ಯುದ್ಧದ ನಡುವೆ ಸಿಲುಕಿದ 19 ನರ್ಸ್‌ಗಳನ್ನು ಕರೆತಂದಿದ್ದೇ ರೋಚಕ! ಫ್ರೀಯಾಗಿ ನೋಡಿ ಮಲಯಾಳಿ ಸರ್ವೈವಲ್ ಥ್ರಿಲ್ಲರ್ ಸಿನಿಮಾ
2017ರಲ್ಲಿ ಬಿಡುಗಡೆಯಾದ ಮಲಯಾಳಂ ಸರ್ವೈವಲ್ ಥ್ರಿಲ್ಲರ್ ಚಿತ್ರ ‘ಟೇಕ್ ಆಫ್’. 2014ರಲ್ಲಿ ನಡೆದ ನೈಜ ಘಟನೆ ಆಧರಿತ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಇದೀಗ ಇದೇ ಸಿನಿಮಾವನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು. ಅದಕ್ಕೂ ಮೊದಲು ಈ ಸಿನಿಮಾದ ಬಗ್ಗೆ ಒಂಚೂರು ತಿಳಿದುಕೊಳ್ಳೋಣ.
(1 / 8)
2017ರಲ್ಲಿ ಬಿಡುಗಡೆಯಾದ ಮಲಯಾಳಂ ಸರ್ವೈವಲ್ ಥ್ರಿಲ್ಲರ್ ಚಿತ್ರ ‘ಟೇಕ್ ಆಫ್’. 2014ರಲ್ಲಿ ನಡೆದ ನೈಜ ಘಟನೆ ಆಧರಿತ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಇದೀಗ ಇದೇ ಸಿನಿಮಾವನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು.
(2 / 8)
2014ರಲ್ಲಿ ಇರಾಕ್‌ನ ಟಿಕ್ರಿತ್‌ನಲ್ಲಿ ನಡೆದ ಅಂತರ್ಯುದ್ಧದಲ್ಲಿ ಸಿಲುಕಿದ್ದ 19 ಮಲಯಾಳಿ ನರ್ಸ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿ ಸ್ವದೇಶಕ್ಕೆ ಕರೆತಂದ ಕಾರ್ಯಾಚರಣೆ ಆಧರಿಸಿದ ಚಿತ್ರ ಈ ಟೇಕ್ ಆಫ್. ಫಹಾದ್ ಫಾಜಿಲ್, ಪಾರ್ವತಿ ತಿರುವೋತ್ತು, ಆಸಿಫ್ ಅಲಿ, ಕುಂಚಕೋ ಬೊಬನ್ ಮುಂತಾದ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.
(3 / 8)
ಮಹೇಶ್ ನಾರಾಯಣನ್ ನಿರ್ದೇಶನದ ಈ ಚಿತ್ರದಲ್ಲಿ ಶಾಹಿದ್ ಪಾತ್ರದಲ್ಲಿ ಕುಂಚಕೋ ಬೊಬನ್, ಸಮೀರಾ ಪಾತ್ರದಲ್ಲಿ ಪಾರ್ವತಿ ತಿರುವೋತು ನರ್ಸ್‌ಗಳಾಗಿ ನಟಿಸಿದ್ದಾರೆ. ಫಹಾದ್ ಫಾಜಿಲ್ ಇರಾಕ್‌ನ ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಮನೋಜ್ ಅಬ್ರಹಾಂ ಪಾತ್ರವನ್ನು ನಿರ್ವಹಿಸಿದ್ದಾರೆ.
(4 / 8)
2014ರಲ್ಲಿ 19 ಮಲಯಾಳಿ ನರ್ಸ್‌ಗಳು ಆರ್ಥಿಕವಾಗಿ ಸುಧಾರಣೆ ಕಾಣುವ ಸಲುವಾಗಿ ಇರಾಕ್‌ಗೆ ವೈದ್ಯಕೀಯ ಸೇವೆಗಳನ್ನು ಒದಗಿಸಲೆಂದು ನರ್ಸ್‌ಗಳಾಗಿ ಅಲ್ಲಿಗೆ ಹೋಗುತ್ತಾರೆ. ಇರಾಕ್‌ಗೆ ಹೋದ ನಂತರ ಅಲ್ಲಿನ ಯುದ್ಧದ ವಾತಾವರಣ ಅವರೆಲ್ಲರಿಗೂ ಅರಿವಾಗುತ್ತದೆ.
(5 / 8)
ಈ ನಡುವೆ ಇರಾಕ್ ಸೈನ್ಯವನ್ನು ಸೋಲಿಸಿದ ಐಸಿಸ್, ಆ ಪ್ರದೇಶವನ್ನು ತನ್ನ ವಶಕ್ಕೆ ಪಡೆಯುತ್ತದೆ. ಈ ಪರಿಸ್ಥಿತಿಯಲ್ಲಿ ಗರ್ಭಿಣಿಯಾಗಿರುವ ಸಮೀರಾ, ಯುದ್ಧಭೂಮಿಯಲ್ಲಿ ತನ್ನ ಮಗ ಮತ್ತು ಪತಿಗಾಗಿ ಮಾಡುವ ಹೋರಾಟ ಎಂಥದ್ದು?
(6 / 8)
ಎಲ್ಲ ಮಲಯಾಳಿ ನರ್ಸ್‌ಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಮನೋಜ್ ಅಬ್ರಹಾಂ ಪಟ್ಟ ಪ್ರಯತ್ನ ಎಂಥದ್ದು? ಇದೆಲ್ಲವೂ ʻಟೇಕ್ ಆಫ್ʼ ಚಿತ್ರದಲ್ಲಿ ನೋಡಬಹುದು.
(7 / 8)
ಇರಾಕ್‌ನಂತಹ ದೇಶದಲ್ಲಿ ನಡೆಯುವ ಅಂತರ್ಯುದ್ಧದಿಂದ ಭಾರತೀಯರನ್ನು ರಕ್ಷಿಸಲು ಮಾಡಿದ ನಿಜವಾದ ರಕ್ಷಣಾ ಕಾರ್ಯಾಚರಣೆ ಹೇಗಿರುತ್ತದೆ ಎಂಬುದನ್ನು ಟೇಕ್ ಆಫ್ ಚಿತ್ರವು ಸ್ಪಷ್ಟವಾಗಿ ತೋರಿಸುತ್ತದೆ.
ಇತರ ಗ್ಯಾಲರಿಗಳು