Monsoon Mushrooms: ಮಳೆಗಾಲ ಶುರು, ಅಣಬೆಗಳಿಗೂ ಅರಳುವ ಕಾಲ, ಎಷ್ಟು ಬಗೆಯ ಅಣಬೆಗಳಿವೆ, ಬಳಕೆ ಹೇಗೆ? photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Monsoon Mushrooms: ಮಳೆಗಾಲ ಶುರು, ಅಣಬೆಗಳಿಗೂ ಅರಳುವ ಕಾಲ, ಎಷ್ಟು ಬಗೆಯ ಅಣಬೆಗಳಿವೆ, ಬಳಕೆ ಹೇಗೆ? Photos

Monsoon Mushrooms: ಮಳೆಗಾಲ ಶುರು, ಅಣಬೆಗಳಿಗೂ ಅರಳುವ ಕಾಲ, ಎಷ್ಟು ಬಗೆಯ ಅಣಬೆಗಳಿವೆ, ಬಳಕೆ ಹೇಗೆ? photos

  • ಸಾಮಾನ್ಯವಾಗಿ ಜುಲೈ-ಆಗಸ್ಟ್ ತಿಂಗಳಲ್ಲಿ ಸಹಜವಾಗಿ ಬೆಳೆಯುವ ಒಂದು ನೈಸರ್ಗಿಕ ಫಲ ಈ ಅಣಬೆ. ಇದರಲ್ಲೂ ಹಲವಾರು ತಳಿಗಳಿವೆ. ಕೆಲವನ್ನು ಆಹಾರವಾಗಿ, ಮತ್ತೆ ಕೆಲವನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತಿದೆ. ಇನ್ನಷ್ಟು ಅಣಬೆಗಳು ಬಳಕೆಗೆ ಯೋಗ್ಯವಲ್ಲ. ಈ ಕುರಿತು ಚಿತ್ರ ಮಾಹಿತಿ ಇಲ್ಲಿದೆ.

ಅಣಬೆಗಳು ಪ್ರಪಂಚದ ಅತಿ ಹಳೆಯ ಜೀವಿಗಳು. ಸುಮಾರು 70 ಕೋಟಿ ವರ್ಷಗಳ ಹಿಂದಿನ ಅಣಬೆ ಪಳೆಯುಳಿಕೆಗಳು ದೊರೆತಿವೆ. ಒಂದು ಕಾಲದಲ್ಲಿ 25 ಅಡಿಯೆತ್ತರದ ದೈತ್ಯ ಅಣಬೆಗಳಿದ್ದವೆಂದು ವಿಜ್ಞಾನಿಗಳು ಹೇಳುತ್ತಾರೆ.  ವಾಸ್ತವವಾಗಿ ಅಣಬೆಗಳು ಗಿಡವೊಂದರಲ್ಲಿ ಬಿಡುವ ಹಣ್ಣಿದ್ದಂತೆ. ಅಣಬೆಗಳ ಮುಖ್ಯ ಭಾಗಕ್ಕೆ Mycelium ಎನ್ನುತ್ತಾರೆ. ಇದು ನಮ್ಮ ನರವ್ಯೂಹದಂತೇ ಭೂಮಿಯಡಿ ಉದ್ದಾನುದ್ದ ಹರಡಿರುತ್ತದೆ. ಹೊರಗಡೆ ಕಾಣಿಸುವ ಹಲವಾರು ಅಣಬೆಗಳು ನಿಜವಾಗಿ ಒಂದೇ ಶಿಲೀಂಧ್ರವೊಂದರ ಕೈಕಾಲುಗಳಿದ್ದಂತೆ‌.
icon

(1 / 8)

