ಈಗಿನ ಭಾರತ ತಂಡವನ್ನು 3 ದಿನಗಳಲ್ಲೇ ಸುಲಭವಾಗಿ ಸೋಲಿಸ್ತಿದ್ವಿ; ಶ್ರೀಲಂಕಾ ದಿಗ್ಗಜ ಅರ್ಜುನ ರಣತುಂಗ ವಿಚಿತ್ರ ಹೇಳಿಕೆ
- Arjuna Ranatunga: ನನ್ನ 1996ರ ತಂಡ ಈಗಿನ ಭಾರತ ತಂಡವನ್ನು 3 ದಿನಗಳಲ್ಲೇ ಸೋಲಿಸ್ತಿತ್ತು ಎಂದು ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ವಿಚಿತ್ರ ಹೇಳಿಕೆ ನೀಡಿದ್ದಾರೆ.
- Arjuna Ranatunga: ನನ್ನ 1996ರ ತಂಡ ಈಗಿನ ಭಾರತ ತಂಡವನ್ನು 3 ದಿನಗಳಲ್ಲೇ ಸೋಲಿಸ್ತಿತ್ತು ಎಂದು ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ವಿಚಿತ್ರ ಹೇಳಿಕೆ ನೀಡಿದ್ದಾರೆ.
(1 / 10)
ಭಾರತೀಯ ಕ್ರಿಕೆಟ್ ತಂಡವು ನೀಡುತ್ತಿರುವ ಇತ್ತೀಚಿನ ಪ್ರದರ್ಶನಕ್ಕೆ ಮತ್ತು ಪ್ರಸ್ತುತ ತಂಡಕ್ಕೆ ಸಂಬಂಧಿಸಿ ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಮೂರೇ ದಿನಗಳಲ್ಲಿ ಟೆಸ್ಟ್ ಗೆಲ್ತಿದ್ವಿ ಎಂದು ಹೇಳಿದ್ದಾರೆ.
(HT_PRINT)(2 / 10)
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಟಿ20ಐ, ಏಕದಿನ ಸರಣಿ ಗೆದ್ದಿದ್ದರೂ ಅದಕ್ಕೂ ಮುನ್ನ ಸಾಲು ಸಾಲು ಸೋಲು ಕಂಡಿತ್ತು. ಬಾರ್ಡರ್ ಗವಾಸ್ಕರ್ ಟ್ರೋಫಿ, ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ, ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು.
(3 / 10)
ಅಣಕಿಸುವಂತೆ ಮಾತನಾಡಿರುವ ಅರ್ಜುನ ರಣತುಂಗ, ಭಾರತ ತಂಡದ ವಿರುದ್ಧ ಆಡಿ ಗೆಲ್ಲುವುದು ಸುಲಭ ಎನ್ನುವಂತೆ ಹೇಳಿಕೆ ನೀಡಿದ್ದಾರೆ. ಇದರಿಂದ ಕ್ರಿಕೆಟ್ ವಲಯದಲ್ಲಿ ಅವರು ಸಿಕ್ಕಾಪಟ್ಟೆ ಟೀಕೆಯನ್ನು ಎದುರಿಸುವ ಪರಿಸ್ಥಿತಿಗೆ ಬಂದಿದ್ದಾರೆ.
(4 / 10)
1996ರಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ವಿಶ್ವಕಪ್ ಆಯೋಜಿಸಿದ್ದವು. ಫೈನಲ್ನಲ್ಲಿ ರಣತುಂಗ ನೇತೃತ್ವದ ಶ್ರೀಲಂಕಾವು ಮಾರ್ಕ್ ಟೇಲರ್ ನೇತೃತ್ವದ ಆಸ್ಟ್ರೇಲಿಯಾವನ್ನು 7 ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು.
