ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇದು ಹೊಸ ಅಧ್ಯಾಯ ಎನ್ನುತ್ತಾರೆ, ಆದರೆ ಹಳೆ ಅಧ್ಯಾಯವನ್ನೇ ತಿರುವಿ ಹಾಕ್ತಿದ್ದಾರೆ; ಆರ್​​ಸಿಬಿ ವಿರುದ್ಧ ಫ್ಯಾನ್ಸ್ ಸಿಕ್ಕಾಪಟ್ಟೆ ಗರಂ

ಇದು ಹೊಸ ಅಧ್ಯಾಯ ಎನ್ನುತ್ತಾರೆ, ಆದರೆ ಹಳೆ ಅಧ್ಯಾಯವನ್ನೇ ತಿರುವಿ ಹಾಕ್ತಿದ್ದಾರೆ; ಆರ್​​ಸಿಬಿ ವಿರುದ್ಧ ಫ್ಯಾನ್ಸ್ ಸಿಕ್ಕಾಪಟ್ಟೆ ಗರಂ

  • RCB Brutally TROLLED: ಆರ್​​ಆರ್​ ವಿರುದ್ಧ ಸೋಲಿನ ಬೆನ್ನಲ್ಲೇ ಆರ್​ಸಿಬಿ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​​ನಲ್ಲಿ ವಿರಾಟ್ ಕೊಹ್ಲಿ ಹೇಳಿದ್ದ ಮಾತುಗಳನ್ನೇ ಉಲ್ಲೇಖಿಸಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

2024ರ ಐಪಿಎಲ್​ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಸೋಲನುಭವಿಸಿತು. ರಾಜಸ್ಥಾನ್ ರಾಯಲ್ಸ್ ಸತತ ನಾಲ್ಕನೇ ಜಯದ ನಗೆ ಬೀರಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅತ್ತ ಸೋತ ಆರ್​ಸಿಬಿ 8ನೇ ಸ್ಥಾನದಲ್ಲೇ ಮುಂದುವರೆದಿದೆ.
icon

(1 / 7)

2024ರ ಐಪಿಎಲ್​ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಸೋಲನುಭವಿಸಿತು. ರಾಜಸ್ಥಾನ್ ರಾಯಲ್ಸ್ ಸತತ ನಾಲ್ಕನೇ ಜಯದ ನಗೆ ಬೀರಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅತ್ತ ಸೋತ ಆರ್​ಸಿಬಿ 8ನೇ ಸ್ಥಾನದಲ್ಲೇ ಮುಂದುವರೆದಿದೆ.(AP)

ಮೊದಲು ಬ್ಯಾಟಿಂಗ್ ನಡೆಸಿದ ಆರ್​​ಸಿಬಿ, ವಿರಾಟ್ ಕೊಹ್ಲಿ ಅವರ (113) ಶತಕದ ನೆರವಿನಿಂದ 20 ಓವರ್​​ಗೆ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸ್ತು. ಈ ಗುರಿ ಬೆನ್ನಟ್ಟಿದ ಆರ್​ಆರ್​ ಪರ ಜೋಸ್​ ಬಟ್ಲರ್​ (100) ಶತಕ ಮತ್ತು ಸಂಜು ಸ್ಯಾಮ್ಸನ್​ರ (69) ಆಕರ್ಷಕ ಸಿಡಿಸಿ ಜಯದ ಕಾಣಿಕೆ ನೀಡಿದರು.
icon

(2 / 7)

ಮೊದಲು ಬ್ಯಾಟಿಂಗ್ ನಡೆಸಿದ ಆರ್​​ಸಿಬಿ, ವಿರಾಟ್ ಕೊಹ್ಲಿ ಅವರ (113) ಶತಕದ ನೆರವಿನಿಂದ 20 ಓವರ್​​ಗೆ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸ್ತು. ಈ ಗುರಿ ಬೆನ್ನಟ್ಟಿದ ಆರ್​ಆರ್​ ಪರ ಜೋಸ್​ ಬಟ್ಲರ್​ (100) ಶತಕ ಮತ್ತು ಸಂಜು ಸ್ಯಾಮ್ಸನ್​ರ (69) ಆಕರ್ಷಕ ಸಿಡಿಸಿ ಜಯದ ಕಾಣಿಕೆ ನೀಡಿದರು.(AP)