ಅಣಬೆಗಳನ್ನು ಸಸ್ಯಾಹಾರವೆಂದೇ ಪರಿಗಣಿಸಲಾಗುತ್ತಿದೆಯಾದರೂ ಜೆನೆಟಿಕ್ಸ್ ಪ್ರಕಾರ ಇದು ಪ್ರಾಣಿವರ್ಗವನ್ನೇ ಹೋಲುತ್ತವೆ.  ಇವು ಸಸ್ಯಗಳಂತೆ ತಮ್ಮ ಆಹಾರ ತಾವೇ ತಯಾರಿಸುವುದಿಲ್ಲ ಬದಲಾಗಿ ಸಾವಯವ ವಸ್ತುಗಳನ್ನು ಅವಲಂಬಿಸಿವೆ. ಪ್ರಾಣಿಗಳಂತೇ ಆಮ್ಲಜನಕ ಇತ್ಯಾದಿ ಹೀರಿಕೊಂಡು ಇಂಗಾಲ ಮತ್ತು ತ್ಯಾಜ್ಯವಸ್ತುಗಳನ್ನು ಹೊರಬಿಡುತ್ತವೆ.  ಪ್ರಾಣಿಗಳಲ್ಲಿರುವ ಚಿಟಿನ್‌(chitin) ಎಂಬ ಅಂಶ ಇವುಗಳಲ್ಲಿದೆ, ಇದು ಸಸ್ಯಗಳಲ್ಲಿಲ್ಲ. ವಿಜ್ಞಾನಿಗಳು 2189 ಬಗೆಯ ಅಣಬೆಗಳನ್ನು ತಿನ್ನಬಹುದೆಂದು ವರ್ಗೀಕರಿಸಿದ್ದಾರೆ. 80 ಬಗೆಯ ಅಣಬೆಗಳು ಕತ್ತಲಲ್ಲಿ ಹೊಳೆಯಬಲ್ಲವು. 5300 ವರ್ಷಗಳ ಹಿಂದೆಯೇ ಮಿಂಚು ಅಣಬೆಗಳ ಬೆಳವಣಿಗೆ ಚುರುಕುಗೊಳಿಸುತ್ತದೆ. ಅಣಬೆಗಳು ವಿಟಮಿನ್ ಡಿ ಉತ್ಪಾದಿಸಬಲ್ಲವು. ಕೆಲ ಅಣಬೆಗಳು ಪ್ಲಾಸ್ಟಿಕ್ಕನ್ನು ಜೀರ್ಣಿಸಿಕೊಳ್ಳಬಲ್ಲವು.
icon

(2 / 8)

ಅಪರೂಪದ ಪೋಷಕಾಂಶಗಳ ಕಣಜವಾಗಿರುವ, ಅತ್ಯಂತ ರುಚಿಕರ ಖಾದ್ಯಗಳಿಗೆ ಮೂಲವಾದ ಅಣಬೆಗಳಲ್ಲಿ, ಕೃತಕವಾಗಿ ಬೆಳೆದ ಅಣಬೆಗಳಿಗಿಂತ ಸ್ವಾಭಾವಿಕವಾಗಿ ಬೆಳದ ಹೊಲಗದ್ದೆಯ 'ಕಾಡು ಅಣಬೆಗಳು' ಹಲವು ಪಟ್ಟು ಅಧಿಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವುಗಳ ಬೆಳವಣಿಗೆಗೆ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕಳೆನಾಶಕ ಬಳಸದ ಕಾರಣ ಇವು ಹೆಚ್ಚು ಸುರಕ್ಷಿತ. ಆದರೆ ಆಯ್ಕೆ ಮಾಡುವಾಗ ಎಚ್ಚರ ಇರಬೇಕಷ್ಟೆ
icon

(3 / 8)