(AP)(5 / 10)
ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಅರ್ಜುನ ರಣತುಂಗ, ಆಧುನಿಕ ಆಟಗಾರರಲ್ಲಿ ಅಗತ್ಯ ಕೌಶಲ್ಯಗಳ ಕೊರತೆಯನ್ನು ಉಲ್ಲೇಖಿಸಿ ಮತ್ತು ಈ ಕುಸಿತಕ್ಕೆ ಫ್ರಾಂಚೈಸಿಗಳ ಪ್ರಭಾವ ಕಾರಣ ಎಂದು ಹೇಳಿದ್ದಾರೆ.
(ICC- X)(6 / 10)
ತಮ್ಮ ಮಾತನ್ನು ಸಾಬೀತುಪಡಿಸಲು ರಣತುಂಗ ದಿಟ್ಟ ಹೇಳಿಕೆ ನೀಡಿದ್ದಾರೆ. 1996ರ ವಿಶ್ವಕಪ್ ಗೆದ್ದ ತಮ್ಮ ಶ್ರೀಲಂಕಾ ತಂಡವು ಪ್ರಸ್ತುತ ಭಾರತ ತಂಡವನ್ನು ಅವರ ತವರು ನೆಲದಲ್ಲೇ ಸುಲಭವಾಗಿ ಸೋಲಿಸುತ್ತದೆ ಎಂದು ಹೇಳಿದ್ದಾರೆ.
(HT_PRINT)(7 / 10)
90ರ ದಶಕದ ಆರಂಭದಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕವನ್ನೊಮ್ಮೆ ಗಮನಿಸಿ. ಗವಾಸ್ಕರ್, ವೆಂಗ್‌ಸರ್ಕಾರ್, ಅಮರ್‌ನಾಥ್, ಅಜರುದ್ದೀನ್, ತೆಂಡೂಲ್ಕರ್, ವಿನೋದ್ ಕಾಂಬ್ಳಿ, ದ್ರಾವಿಡ್ ಇದ್ದರು. ಎಂಥಹ ದಿಗ್ಗಜರು ಅವರು. ಆದರೀಗ ಅಂತಹ ಆಟಗಾರರು ಇದ್ದಾರೆಯೇ? ನನಗೆ ಹಾಗೆ ಅನಿಸುವುದಿಲ್ಲ ಎಂದಿದ್ದಾರೆ.
(AFP)(8 / 10)
ನಾನು ನಿಮಗೆ ನೇರವಾಗಿ ಹೇಳುತ್ತೇನೆ. ಪ್ರಸ್ತುತ ಭಾರತೀಯ ತಂಡವು 96ರ ದಶಕದ ನನ್ನ ತಂಡದ ವಿರುದ್ಧ ಆಡಿದ್ದರೆ, ಸುಲಭವಾಗಿ ಸೋಲಿಸುತ್ತಿದ್ದೆವು. ಟೆಸ್ಟ್ ಪಂದ್ಯವನ್ನು ಆಡಿದ್ದರೆ, ನಾವು ಮೂರು ದಿನಗಳಲ್ಲಿ ಗೆಲ್ಲುತ್ತಿದ್ದೆವು ಎಂದು ರಣತುಂಗ ಟೆಲಿಗ್ರಾಫ್‌ಗೆ ಹೇಳಿದ್ದಾರೆ.
(AFP)(9 / 10)
ನಮ್ಮ ಕಿರಿಯರಿಗೆ ಸರಿಯಾದ ಕ್ರಿಕೆಟ್ ಕಲಿಸುತ್ತಿದ್ದೇವೆಯೇ ಎಂಬ ಅನುಮಾನ ಇದೆ. ಭಾರತಕ್ಕೆ ಮಾತ್ರವಲ್ಲ, ನಮ್ಮ ಶ್ರೀಲಂಕಾದವರಿಗೂ ಅದೇ ಸಮಸ್ಯೆ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈಗಿನ ಆಟಗಾರರು ಉತ್ತಮ ಹಣ ಪಡೆಯುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದಿದ್ದಾರೆ.
ಇತರ ಗ್ಯಾಲರಿಗಳು