ಅಂತೂ ಇಂತೂ ಡಾ ಬ್ರೋಗೆ ಮೀಸೆ ಬಂತು; ಹೊಸ ವರ್ಷಕ್ಕೆ ಗಗನ್ ಶ್ರೀನಿವಾಸ್ ನಯಾ ಲುಕ್ ನೋಡಿ ಫ್ಯಾನ್ಸ್ ಬಗೆಬಗೆ ಕಾಮೆಂಟ್
- Dr Bro: ಕನ್ನಡದ ಖ್ಯಾತ ಯೂಟ್ಯೂಬರ್ ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್, ಇದೀಗ ಹೊಸ ವರ್ಷದ ಮೊದಲ ದಿನ ಸೋಷಿಯಲ್ ಮೀಡಿಯಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೈಜಿರಿಯಾ ದೇಶ ಸುತ್ತಾಡಿದ್ದ ಡಾ ಬ್ರೋ, ಈಗ ಯಾವ ದೇಶವನ್ನು ಎಕ್ಸ್‌ಪ್ಲೋರ್ ಮಾಡುತ್ತಿದ್ದಾರೆ? ಅದಕ್ಕೂ ಉತ್ತರ ನೀಡಿದ್ದು, ಜತೆಗೆ ಗಗನ್ ಮುಖದ ಮೇಲಿನ ಬದಲಾವಣೆಯೂ ನೆಟ್ಟಿಗರ ಕಣ್ಣಿಗೆ ಬಿದ್ದಿದೆ.

(1 / 7)
ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಈಗ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ. ಒಂದು ವೇಳೆ ಬಂದರೂ ಏನಾದರೊಂದು ಹೊಸ ವಿಚಾರ ಹೊತ್ತು ಆಗಿಸುತ್ತಾರೆ.
(Instagrm\ Dr Bro)(2 / 7)
ಕಳೆದ ತಿಂಗಳು ನೈಜೀರಿಯಾ ದೇಶವನ್ನು ಎಕ್ಸ್‌ಪ್ಲೋರ್ ಮಾಡಿದ್ದ ಗಗನ್ ಶ್ರೀನಿವಾಸ್, ಅಲ್ಲಿನ ಜನ ಜೀವನ ಸೇರಿ ಆಚಾರ ವಿಚಾರ, ಸಂಸ್ಕೃತಿ ಬಗ್ಗೆಯೂ ತಿಳಿಸಿಕೊಟ್ಟಿದ್ದರು.
(3 / 7)
ಹಾಗಾದರೆ, ಹೊಸ ವರ್ಷಕ್ಕೆ ಯಾವ ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಡಾ. ಬ್ರೋ? ಅದಕ್ಕೆ ಉತ್ತರ ನೇಪಾಳ. ಹೌದು ಸದ್ಯ ನೇಪಾಳದಲ್ಲಿದ್ದಾರೆ ಗಗನ್. ಅಲ್ಲಿನ ಒಂದಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
(4 / 7)
ವಿಶೇಷ ವಿನ್ಯಾಸದ ಉಡುಗೆಯಲ್ಲಿ ನಾಲ್ಕೈದು ಫೋಟೋಗಳನ್ನು ಗಗನ್ ಶ್ರೀನಿವಾಸ್ ಶೇರ್ ಮಾಡಿದ್ದಾರೆ. ಆ ಪೋಟೋಳಿಗೂ ಒಳ್ಳೆ ಕ್ಯಾಪ್ಷನ್ ನೀಡಿದ್ದಾರೆ.
(5 / 7)
2024ರಲ್ಲಿ ನಾನು ನನ್ನ ಲೇಜಿನೆಸ್‌ಅನ್ನು ಕಿಲ್ ಮಾಡಿಕೊಂಡಿದ್ದೇನೆ. 2025ರಲ್ಲಿ ಹೆಚ್ಚು ಆಕ್ಟಿವ್ ಆಗಿರುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ವೆಲ್‌ಕಮ್ ಟು ನೇಪಾಳ ಎಂದೂ ಹೇಳಿದ್ದಾರೆ.
(6 / 7)
ಹೀಗೆ ಪೋಟೋ ಹಂಚಿಕೊಂಡಿದ್ದೇ ತಡ, ನೆಟ್ಟಿಗರು ಬಗೆಬಗೆ ಕಾಮೆಂಟ್ ಮೂಲಕ ಅವರಿಗೆ ಹೊಸ ವರ್ಷದ ಶುಭಾಶಯ ಕೋರುತ್ತಿದ್ದಾರೆ.
ಇತರ ಗ್ಯಾಲರಿಗಳು