Sonakshi Sinha: "ಕುಟುಂಬಕ್ಕಿಂತ ಜನರಿಗಾಗಿಯಾದ್ರೂ ನಾನು ಮದುವೆ ಆಗಬೇಕಿದೆ" ಎಂದ ಸೋನಾಕ್ಷಿ
- ಬಾಲಿವುಡ್ ನಟಿ ಸೋನಾಕ್ಷಿ ಸದ್ಯ ಸಿನಿಮಾಳಿಂದ ದೂರವೇ ಉಳಿದಿದ್ದಾರೆ. ಅದಕ್ಕೆ ಕಾರಣ; ಸಾಲು ಸಾಲು ಸಿನಿಮಾಗಳ ಸೋಲೆಂದು ಬಿಡಿಸಿ ಹೇಳಬೇಕಿಲ್ಲ. "ಸಿನಿಮಾ ವರ್ಕೌಟ್ ಆಗ್ತಿಲ್ಲ, ಮದುವೆಯಾದರೂ ಆಗಿ" ಎಂದು ನೆಟ್ಟಿಗರು ಕಮೆಂಟ್ ಮೂಲಕ ಅವರನ್ನು ಕಿಚಾಯಿಸುತ್ತಿದ್ದಾರೆ. ಇದೆಲ್ಲದಕ್ಕೂ ತಮ್ಮದೇ ಶೈಲಿಯಲ್ಲಿಯೇ ಟಾಂಗ್ ಕೊಟ್ಟಿದ್ದಾರೆ ನಟಿ ಸೋನಾಕ್ಷಿ.

(1 / 6)
ನಾನು ನನ್ನ ಕೆಲಸದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಆದರೆ ಜನರಿಗೆ ಅದರ ಅವಶ್ಯಕತೆ ಇಲ್ಲ. ಅವರಿಗೆ ನನ್ನ ಮದುವೆ ಯಾವಾಗ ಎಂಬುದೊಂದೇ ಕುತೂಹಲ.(Instagram)
(2 / 6)
ಜನರಿಗೆ ತಮಗಿಂತ ನಮ್ಮ ಮೇಲೆಯೇ ಕಾಳಜಿ ಜಾಸ್ತಿ. ಅವರ ಜೀವನದಲ್ಲೇನು ನಡೆಯುತ್ತಿದೆ ಎಂಬುದಕ್ಕಿಂತ ನಮ್ಮ ಮದುವೆ, ಜೀವನದ ಮೇಲಿನ ಆಸಕ್ತಿಯೇ ಅವರಿಗೆ ಹೆಚ್ಚು.(Instagram)
(3 / 6)
ಹೋದಲ್ಲಿ ಬಂದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೋನಾಕ್ಷಿ ಈ ರೀತಿಯ ಹೇಳಿಕೆ ನೀಡಿದ್ದಾರೆ.(Instagram)
(4 / 6)
ನನ್ನ ಮದುವೆ ಬಗ್ಗೆ ನಮ್ಮ ಮನೆಯವರು ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಮೀಡಿಯಾದವರು ಮತ್ತು ಜನರು ಈ ಬಗ್ಗೆ ಸಾಕಷ್ಟು ಕುತೂಹಲಿಗಳಾಗಿದ್ದಾರೆ. ಅವರ ಸಲುವಾಗಿಯಾದರೂ ನಾನು ಮದುವೆ ಆಗಬೇಕಿದೆ..(Instagram)
(5 / 6)
35 ವರ್ಷ ವಯಸ್ಸಿನ ಸೋನಾಕ್ಷಿ, ಸದ್ಯ "ಕಕುದಾ" ಹೆಸರಿನ ವೆಬ್ಸರಣಿಯಲ್ಲಿ ನಟಿಸಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಈ ಸಿರೀಸ್ ಪ್ರಸಾರಕ್ಕೂ ಸಿದ್ಧವಾಗಿದೆ.(Instagram)
ಇತರ ಗ್ಯಾಲರಿಗಳು