 ಅಣಬೆಗಳು ವಿಷೇಶ ರುಚಿ, ಪೌಷ್ಟಿಕಾಂಶಯುಕ್ತವಾಗಿವೆ. ಇವುಗಳಲ್ಲಿ  ಗವಿಟಮಿನ್ A B D , ಪ್ರೋಟಿನ್, ಫೈ ಬರ್, ಪೋಟ್ಯಾಸಿಯಂ, ಹೊಂದಿವೆ, ಆದ್ದರಿಂದ ಇವುಗಳ ಸೇವನೆಯಿಂದ  ದೇಹದ ತೂಕ ಕಡಿಮೆ,ದೇಹದಲ್ಲಿ ಶಕ್ತಿ ಉತ್ಪಾದನೆ  ಮತ್ತು ಇವುಗಳ ನಿಯಂತ್ರಿತ ಸೆವನೆಯಿಂದ ಹೃದಯರೋಗ ತಡೆ, ಕ್ಯಾನ್ಸರ್‌, ಮಧುಮೇಹ ಬರದಂತೆ ತಡೆಯುವ ವಿಶೇಷತೆ ಹೊಂದಿದೆ. ಮತ್ತು ಇನ್ನು ಹೆಚ್ಚಿನ ಮಟ್ಟದಲ್ಲಿ ಸಂಶೋಧನೆಗಳು ಚಾಲ್ತಿಯಲ್ಲಿವೆ. 
icon

(4 / 8)

ಅಣಬೆಗಳು ಸಾಮಾನ್ಯವಾಗಿ ಪ್ರತಿ ವರ್ಷ ಒಂದು ನಿರ್ದಿಷ್ಟ ಪ್ರದೇಶದಲ್ಲಿ, ಹುಟ್ಟಿದ ಜಾಗದಲ್ಲೇ ಮತ್ತೆ ಹುಟ್ಟುವುದನ್ನು ನೋಡುತ್ತೇವೆ. ಅದಕ್ಕೆ ಕಾರಣ ಶಿಲೀಂದ್ರ ಜಾತಿಗೆ ಸೇರಿದ ಅವುಗಳಲ್ಲಿ, ಬೆಳೆದು ಅರಳಿದ ಅಣಬೆಯಿಂದ "ಸ್ಪೋರ್ಸ್" ಕೆಳಗೆ ಬಿದ್ದು ಮರುವರ್ಷ ಮತ್ತೆ ಹುಟ್ಟುತ್ತವೆ. ಹಾಗಾಗಿ, ಅಣಬೆ ಕೊಯ್ಲು ಮಾಡುವಾಗ ಸಂಪೂರ್ಣ ಮೊಗ್ಗುಗಳನ್ನು ಕುಯ್ಯದೆ, ಕೆಲವೊಂದಿಷ್ಟನ್ನಾದರೂ ಹಾಗೇ ಬಿಟ್ಟಲ್ಲಿ  ಅವು ಅರಳಿ ಸ್ಪೋರ್ಸ್ ಗಳು ಕೆಳಗೆ ಉದುರುವುದರಿಂದ ಮರು ವರ್ಷಕ್ಕೆ ಸಾಕಷ್ಟು ಅಣಬೆ ಸಿಗಲು ಸಹಾಯಕಾರಿ ಹಾಗೂ ಅದರ ವ್ಯಾಪ್ತಿ, ಉತ್ಪಾದನೆಯೂ ಹೆಚ್ಚಬಹುದು.
icon

(5 / 8)

ಮತ್ತುಗದ ಎಲೆಯಲ್ಲಿ ಮುತ್ತಿನಂತೆ ಹೊಳೆಯುತ್ತಿರುವ ವೈವಿಧ್ಯ ತಳಿಯ ಅಣಬೆಗಳು ಇವೆ. ಹೊಲದ ಬದುವುಗಳಲ್ಲಿ, ಬೆಟ್ಟಗುಡ್ಡಗಳ ಬಯಲಲ್ಲಿ, ನೆಲದಲ್ಲಿ ಮಲ್ಲಿಗೆ ಚೆಲ್ಲಿದಂತಹ ಪುಟಾಣಿ ಗುಂಪೊಂದು ಕಾಣುತ್ತದೆ, ಯಾರೋ ಮಲ್ಲಿಗೆ ಹೂ ಚೆಲ್ಲಿದ್ದಾರೆಂದು ಆ ಗುಂಪಿನ ಹತ್ತಿರ ಹೋದಾಗಲೇ ತಿಳಿಯುವುದು ಅದು ಅಣಬೆ ಎನ್ನುವುದು. ಅಣಬೆ ನೈಸರ್ಗಿಕವಾಗಿ ವಾತಾವರಣದ ಬದಲಾವಣೆಯ ಕಾರಣಕ್ಕೆ ಮಳೆ ಬಿದ್ದ ನಂತರ ಗುಡುಗಿನ ಅಬ್ಬರಕ್ಕೆ ತಾನಾಗಿಯೇ ಹುಟ್ಟುತ್ತದೆ. 
icon

