Double iSmart OTT Release: ಡಬಲ್ ಇಸ್ಮಾರ್ಟ್ ಓಟಿಟಿ ರಿಲೀಸ್​ಗೆ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಲಭ್ಯ?-entertainment news ram pothinenis double ismart to stream on amazon prime video ott platform sanjay dutt tollywood prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Double Ismart Ott Release: ಡಬಲ್ ಇಸ್ಮಾರ್ಟ್ ಓಟಿಟಿ ರಿಲೀಸ್​ಗೆ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಲಭ್ಯ?

Double iSmart OTT Release: ಡಬಲ್ ಇಸ್ಮಾರ್ಟ್ ಓಟಿಟಿ ರಿಲೀಸ್​ಗೆ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಲಭ್ಯ?

  • Double iSmart: ಆಗಸ್ಟ್​ 15ರಂದು ತೆರೆಗೆ ಬಂದ ಟಾಲಿವುಡ್​ನ ಡಬಲ್ ಇಸ್ಮಾರ್ಟ್ ಚಿತ್ರವು ಅದಾಗಲೇ ಓಟಿಟಿಗೆ ಕಾಲಿಡಲು ಸಜ್ಜಾಗಿದೆ. ಹಾಗಿದ್ದರೆ ಯಾವಾಗ, ಎಲ್ಲಿ ಸ್ಟ್ರೀಮಿಂಗ್‌ ಆಗುತ್ತದೆ? ಇಲ್ಲಿದೆ ವಿವರ.

2019ರಲ್ಲಿ ಬಿಡುಗಡೆಯಾದ ಬ್ಲಾಕ್​ಬಸ್ಟರ್ 'ಇಸ್ಮಾರ್ಟ್ ಶಂಕರ್'​ ಚಿತ್ರದ ಮುಂದುವರಿದ ಭಾಗವಾಗಿ ಆಗಸ್ಟ್ 15ರಂದು ತೆರೆಗೆ ಅಪ್ಪಳಿಸಿದ ರಾಮ್ ಪೋತಿನೇನಿ ನಟನೆಯ ವೈಜ್ಞಾನಿಕ ಕಾಲ್ಪನಿಕ ಡಬಲ್ ಇಸ್ಮಾರ್ಟ್ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
icon

(1 / 7)

2019ರಲ್ಲಿ ಬಿಡುಗಡೆಯಾದ ಬ್ಲಾಕ್​ಬಸ್ಟರ್ 'ಇಸ್ಮಾರ್ಟ್ ಶಂಕರ್'​ ಚಿತ್ರದ ಮುಂದುವರಿದ ಭಾಗವಾಗಿ ಆಗಸ್ಟ್ 15ರಂದು ತೆರೆಗೆ ಅಪ್ಪಳಿಸಿದ ರಾಮ್ ಪೋತಿನೇನಿ ನಟನೆಯ ವೈಜ್ಞಾನಿಕ ಕಾಲ್ಪನಿಕ ಡಬಲ್ ಇಸ್ಮಾರ್ಟ್ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.(All Images From X (Twitter))

ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇತ್ತು. ಆದರೆ ಮೊದಲ ಭಾಗ ಅತೀವ ಯಶಸ್ಸು ಕಂಡಿದ್ದ ಕಾರಣ ಸೀಕ್ವೆಲ್ ಬಿಡುಗಡೆಗೂ ಮುನ್ನ ಗಮನ ಸೆಳೆದಿತ್ತು. ಆದರೆ, ಅಂದುಕೊಂಡ ಮಟ್ಟಿಗೆ ಯಶಸ್ಸು ಪಡೆಯುವಲ್ಲಿ ವಿಫಲ ಕಂಡಿದೆ.
icon

(2 / 7)

ಬಿಡುಗಡೆಗೊಂಡು ಎರಡೇ ದಿನವಾದರೂ ಡಬಲ್ ಇಸ್ಮಾರ್ಟ್ ಅದಾಗಲೇ ಓಟಿಟಿಗೆ ಕಾಲಿಡಲು ಸಜ್ಜಾಗಿದೆ. ಈ ಚಿತ್ರವು ಯಾವಾಗ, ಯಾವ ಓಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆಗುತ್ತದೆ ಎಂಬುದರ ಕುರಿತು ವರದಿಯಾಗಿದೆ. ಅದರ ವಿವರ ಈ ಮುಂದಿದೆ.
icon

(3 / 7)

ವೈಜ್ಞಾನಿಕ ಕಾಲ್ಪನಿಕ ಚಿತ್ರವಾದ ಡಬಲ್ ಇಸ್ಮಾರ್ಟ್ ಚಿತ್ರದಲ್ಲಿ ನಾಯಕ ರಾಮ್ ಮತ್ತು ಖಳ ನಾಯಕ ಸಂಜಯ್ ದತ್ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲಲ್ಲಿ ಆಲಿ ಕಾಮಿಡಿ ದೃಶ್ಯಗಳು ಸಿನಿ ಪ್ರಿಯರನ್ನು ರಂಜಿಸಿವೆ.
icon

(4 / 7)

ಮಿಕ್ಸೆಡ್ ಟಾಕ್ ಪಡೆದರೂ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್​ನಲ್ಲಿ ಮೊದಲ ದಿನವೇ 12.45 ಕೋಟಿ (ಗ್ರಾಸ್ ಕಲೆಕ್ಷನ್) ಸಂಪಾದಿಸಿದೆ. ಎರಡನೇ ದಿನವೂ ಅದೇ ಜೋಷ್ ಮುಂದುವರೆಸಿದೆ.
icon

(5 / 7)

ರಾಮ್ ಜೊತೆಗೆ ಕಾವ್ಯ ಥಾಪರ್, ಸಂಜಯ್ ದತ್, ವಿಶು ರೆಡ್ಡಿ, ಬನಿ ಜೆ, ಶಾಯಾಜಿ ಶಿಂಧೆ, ಗೆಟಪ್ ಶ್ರೀನು ಸೇರಿದಂತೆ ಪ್ರಮುಖರು ಈ ಚಿತ್ರದಲ್ಲಿದ್ದಾರೆ. ಪುರಿ ಜಗನ್ನಾಥ್ ಅವರು ನಟಿ ಹಾಗೂ ನಿರ್ಮಾಪಕಿ ಚಾರ್ಮಿ ಕೌರ್ ಅವರೊಂದಿಗೆ ಬಂಡವಾಳ ಹೂಡಿದ್ದಾರೆ.
icon

(6 / 7)

ವರದಿಗಳ ಪ್ರಕಾರ, ಡಬಲ್ ಇಸ್ಮಾರ್ಟ್ ಬಿಡುಗಡೆಯಾದ 45 ದಿನಗಳ ನಂತರ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ 33 ಕೋಟಿ ರೂಪಾಯಿಗೆ ಖರೀದಿಸಿದೆ. ಆದರೆ ಹಿಂದಿ ಆವೃತ್ತಿಯ ಒಪ್ಪಂದ ಇನ್ನೂ ಪೂರ್ಣಗೊಂಡಿಲ್ಲ.
icon

(7 / 7)

ಇತರ ಗ್ಯಾಲರಿಗಳು