ಆರ್​ಸಿಬಿ ಪ್ರಸಕ್ತ ಟೂರ್ನಿಯಲ್ಲಿ ಆಡಿರುವ ಐದು ಪಂದ್ಯಗಳ ಪೈಕಿ ಸತತ 3ನೇ ಹಾಗೂ ಒಟ್ಟು 4ನೇ ಸೋಲನುಭವಿಸಿದೆ. ಒಂದರಲ್ಲಿ ಮಾತ್ರ ಜಯಿಸಿದೆ. ಸಿಎಸ್​ಕೆ, ಎಲ್​ಎಸ್​ಜಿ, ಆರ್​​ಆರ್​, ಕೆಕೆಆರ್​ ವಿರುದ್ಧ ಘೋರ ಪರಾಭವಗೊಂಡಿದೆ. ಪಿಬಿಕೆಎಸ್ ವಿರುದ್ಧ ಗೆದ್ದಿದೆ.
icon

(3 / 7)

ಆರ್​ಸಿಬಿ ಪ್ರಸಕ್ತ ಟೂರ್ನಿಯಲ್ಲಿ ಆಡಿರುವ ಐದು ಪಂದ್ಯಗಳ ಪೈಕಿ ಸತತ 3ನೇ ಹಾಗೂ ಒಟ್ಟು 4ನೇ ಸೋಲನುಭವಿಸಿದೆ. ಒಂದರಲ್ಲಿ ಮಾತ್ರ ಜಯಿಸಿದೆ. ಸಿಎಸ್​ಕೆ, ಎಲ್​ಎಸ್​ಜಿ, ಆರ್​​ಆರ್​, ಕೆಕೆಆರ್​ ವಿರುದ್ಧ ಘೋರ ಪರಾಭವಗೊಂಡಿದೆ. ಪಿಬಿಕೆಎಸ್ ವಿರುದ್ಧ ಗೆದ್ದಿದೆ.(ANI)

ಆರ್​​ಆರ್​ ವಿರುದ್ಧ ಸೋಲಿನ ಬೆನ್ನಲ್ಲೇ ಆರ್​ಸಿಬಿ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​​ನಲ್ಲಿ ಕೊಹ್ಲಿ ಹೇಳಿದ್ದ ಮಾತುಗಳನ್ನೇ ಉಲ್ಲೇಖಿಸಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
icon

(4 / 7)

ಆರ್​​ಆರ್​ ವಿರುದ್ಧ ಸೋಲಿನ ಬೆನ್ನಲ್ಲೇ ಆರ್​ಸಿಬಿ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​​ನಲ್ಲಿ ಕೊಹ್ಲಿ ಹೇಳಿದ್ದ ಮಾತುಗಳನ್ನೇ ಉಲ್ಲೇಖಿಸಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.(ANI)

ಅಂದು ಕೊಹ್ಲಿ 'ಇದು ಆರ್​ಸಿಬಿಯ ಹೊಸ ಅಧ್ಯಾಯ' ಎಂದು ಹೇಳಿದ್ದರು. ಆದರೆ ಫ್ಯಾನ್ಸ್​ ಟ್ರೋಲ್ ಮಾಡುತ್ತಿದ್ದಾರೆ. ಹೊಸ ಅಧ್ಯಾಯ ಎನ್ನುತ್ತಾರೆ, ಆದರೆ ಹಳೆ ಅಧ್ಯಾಯವನ್ನೇ ತಿರುವಿ ಹಾಕ್ತಿದ್ದಾರೆ ಎಂದು ಆರ್​​ಸಿಬಿ ವಿರುದ್ಧ ಫ್ಯಾನ್ಸ್​ ಗರಂ ಆಗಿದ್ದಾರೆ.
icon

