Wet Land sites: ಕರ್ನಾಟಕದ ನಾಲ್ಕು ಜಲಮೂಲ ತಾಣಗಳಿಗೆ ರಾಮಸರ್ ಸೈಟ್ ಮಾನ್ಯತೆ; ಯಾವುದೆಲ್ಲ ಇದೆ ಪಟ್ಟಿಯಲ್ಲಿ photos
- ನದಿ, ಕೆರೆ, ಸರೋವರ ಸೇರಿ ನೀರು ನಿಂತು ಸಾಕಷ್ಟು ಜಲಚರಗಳಿಗೆ ಆವಾಸಸ್ಥಾನ,ಆಹಾರ ಕಲ್ಪಿಸುವ ಜಲಮೂಲ ತಾಣಗಳು ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಅರಣ್ಯಗಳಷ್ಟೆ ಮುಖ್ಯ ಪಾತ್ರ ವಹಿಸುತ್ತದೆ. ಅತ್ಯುತ್ತಮ ಜೀವವೈವಿಧ್ಯ ಪೋಷಕ ಜಲಮೂಲಗಳಿಗೆ ರಾಮಸರ್ ಸೈಟ್ (Ramsar Site) ಮಾನ್ಯತೆ ನೀಡಲಾಗುತ್ತದೆ ಕರ್ನಾಟಕದ ನಾಲ್ಕು ಜಲಮೂಲ ತಾಣಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
- ನದಿ, ಕೆರೆ, ಸರೋವರ ಸೇರಿ ನೀರು ನಿಂತು ಸಾಕಷ್ಟು ಜಲಚರಗಳಿಗೆ ಆವಾಸಸ್ಥಾನ,ಆಹಾರ ಕಲ್ಪಿಸುವ ಜಲಮೂಲ ತಾಣಗಳು ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಅರಣ್ಯಗಳಷ್ಟೆ ಮುಖ್ಯ ಪಾತ್ರ ವಹಿಸುತ್ತದೆ. ಅತ್ಯುತ್ತಮ ಜೀವವೈವಿಧ್ಯ ಪೋಷಕ ಜಲಮೂಲಗಳಿಗೆ ರಾಮಸರ್ ಸೈಟ್ (Ramsar Site) ಮಾನ್ಯತೆ ನೀಡಲಾಗುತ್ತದೆ ಕರ್ನಾಟಕದ ನಾಲ್ಕು ಜಲಮೂಲ ತಾಣಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
(1 / 8)
ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ವಿಶಾಲವಾದದ್ದು. ಇಲ್ಲಿ ಸಹಸ್ರಾರು ಹಕ್ಕಿಗಳು ವಲಸೆ ಬರುತ್ತವೆ. ಈ ತಾಣವೂ ರಾಮಸರ್ ಸೈಟ್ ಪಟ್ಟಿಯಲ್ಲಿ ಸೇರಿದೆ.(Arun SK)
(2 / 8)
ಏಕಕಾಲಕ್ಕೆ ಹೆಬ್ಬಾತುಗಳು ಸೇರಿದಂತೆ ನಾನಾ ಜಾತಿಯ ಹಕ್ಕಿಗಳು ಗದಗದ ಮಾಗಡಿ ಕೆರೆಯಲ್ಲಿ ಬರುತ್ತವೆ. ಗ್ರಾಮಸ್ಥರು ಹಕ್ಕಿಗಳ ನಿತ್ಯ ಬದುಕಿಗೆ ಸಹಕಾರ ನೀಡುತ್ತಾರೆ. ಇಲ್ಲಿನ ಜಲಮೂಲ ವರ್ಷ ಎಲ್ಲಾ ಋತುವಿನಲ್ಲೂ ನೀರಿನಿಂದ ತುಂಬಿರುತ್ತದೆ.
(3 / 8)
ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿ ಪಾತ್ರ ನಿಜಕ್ಕೂ ಸೋಜಿಗವೇ. ದಟ್ಟ ಅರಣ್ಯದಲ್ಲಿ ಹರಿದು ಬರುವು ಅಘನಾಶಿನಿ ನದಿ ಸೃಷ್ಟಿಸಿರುವ ಜಲವೈಭವವೂ ರಾಮಸರ್ ತಾಣಗಳ ಪಟ್ಟಿ ಸೇರಿದೆ.
(4 / 8)
ಉತ್ತರ ಕನ್ನಡದ ಅಘನಾಶಿನಿ ನದಿ ಪಾತ್ರವೂ ಹತ್ತಾರು ವೈವಿಧ್ಯಗಳಿಂದ ಕೂಡಿದೆ. ಅದರಲ್ಲೂ ಇಲ್ಲಿನ ಜಲ ಮೂಲ ಕೂಡ ಎಂಥ ಸನ್ನಿವೇಶದಲ್ಲೂ ಬತ್ತುವುದಿಲ್ಲ. ಮಳೆಗಾಲದಲ್ಲಿ ಇದರ ನೋಟ ನೋಡಲು ಚಂದ.
(5 / 8)
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮವೂ ಕಾವೇರಿ ತೀರದ ಪ್ರಮುಖ ಜಲ ತಾಣ. ಇಲ್ಲಿಯೂ ನಿತ್ಯ ಸಹಸ್ರಾರು ಹಕ್ಕಿಗಳು ಸಂತಾನಾಭಿವೃದ್ದಿಗೆ ಬರುತ್ತವೆ.
(6 / 8)
ಶ್ರೀರಂಗಪಟ್ಟಣದಿಂದ ಕೆಆರ್‌ಎಸ್‌ಗೆ ಹೋಗುವ ಮಾರ್ಗದಲ್ಲಿ ಸಿಗುವ ರಂಗನತಿಟ್ಟು ಕೂಡ ಪ್ರಮುಖ ರಾಮಸರ್ ತಾಣವಾಗಿ ಹೊರ ಹೊಮ್ಮಿದೆ.
(7 / 8)
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿರುವ ಅಂಕ ಸಮುದ್ರ ಪಕ್ಷಿಧಾಮ ಮೀಸಲು ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಮೊದಲ ಪಕ್ಷಿ ಸಂರಕ್ಷಣಾ ಧಾಮವಾಗಿದೆ. ಇದನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಉಪವಿಭಾಗ 36-ಎ ಯಡಿ ಸ್ಥಳೀಯ ಮತ್ತು ವಲಸಿಗ ನೀರಿನ ಹಕ್ಕಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಘೋಷಣೆ ಮಾಡಲಾಗಿದೆ. ಇದು ತಾತ್ಕಾಲಿಕ ನೀರಿನ ಮೂಲವಾಗಿದ್ದು (ಟ್ಯಾಂಕ್ ಬೆಡ್) ಸಾಕಷ್ಟು ಕರಿಜಾಲಿ ಮರ (ಅಕೇಸಿಯಾ ನಿಲೊಟಿಕಾ)ಗಳೊಂದಿಗೆ 244.04 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ, (samad kottur)
ಇತರ ಗ್ಯಾಲರಿಗಳು