Successful Directors: ಮಣಿರತ್ನಂ, ಪ್ರಶಾಂತ್ ನೀಲ್, ಶಂಕರ್, ಉಪೇಂದ್ರ... ದಕ್ಷಿಣ ಭಾರತದ ಟಾಪ್ 10 ಸಿನಿಮಾ ನಿರ್ದೇಶಕರ ಪಟ್ಟಿ
- Top 10 Directors South India: ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಣಿರತ್ನಂ, ಎಸ್‌ಎಸ್ ರಾಜಮೌಳಿ, ಎಸ್ ಶಂಕರ್, ಉಪೇಂದ್ರ, ಅಟ್ಲಿ, ಎಆರ್ ಮುರುಗಾದಾಸ್, ತ್ರಿವಿಕ್ರಮ್ ಶ್ರೀನಿವಾಸ್ ಮುಂತಾದ ಟಾಪ್ 10 ನಿರ್ದೇಶಕರಿದ್ದಾರೆ.
- Top 10 Directors South India: ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಣಿರತ್ನಂ, ಎಸ್‌ಎಸ್ ರಾಜಮೌಳಿ, ಎಸ್ ಶಂಕರ್, ಉಪೇಂದ್ರ, ಅಟ್ಲಿ, ಎಆರ್ ಮುರುಗಾದಾಸ್, ತ್ರಿವಿಕ್ರಮ್ ಶ್ರೀನಿವಾಸ್ ಮುಂತಾದ ಟಾಪ್ 10 ನಿರ್ದೇಶಕರಿದ್ದಾರೆ.
(1 / 10)
Best Movie Directors South India: ದಕ್ಷಿಣ ಭಾರತದಲ್ಲಿ ಮಣಿರತ್ನಂ, ಎಸ್‌ಎಸ್ ರಾಜಮೌಳಿ, ಎಸ್ ಶಂಕರ್, ಉಪೇಂದ್ರ, ಅಟ್ಲಿ, ಎಆರ್ ಮುರುಗಾದಾಸ್, ತ್ರಿವಿಕ್ರಮ್ ಶ್ರೀನಿವಾಸ್ ಮುಂತಾದ ಟಾಪ್ 10 ನಿರ್ದೇಶಕರಿದ್ದಾರೆ. ಅನೇಕ ನಿರ್ದೇಶಕರು ಪದ್ಮಶ್ರಿಯಂತಹ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
(2 / 10)
ಮಣಿರತ್ನಂ: ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಮಣಿರತ್ನಂ. ದಕ್ಷಿಣ ಭಾರತದ ಸಿನಿಮಾಗಳಿಗೆ ಇವರು ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಇವರಿಗೆ ಕೇಂದ್ರ ಸರಕಾರವು ಪ್ರತಿಷ್ಠಿತ ಪದ್ಮಶ್ರಿ ಪ್ರಶಸ್ತಿ ನೀಡಿದೆ. ಚಂದವನವನದಲ್ಲಿ ಪಲ್ಲವಿ ಅನುಪಲ್ಲವಿ ಸಿನಿಮಾ ನಿರ್ದೇಶಿಸಿದ ಬಳಿಕ ಮಣಿರತ್ನಂ ಬಳಿಕ ಮಲಯಾಳಂನಲ್ಲಿ ಉನರೋ ಎಂಬ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇದಾದ ಬಳಿಕ ತಮಿಳು, ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿದ್ದುಕೊಂಡು ಹಲವು ಸುಂದರ ಸಿನಿಮಾಗಳನ್ನು ನೀಡಿದ್ದಾರೆ. ಪೊನ್ನಿಯನ್ ಸೆಲ್ವನ್, ಕತ್ರು ವೆಲಿದೈ, ಓ ಕಾದಲ್ ಕಣ್ಮಣಿ, ರಾವಣನ್, ರಾವನ್, ಗುರು, ಯುವ, ಕಣ್ಣತ್ತಿಲ್ ಮುತ್ತುಮಿತ್ತೈ ಸೇರಿದಂತೆ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.
