ಗಂಡನ ರಾಸಲೀಲೆ ನೋಡಿದ ಗರ್ಭಿಣಿ ಪತ್ನಿ ಬಗ್ಗೆ ಪ್ರೇಕ್ಷಕರಿಗೆ ಕರುಣೆಯೇ ಇಲ್ಲ! ಅಮೃತಧಾರೆ ಮಲ್ಲಿಗೆ ತಕ್ಕ ಶಾಸ್ತ್ರಿಯಾಯ್ತು-fans angry about amruthadhaare serial malli after she knows jaidev diya relationship kannada serial photo story pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಂಡನ ರಾಸಲೀಲೆ ನೋಡಿದ ಗರ್ಭಿಣಿ ಪತ್ನಿ ಬಗ್ಗೆ ಪ್ರೇಕ್ಷಕರಿಗೆ ಕರುಣೆಯೇ ಇಲ್ಲ! ಅಮೃತಧಾರೆ ಮಲ್ಲಿಗೆ ತಕ್ಕ ಶಾಸ್ತ್ರಿಯಾಯ್ತು

ಗಂಡನ ರಾಸಲೀಲೆ ನೋಡಿದ ಗರ್ಭಿಣಿ ಪತ್ನಿ ಬಗ್ಗೆ ಪ್ರೇಕ್ಷಕರಿಗೆ ಕರುಣೆಯೇ ಇಲ್ಲ! ಅಮೃತಧಾರೆ ಮಲ್ಲಿಗೆ ತಕ್ಕ ಶಾಸ್ತ್ರಿಯಾಯ್ತು

  • ಅಮೃತಧಾರೆ ಧಾರಾವಾಹಿಯಲ್ಲಿ ಗರ್ಭಿಣಿ ಮಲ್ಲಿ ಜೈದೇವ್‌ನ ರಾಸಲೀಲೆಯನ್ನು ಕಣ್ಣಾರೆ ನೋಡಿಬಿಟ್ಟಿದ್ದಾಳೆ. ಈಕೆಗೆ ಸತ್ಯ ಗೊತ್ತಾಗಿರುವ ಸಂಗತಿ ತಿಳಿದ ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ "ಮಲ್ಲಿಗೆ ಹೀಗೆ ಆಗಬೇಕು" ಎಂದೆಲ್ಲ ಬಯ್ಯುತ್ತಿದ್ದಾರೆ.  ಮಲ್ಲಿ ಮಾಡಿದ ತಪ್ಪೇನು? ಜೈದೇವ್‌ನ ಗರ್ಭಿಣಿ ಪತ್ನಿ ಬಗ್ಗೆ ಪ್ರೇಕ್ಷಕರಿಗೆ ಯಾಕೆ ಕರುಣೆ ಇಲ್ಲ? ತಿಳಿಯೋಣ ಬನ್ನಿ.

ಧಾರಾವಾಹಿಗಳಲ್ಲಿ ಪ್ರೇಕ್ಷಕರು ಕೆಲವೊಂದು ಪಾತ್ರಗಳನ್ನು ತುಂಬಾ ಇಷ್ಟಪಡುತ್ತಾರೆ. ಕೆಲವೊಂದು ಪಾತ್ರಗಳ ವರ್ತನೆ ಬದಲಾದಗ ಆ ಪಾತ್ರವನ್ನೇ ದ್ವೇಷಿಸಲು ಆರಂಭಿಸುತ್ತಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾಳನ್ನು ಮೊದಲು ಎಲ್ಲರೂ ಅಪ್ಪಿ ಅಪ್ಪಿ ಅನ್ತಾ ಇದ್ರು. ಈಗ ಅವಳ ವರ್ತನೆ ಬದಲಾಗಿರುವುದರಿಂದ ಪ್ರೇಕ್ಷಕರು ಆಕೆಗೆ ಬಯ್ಯಲು ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಮಲ್ಲಿ ಎಂಬ ಕ್ಯಾರೆಕ್ಟರ್‌ಗೂ ಪ್ರೇಕ್ಷಕರು ಪ್ರೀತಿಯಿಂದ ಬಯ್ಯುತ್ತಿದ್ದಾರೆ. 
icon

(1 / 8)

ಗರ್ಭಿಣಿ ಮಲ್ಲಿ ತವರು ಮನೆಗೆ ಅಂದ್ರೆ ತನ್ನ ಅಜ್ಜನ ಹಳ್ಳಿಗೆ ಹೊರಟಿದ್ದಾಳೆ. ಈಕೆಯ ಜತೆ ಜೈದೇವ್‌ ಕೂಡ ಇದ್ದಾನೆ. ಜೈದೇವ್‌ಗೆ ಚಮಕ್‌ಚಲ್ಲೋ ದಿಯಾಳ ಜತೆ ಅಕ್ರಮ ಸಂಬಂಧ ಇದೆ. ಹೀಗೆ ಊರಿಗೆ ಹೋಗುತ್ತಾ ದಾರಿಯಲ್ಲಿ ಕಾರು ನಿಲ್ಲಿಸಿದ ಜೈದೇವ್‌ ಮಲ್ಲಿಗೆ ಗೊತ್ತಾಗದಂತೆ ದಿಯಾಳ ಕಾರಿನೊಳಗೆ ಹೋಗಿ ರಾಸಲೀಲೆ ಆರಂಭಿಸಿದ್ದಾನೆ. ತುಂಬಾ ಹೊತ್ತಾದರೂ ಜೈದೇವ್‌ ಬಾರದೆ ಇರುವ ಕಾರಣ ಹೊರಗಿಳಿದ ಮಲ್ಲಿಗೆ ಜೈದೇವ್‌ ಕಾರಿನೊಳಗೆ ದಿಯಾಳ ಜತೆಗೆ ಇರುವುದು ಕಾಣಿಸಿದೆ. "ಮಲ್ಲಿ ಮತ್ತು ಜಯದೇವ್ ಮನೆಯಿಂದ ಹೋಗಿದ್ದ ಸ್ಕೋಡಾ ಕಾರಲ್ಲಿ.. ಮಲ್ಲಿಯನ್ನ ಬಿಟ್ಟು ಜಯದೇವ್ ಇಳಿದು ಹೋಗಿದ್ದೂ ಅದೇ ವೈಟ್ ಬೋರ್ಡ್ ಸ್ಕೋಡಾ ಕಾರ್‌ನಿಂದ.. ಆದರೆ ನಂತ್ರ ಮಲ್ಲಿ ಜೈದೇವ್‌ನ ಹುಡುಕಲು ಕೆಳಗಿದ್ದಿದ್ದು ಯಲ್ಲೋ ಬೋರ್ಡ್  ಟ್ಯಾಕ್ಸಿಯಿಂದ .. ಇದು ಹೇಗೆ ಸಾಧ್ಯ?" ಇಂತಹ ಸಂಶಯವೂ ಈ ಸಂದರ್ಭದಲ್ಲಿ ಮೂಡಿದೆ. 
icon