(6 / 8)

ಅಣಬೆ ಉತ್ಪಾದಕರ ಕೇಂದ್ರಗಳಲ್ಲಿ & ಹೋಟೆಲ್ ಗಳಲಿ ಹಲವು  ಅಣಬೆಗಳ  ಖಾದ್ಯ ವರ್ಷವಿಡಿ ಸಿಗುತ್ತವೆ. ಇವುಗಳನ್ನು ನಿಗದಿತ ಪ್ರದೇಶದಲ್ಲಿ ಬೆಳೆದು ಮಾರಾಟ ಮಾಡಲಾಗುತ್ತದೆ. ಕಾಡು ಅಣಬೆಗಳು (Wild mushrooms) ಕಾಡು, ಹೊಲಗದ್ದೆಗಳಲ್ಲಿ ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಹುಟ್ಟುತ್ತವೆ. ಇವುಗಳಲ್ಲಿ ಕೆಲವು ಮಾತ್ರ ತಿನ್ನಲು ಯೋಗ್ಯ (Edible) ವಾಗಿದ್ದರೆ, ಹಲವು ತಿನ್ನುಲು ಯೋಗ್ಯವಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
icon

(7 / 8)

ಅಣಬೆಗಳು/ ಶಿಲೀಂದ್ರಗಳು ಅರಣ್ಯ/ ಕಾಡಿನಲ್ಲಿ ನಾವುಗಳು ನೋಡಬೇಕಾದರೆ, ಅರಣ್ಯ ಸಂರಕ್ಷಣೆ ಅತಿ ಪ್ರಮುಖ ಪಾತ್ರವಾಹಿಸುತ್ತದೆ, ಅತಿಯಾಗಿ ಆಹಾರವಾಗಿ ಅಣಬೆಗಳ ಬಳಕೆ ತಡೆಗಟ್ಟುವುದು, ಅರಣ್ಯ ಗಳ ಸಂರಕ್ಷಣೆ, ಅನೇಕ ಅಣಬೆಗಳು ನೇರವಾಗಿ/ ಪರೋಕ್ಷವಾಗಿ ಗಿಡ ಮರಗಳ, ಒಣ, ದಿಮ್ಮೆಗಳ ಮೇಲೆ ಅವಲಂಬಿತವಾಗಿವೆ. ಆದರಿಂದ ಕಾಡಿನಲ್ಲಿ ಒಣಗಿದ, ಬಿದ ಗಿಡಗಳು/ ಕಾಂಡ/ ದಿಮ್ಮಿಗಳು ಪ್ರಮುಖ ಪಾತ್ರವಹಿಸುತ್ತವೆ. ಜೈವಿಕ ವೈವಿದ್ಯ ಅಧಿನಿಯಮ-2002 & ಕರ್ನಾಟಕ ಜೈವಿಕ. ವೈವಿಧ್ಯ ನಿಯಮ 2005 ರಂತೆ ಸೆಕ್ಷನ್ 40, &  S O -1352 (ಇ) ಪ್ರಕಾರ ಕಾಡಿನಲ್ಲಿ ಅಣಬೆಗಳ ಸಂಗ್ರಹ, ಮಾರಾಟ ನಿಷೇಧಿತವಾಗಿದೆ.
icon

(8 / 8)

ಇತರ ಗ್ಯಾಲರಿಗಳು