Environment day2024: ಪರಿಸರ ದಿನಕ್ಕೆ ಗಿಡ ನೆಟ್ಟರು, ಹಸಿರು ಪ್ರೀತಿಯನ್ನು ತೋರಿದರು photos
- ವಿಶ್ವ ಪರಿಸರ ದಿನ( World environment day) ಅಂಗವಾಗಿ ಕರ್ನಾಟಕದ ನಾನಾ ಕಡೆ ಚಟುವಟಿಕೆಗಳು ನಡೆದವು. ಇದರ ಚಿತ್ರನೋಟ ಇಲ್ಲಿದೆ.
- ವಿಶ್ವ ಪರಿಸರ ದಿನ( World environment day) ಅಂಗವಾಗಿ ಕರ್ನಾಟಕದ ನಾನಾ ಕಡೆ ಚಟುವಟಿಕೆಗಳು ನಡೆದವು. ಇದರ ಚಿತ್ರನೋಟ ಇಲ್ಲಿದೆ.
(1 / 9)
ವಿಶ್ವ ಪರಿಸರ ದಿನಾಚರಣೆ-2024 ಅಂಗವಾಗಿ ಮೈಸೂರಿನ ಮೌಂಟೆಡ್ ಕಂಪನಿಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಇನ್ಪೋಸಿಸ್ ರವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಪೊಲೀಸ್ ಆಯುಕ್ತರಾದ ಬಿ. ರಮೇಶ್ , ಡಿಸಿಪಿ ಗಳಾದ ಜಾಹ್ನವಿ, ಮಾರುತಿ, ಶೈಲೇಂದ್ರ, ದೊರೆಮಣಿ ಭೀಮಯ್ಯಭಾಗವಹಿಸಿದ್ದರು.
(2 / 9)
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು ಪಾರ್ಕ್ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಸಚಿವ ದಿನೇಶ್ ಗುಂಡೂರಾವ್ ಆಚರಿಸಿದರು.
(3 / 9)
ವಿಶ್ವ ಪರಿಸರ ದಿನಾಚರಣೆ ಸಂಬಂಧ ಮಂಡ್ಯದ ಕೆಆರ್‌ಐಡಿಎಲ್( KRIDL) ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು ಅವರು ಉಪಸ್ಥಿತರಿದ್ದರು.
(4 / 9)
ವಿಜಯಪುರದಲ್ಲಿ ನನ್ನ ಗಿಡ ನನ್ನ ಭೂಮಿ ಎನ್ನುವ ಕಾರ್ಯಕ್ರಮವನ್ನು ಪರಿಸರಾಸಕ್ತ ಸಂಘಟನೆಗಳಿಂದ ಆಚರಿಸಲಾಯತು. ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.
(5 / 9)
ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನರಾದ ಪ್ರಾಂಶುಪಾಲರಾದ ಲಯನ್ ಸಿ.ಆರ್ ದಿನೇಶ್, ವಲಯ ಅರಣ್ಯ ಅಧಿಕಾರಿ ಗಂಗಾಧರ್, ಉಪ ವಲಯ ಅರಣ್ಯ ಅಧಿಕಾರಿ ದಯಾನಂದ್, ಕಿಶೋರ್, ಅರಣ್ಯ ಪಾಲಕ ಮಂಜುನಾಥ್ ಮತ್ತು ಕಾಲೇಜಿನ ಹಿರಿಯ ಉಪನ್ಯಾಸಕರಾದ ಅಶ್ವತ್ ನಾರಾಯಣಗೌಡ, ಸರ್ಕಾರಿ ನೌಕರರ ಅಧ್ಯಕ್ಷರಾದ ರಂಗಸ್ವಾಮಿ ,ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ ಅಧಿಕಾರಿ ಡಾ.ಟಿ ಕೆ ರವಿ ದಿನೇಶ್ ಮುಂತಾದವರು ಉಪಸ್ಥಿತರಿದ್ದರು .
(6 / 9)
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲೆ ಕುಷ್ಟಗಿಯ ಗವೀಸಿದ್ದೆಶ್ವರ ಶಾಲೆಯಲ್ಲಿ ಶಾಲೆಯ ಸುತ್ತಲೂ ಸಸಿಗಳನ್ನ ನೆಡಲಾಯಿತು.
(7 / 9)
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ , ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ, ನಗರಸಭೆ, ರೋಟರಿ ವತಿಯಿಂದ ಮಂಡ್ಯ ಜಿಲ್ಲಾ ಅಗ್ನಿಶಾಮಕ ದಳ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಗಿಡ ನೆಟ್ಟು ನೀರು ಹಾಕಿದರು.
ಇತರ ಗ್ಯಾಲರಿಗಳು