Kalladka News: ಕಲ್ಕಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ರೋಮಾಂಚನಕಾರಿ ಸಾಹಸ, ಮಲ್ಲಕಂಬ, ಕಾಲ್ಚಕ್ರ, ಬೆಂಕಿಸಾಹಸದ ಚಿತ್ರಗಳು
- ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ನ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಡಿ.10ರ ಶನಿವಾರ ಉದ್ಘಾಟಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಶಾಲಾ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಕೌಶಲ್ಯವನ್ನು ಕಂಡು ಬೆರಗಾದರು.
- ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ನ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಡಿ.10ರ ಶನಿವಾರ ಉದ್ಘಾಟಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಶಾಲಾ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಕೌಶಲ್ಯವನ್ನು ಕಂಡು ಬೆರಗಾದರು.
(1 / 10)
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ನ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಬೆಂಕಿ ಸಾಹಸ.
(2 / 10)
ಕ್ರೀಡೋತ್ಸವದಲ್ಲಿ ಸುಮಾರು 19 ರೀತಿಯ ವಿವಿಧ ಪ್ರದರ್ಶನ ಗಳು ನಡೆದಿದೆ. ವಿದ್ಯಾ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದಾರೆ.
(3 / 10)
ಬೆಂಕಿ ಸಾಹಸ, ಕೂಪಿಕಾ, ಕಾಲ್ಚಕ್ರ, ನೃತ್ಯ ವೈವಿಧ್ಯ, ಮಲ್ಲಕಂಬ, ದೀಪಾರತಿ ಹೀಗೆ ಅನೇಕ ಕ್ರೀಡೆಗಳನ್ನು, ಕಲಾ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ.
(5 / 10)
ಟೇಬಲ್ ಮೇಲೆ ವಿದ್ಯಾರ್ಥಿಗಳು ನಿಂತಿಲ್ಲ. ಟೇಬಲ್ ಕಾಲಿನ ಕೆಳಗೆ ಏನಿದೆ ಎಂದು ಒಮ್ಮೆ ನೋಡಿ. ಈ ವಿದ್ಯಾರ್ಥಿಗಳ ಧೈರ್ಯ, ಸಾಹಸ ರೋಮಾಂಚನಕಾರಿಯಾಗಿತ್ತು. ನೆರೆದಿದ್ದ ಸಭಿಕರು ವಿದ್ಯಾರ್ಥಿಗಳ ಇಂತಹ ಸಾಹಸಗಳನ್ನು ಬೆರಗುಗಣ್ಣಿನಿಂದ ಕಣ್ತುಂಬಿಕೊಂಡರು.
(6 / 10)
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಶಾಲಾ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಕೌಶಲ್ಯವನ್ನು ಕಂಡು ಬೆರಗಾದರು.
(7 / 10)
ಕಂದಾಯ ಸಚಿವರಾದ ಆರ್. ಅಶೋಕ್, ಕನ್ನಡ, ಸಂಸ್ಕೃತಿ ಮತ್ತು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಸಚಿವರಾದ ಮುನಿರತ್ನ, ಶಾಸಕರಾದ ರಾಜೇಶ್ ನಾಯ್ಕ್, ಶ್ರೀ ರಾಮ ವಿದ್ಯಾಕೇಂದ್ರದ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್ ಭಟ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.
(8 / 10)
ಸಾಹಸಕ್ಕೆ ವಿದ್ಯಾರ್ಥಿಗಳು ಸಿದ್ಧರಾಗುತ್ತಿರುವುದು. ಕ್ರೀಡೋತ್ಸವದಲ್ಲಿ ಸುಮಾರು 19 ರೀತಿಯ ವಿವಿಧ ಪ್ರದರ್ಶನಗಳು ನಡೆದಿವೆ.
(9 / 10)
1980 ರಲ್ಲಿ 73 ಮಕ್ಕಳಿಂದ ಆರಂಭವಾದ ಈ ಕಲ್ಲಡ್ಕ ಶಿಕ್ಷಣ ಸಂಸ್ಥೆಯಲ್ಲಿಈಗ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಇತರ ಗ್ಯಾಲರಿಗಳು