(5 / 7)

ಅಂದು ಕೊಹ್ಲಿ 'ಇದು ಆರ್​ಸಿಬಿಯ ಹೊಸ ಅಧ್ಯಾಯ' ಎಂದು ಹೇಳಿದ್ದರು. ಆದರೆ ಫ್ಯಾನ್ಸ್​ ಟ್ರೋಲ್ ಮಾಡುತ್ತಿದ್ದಾರೆ. ಹೊಸ ಅಧ್ಯಾಯ ಎನ್ನುತ್ತಾರೆ, ಆದರೆ ಹಳೆ ಅಧ್ಯಾಯವನ್ನೇ ತಿರುವಿ ಹಾಕ್ತಿದ್ದಾರೆ ಎಂದು ಆರ್​​ಸಿಬಿ ವಿರುದ್ಧ ಫ್ಯಾನ್ಸ್​ ಗರಂ ಆಗಿದ್ದಾರೆ.(AFP)

ಆಟಗಾರರು ಪದೆಪದೇ ವೈಫಲ್ಯ ಅನುಭವಿಸುತ್ತಿದ್ದರೂ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವುದು ಎಷ್ಟು ಸರಿ? ವಿಜಯ್ ಕುಮಾರ್​ ವೈಶಾಕ್​ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರೂ ಅವಕಾಶ ನೀಡದೇ ಇರುವುದು ಏಕೆ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದಾರೆ.
icon

(6 / 7)

ಆಟಗಾರರು ಪದೆಪದೇ ವೈಫಲ್ಯ ಅನುಭವಿಸುತ್ತಿದ್ದರೂ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವುದು ಎಷ್ಟು ಸರಿ? ವಿಜಯ್ ಕುಮಾರ್​ ವೈಶಾಕ್​ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರೂ ಅವಕಾಶ ನೀಡದೇ ಇರುವುದು ಏಕೆ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದಾರೆ.(AFP)

ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಕ್ಯಾಮರೂನ್ ಗ್ರೀನ್​ ಒಂದು ಬಾರಿಯೂ ಮಿಂಚಿಲ್ಲ. ಕೋಟಿ ಕೋಟಿ ಕೊಟ್ಟರೂ ಕೊಡುಗೆ ಕೊಡದ ಆಟಗಾರರ ಬದಲಿಗೆ ಬೇರೆ ಆಟಗಾರರಿಗೆ ಅವಕಾಶ ನೀಡಲು ಆಗುವುದಿಲ್ಲವೇ ಎಂದು ಆರ್​ಸಿಬಿ ಮ್ಯಾನೇಜ್​ಮೆಂಟ್​​ ವಿರುದ್ಧ ಕಿಡಿಕಾರಿದ್ದಾರೆ.
icon

(7 / 7)

ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಕ್ಯಾಮರೂನ್ ಗ್ರೀನ್​ ಒಂದು ಬಾರಿಯೂ ಮಿಂಚಿಲ್ಲ. ಕೋಟಿ ಕೋಟಿ ಕೊಟ್ಟರೂ ಕೊಡುಗೆ ಕೊಡದ ಆಟಗಾರರ ಬದಲಿಗೆ ಬೇರೆ ಆಟಗಾರರಿಗೆ ಅವಕಾಶ ನೀಡಲು ಆಗುವುದಿಲ್ಲವೇ ಎಂದು ಆರ್​ಸಿಬಿ ಮ್ಯಾನೇಜ್​ಮೆಂಟ್​​ ವಿರುದ್ಧ ಕಿಡಿಕಾರಿದ್ದಾರೆ.(AFP)


IPL_Entry_Point

ಇತರ ಗ್ಯಾಲರಿಗಳು