಲ್ಲದೆ, ರಾಮ್ ಚರಣ್ ಹೈದರಾಬಾದ್ ಪೋಲೊ ಮತ್ತು ರೈಡಿಂಗ್ ಕ್ಲಬ್‌ನ ಮಾಲೀಕರೂ ಹೌದು.
(3 / 7)
ಶ್ರುತಿ ಹಾಸನ್: ದಕ್ಷಿಣ ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ನಟಿ ಶ್ರುತಿ ಹಾಸನ್, ಐಸಿಡ್ರೊ ಎಂಬ ಹೆಸರಿನ ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ.
(4 / 7)
ತಮನ್ನಾ ಭಾಟಿಯಾ: ದಕ್ಷಿಣ ಭಾರತದ ಪ್ರಸಿದ್ಧ ತಾರೆ ತಮನ್ನಾ ಭಾಟಿಯಾ ಅವರು ವೈಟ್ ಮತ್ತು ಗೋಲ್ಡ್ ಎಂಬ ಆನ್‌ಲೈನ್ ಆಭರಣ ಬ್ರಾಂಡ್ ಅನ್ನು ನಡೆಸುತ್ತಿದ್ದಾರೆ.
(6 / 7)
ರಾಣಾ ದುಗ್ಗುಬಾಟಿ: ದಕ್ಷಿಣ ಚಿತ್ರರಂಗದ ನಟ ರಾಣಾ ದಗ್ಗುಬಾಟಿ ಸಿಎಎ ಕ್ವಾನ್ ಎಂಬ ಪ್ರತಿಭಾ ನಿರ್ವಹಣಾ ಕಂಪನಿಯನ್ನು ನಡೆಸುತ್ತಿದ್ದಾರೆ. ಇದಲ್ಲದೆ, ಅವರು ತಮ್ಮದೇ ಆದ ಟೆಕ್ ಕಂಪನಿ ಕಾಮಿಕ್ ಬುಕ್ ಮತ್ತು ಪ್ರೊಡಕ್ಷನ್ ಹೌಸ್ ಕೂಡ ಹೊಂದಿದ್ದಾರೆ.
ಇತರ ಗ್ಯಾಲರಿಗಳು