(3 / 10)
ಉಪೇಂದ್ರ : ಸ್ಯಾಂಡಲ್‌ವುಡ್‌ನ ಉಪೇಂದ್ರ ಕೂಡ ದಕ್ಷಿಣ ಭಾರತದ ಜನಪ್ರಿಯ, ಯಶಸ್ವಿ ಸಿನಿಮಾ ನಿರ್ದೇಶಕರು. ಕನ್ನಡ ಚಿತ್ರರಂಗಕ್ಕೆ ಡಿಫರೆಂಟ್ ಸಿನಿಮಾಗಳನ್ನು ನೀಡಿರುವ ಖ್ಯಾತಿ ಇವರದ್ದು. ಶ್ರೀರಾಮಚಂದ್ರ, ತರ್ಲೆ ನನ್ ಮಗ, ಶ್, ಓಂ, ಆಪರೇಷನ್ ಅಂತ, ಓಂಕಾರಣ್ (ತೆಲುಗು), ಸ್ವಸ್ತಿಕ್, ಎ, ಉಪೇಂದ್ರ, ರಾ, ಎಚ್2ಒ, ಸೂಪರ್ ಸ್ಟಾರ್, ಹಾಲಿವುಡ್, ರಕ್ತಕಣ್ಣೀರು, ಸೂಪರ್, ಕಟಾರಿ ವೀರ ಸುರಸುಂದರಾಂಗಿ, ಟೋಪಿವಾಲಾ, ಉಪ್ಪಿ 2 ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.
(4 / 10)
ಅಟ್ಲಿ: ಜವಾನ್ ಸಿನಿಮಾದ ಯಶಸ್ಸು ಅಟ್ಲಿಯನ್ನು ಜನಪ್ರಿಯ ನಿರ್ದೇಶಕನ ಸೀಟ್‌ನಲ್ಲಿ ಕುಳ್ಳಿರಿಸಿತು. ಮೊದಲ ಸಿನಿಮಾ ರಾಜಾರಾಣಿಯಲ್ಲೇ ತನ್ನ ಪ್ರತಿಭೆ ತೋರಿಸಿದ್ದರು. ರಾಜಾರಾಣಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸದ್ಯ ಬಹುಬೇಡಿಕೆಯ ಯಶಸ್ವಿ ನಿರ್ದೇಶಕರಾಗಿದ್ದಾರೆ.
(5 / 10)
ಪ್ರಶಾಂತ್ ನೀಲ್: ಕನ್ನಡದ ಇನ್ನೊಬ್ಬ ಪ್ರತಿಭೆ ಪ್ರಶಾಂತ್ ನೀಲ್. ಕನ್ನಡ ಮತ್ತು ತೆಲುಗು ಸಿನಿಮಾ ನಿರ್ದೇಶಿಸಿದ್ದಾರೆ. ಉಗ್ರಂ, ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.
(6 / 10)
ಎಸ್. ಶಂಕರ್: ದಕ್ಷಿಣ ಭಾರತ ಸಿನಿಮಾರಂಗದ ಶೋಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಎಸ್ ಶಂಕರ್ ಕೂಡ ಜನಪ್ರಿಯ ನಿರ್ದೇಶಕ. ರೋಬೊ 2.0 ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ.
(8 / 10)
ತ್ರಿವಿಕ್ರಮ್ ಶ್ರೀನಿವಾಸ್: ನುವ್ವೆ ನುವ್ವೆ ಸಿನಿಮಾದ ಮೂಲಕ ನಿರ್ದೇಶನ ಆರಂಭಿಸಿದ ತೆಲುಗು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕೂಡ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.
(9 / 10)
ಲೋಕೇಶ್ ಕನಕರಾಜು: ತೆಲುಗು ಚಿತ್ರರಂಗದಲ್ಲಿ ಲೋಕೇಶ್ ಕನಕರಾಜು ಜನಪ್ರಿಯ ಹೆಸರು. ಅಯ್ಯಲ್ ಸಿನಿಮಾದ ಮೂಲಕ ನಿರ್ದೇಶನ ಆರಂಭಿಸಿದರು. ವಿಕ್ರಮ್, ಕಥತಿ, ಮಾಸ್ಟರ್ ಮತ್ತು ಲಿಯೊ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.
(10 / 10)
ರಿಷಬ್ ಶೆಟ್ಟಿ: ಕನ್ನಡದಲ್ಲಿ ಹಲವು ಜನಪ್ರಿಯ ನಿರ್ದೇಶಕರಿದ್ದಾರೆ. ಪುಟ್ಟಣ ಕಣಗಾಲ್ ಸೇರಿದಂತೆ ಹಲವು ನಿರ್ದೇಶಕರು ನೆನಪಿಗೆ ಬರಬಹುದು. ಇತ್ತೀಚಿನ ವರ್ಷಗಳಲ್ಲಿ ರಿಷಬ್ ಶೆಟ್ಟಿ ನಿರ್ದೇಶಕನಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ತಾನೇ ತನಗೆ ಸಿನಿಮಾ ಮಾಡಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದುಕೊಂಡು ಪ್ರತಿಭಾನ್ವಿತ. ಕಾಂತಾರ, ಕಿರಿಕ್ ಪಾರ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಿಕ್ಕಿ, ರುದ್ರಪ್ರಯಾಗ್ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಕಾಂತಾರ ಸಿನಿಮಾದ ನಟನೆಗೆ ಇವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿತ್ತು.
ಇತರ ಗ್ಯಾಲರಿಗಳು