Lakshmi Baramma Serial: ವೈಷ್ಣವ್ ಮುಖಕ್ಕೆ ಮಸಿ ಬಳಿದು ಅವಮಾನ; ಲಕ್ಷ್ಮೀ ತೆಗೆದುಕೊಂಡ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಒತ್ತಾಯ ಮಾಡಿ ಲಕ್ಷ್ಮೀ ವೈಷ್ಣವ್‌ನನ್ನು ಅನನ್ಯ ಇದ್ದಲ್ಲಿಗೆ ಕರೆದುಕೊಂಡು ಹೋಗುತ್ತಾಳೆ. ಆದರೆ ಅಲ್ಲಿ ನಡೆದ ಘಟನೆ ಅವಳಿಗೆ ನೋವುಂಟು ಮಾಡಿದೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಒತ್ತಾಯ ಮಾಡಿ ಲಕ್ಷ್ಮೀ ವೈಷ್ಣವ್‌ನನ್ನು ಅನನ್ಯ ಇದ್ದಲ್ಲಿಗೆ ಕರೆದುಕೊಂಡು ಹೋಗುತ್ತಾಳೆ. ಆದರೆ ಅಲ್ಲಿ ನಡೆದ ಘಟನೆ ಅವಳಿಗೆ ನೋವುಂಟು ಮಾಡಿದೆ.
(1 / 8)
ಅಣ್ಣಯ್ಯ ಧಾರಾವಾಹಿಯಲ್ಲಿ ಅನನ್ಯ ವೈಷ್ಣವ್ ಮೇಲೆ ಆರೋಪ ಮಾಡಿರುತ್ತಾಳೆ. ವೈಷ್ಣವ್ ತನಗೆ ಕಿರುಕುಳ ಕೊಟ್ಟಿದ್ದಾನೆ ಎಂದು ಸುಳ್ಳು ಹೇಳಿರುತ್ತಾಳೆ.
(Colors Kannada)(2 / 8)
ಆದರೆ ತನ್ನ ಗಂಡನ ಮೇಲೆ ಇಂತಹ ಆರೋಪ ಬಂತಲ್ಲ ಎಂದು ಲಕ್ಷ್ಮೀ ನೊಂದುಕೊಂಡು ಅವನನ್ನು ಕರೆದುಕೊಂಡು ಅವಳಿದ್ದಲ್ಲಿಗೆ ಹೋಗುತ್ತಾಳೆ.
(Colors Kannada)(3 / 8)
ಅವಳ ಹತ್ತಿರವೇ ಕ್ಷಮೆ ಕೇಳಿಸಬೇಕು. ಏನಾಯ್ತೋ ಅದಕ್ಕೆ ನಾನು ಮತ್ತೆ ನ್ಯಾಯ ಒದಗಿಸಬೇಕು ಎಂಬುದು ಅವಳ ಆಶಯವಾಗಿರುತ್ತದೆ.
(Colors Kannada)(4 / 8)
ಆದರೆ ವೈಷ್ಣವ್‌ಗೆ ಇದ್ಯಾವುದೂ ಇಷ್ಟ ಇರೋದಿಲ್ಲ. ಇಲ್ಲಿ ಏನೋ ಅವಾಂತರ ಆಗುತ್ತದೆ ಎಂದು ಅವನಿಗೆ ಅನಿಸುತ್ತಲೇ ಇರುತ್ತದೆ. ವಾಪಸ್ ಹೋಗೋಣ ಎನ್ನುತ್ತಾನೆ. ಆದರೂ ನನ್ನ ಮೇಲಿನ ಪ್ರೀತಿಗಾದರೂ ನೀನು ಇಲ್ಲಿ ಇರಲೇಬೇಕು ಎಂದು ಲಕ್ಷ್ಮೀ ಒತ್ತಾಯ ಮಾಡುತ್ತಾಳೆ.
(Colors Kannada)(5 / 8)
ವಾಚ್‌ಮೆನ್ ಅವರಿಬ್ಬರನ್ನು ಒಳಗಡೆ ಹೋಗಲು ಬಿಡೋದಿಲ್ಲ. ಅಷ್ಟರಲ್ಲಿ ಮೀಡಿಯಾದವರು ಬಂದು ಮುತ್ತಿಕೊಳ್ಳುತ್ತಾರೆ.
(Colors Kannada)(6 / 8)
ವೈಷ್ಣವ್‌ಗೆ ಒಂದಷ್ಟು ಪ್ರಶ್ನೆ ಕೇಳುತ್ತಾರೆ, ಅದಾದ ನಂತರದಲ್ಲಿ ಲಕ್ಷ್ಮೀ ಬಳಿಯೂ ಒಂದಷ್ಟು ಪ್ರಶ್ನೆ ಕೇಳುತ್ತಾರೆ.
(Colors Kannada)(7 / 8)
ಇನ್ನೇನು ಉತ್ತರಿಸಬೇಕು ಎಂದು ಆಲೋಚನೆ ಮಾಡುತ್ತಿರುವ ಸಂದರ್ಭದಲ್ಲಿ, ಅಲ್ಲಿ ಅವಾಂತರವೇ ನಡೆಯುತ್ತದೆ. ಲಕ್ಷ್ಮೀಗೆ ಇಲ್ಲಿ ಏನಾಗ್ತಾ ಇದೆ ಎಂದೇ ಗೊತ್ತಾಗೋದಿಲ್ಲ.
(Colors Kannada)ಇತರ ಗ್ಯಾಲರಿಗಳು