(2 / 8)

ಈ ರೀತಿ ಜೈದೇವ್‌ ದಿಯಾಳ ಜತೆಗಿರುವುದನ್ನು ನೋಡಿದ ಮಲ್ಲಿ ಶಾಕ್‌ಗೆ ಒಳಗಾಗಿದ್ದಾಳೆ. ಈ ಪ್ರಮೋವನ್ನು ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಪ್ರೇಕ್ಷಕರು ಮಲ್ಲಿಗೆ ಬಯ್ಯುತ್ತಿದ್ದಾರೆ. ನಿನಗೆ ಹೀಗೆಯೇ ಆಗಬೇಕು ಎಂದೆಲ್ಲ ಹೇಳುತ್ತಿದ್ದಾರೆ. ಅಯ್ಯೋ ಈ ಪಾಪದ ಮಲ್ಲಿಗೆ ಯಾಕೆ ಬಯ್ಯುತ್ತಿದ್ದಾರೆ ಎಂದುಕೊಂಡಿದ್ದೀರಾ? ಇತ್ತೀಚೆಗೆ  ಭೂಮಿಕಾ ಮಲ್ಲಿಗೆ ಜೈದೇವ್‌ನ ಕುರಿತು ಎಚ್ಚರಿಕೆ ನೀಡಿದ್ದಳು. ಆಗ ಮಲ್ಲಿ ಭೂಮಿಕಾಳಿಗೆ ಎದುರುತ್ತರ ನೀಡಿ ಬೈದಿದ್ದಳು. ಭೂಮಿಕಾಳನ್ನು ಅಪಾರವಾಗಿ ಪ್ರೀತಿಸುವ ಪ್ರೇಕ್ಷಕರಿಗೆ ಇದು ಬೇಸರ ತಂದಿತ್ತು. ಸಹಜವಾಗಿ ಪ್ರೇಕ್ಷಕರಿಗೆ ಮಲ್ಲಿ ಬಗ್ಗೆ ಅಸಹನೆ ಮೂಡಿತ್ತು.
icon

(3 / 8)

ಪ್ರೇಕ್ಷಕರ ಕಾಮೆಂಟ್‌ಗಳು: "ಮಲ್ಲಿಗೆ ಹಿಂಗೆ ಆಗ್ಬೇಕು ಪಾಪ ಭೂಮಿಕಾ ಹೇಳಿದ್ರಿ ಕೇಳಲಿಲ್ಲ ನಿನಗೆ ಇದು ಆಗಲೇಬೇಕು ಅನುಭವಿಸು" "ಮಳ್ಳಿ ..... ಮಲ್ಲಿ ಇಗ ಆದ್ರೂ ಬದಲಾಗು. ಮಳ್ಳಿ ತರ ಮಾಡೋದು ಬಿಡು" "ಮಲ್ಲಿ ಆಗ್ಬೇಕು ನಿನಗೆ" "ಮಲ್ಲಿ ಯಾವದು ಸತ್ಯ ಯಾವದು ಸುಳ್ಳು ಈವಾಗ ಗೊತ್ತಾಯ್ತಾ" ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ  ಅಮೃತಧಾರೆ ವೀಕ್ಷಕರು ಕಾಮೆಂಟ್‌ ಮಾಡಿದ್ದಾರೆ.
icon

(4 / 8)

"ಅಕ್ಕೋರೆ ಹಾಗೇ ಆಗಬೇಕು" "ಈ ಬೋಸಡಿಗೆ ಹೀಗೆ ಆಗಬೇಕಿತ್ತು" "ಇವಳಿಗೆ ಹೀಗೆ ಆಗಬೇಕು ಇನ್ನೂ ಜಾಸ್ತಿ ಕಷ್ಟ ಕೊಡಿ ನಮಗೆ ನೋಡುವಾಗ ಖುಷಿ ಆಗುತ್ತದೆ" "ದೊಡ್ಡದಾಗಿ ಹೆಲ್ಬಿಟ್ಲು ಇವ್ಳು ನನ್ನ ಗಂಡ ಸ್ಯಾನೆ ಒಳ್ಳೇ ಅವ್ರು ಅಂತ ಅ ಮಲ್ಲಿ ನೋಡಮ್ಮ ನಿನ್ ಗಂಡನ ಸ್ವಲ್ಪ ಈವಾಗ ನಿನ್ಗೆ ಹೀಗೆ ಆಗ್ಬೇಕು ಬಿಡು ಪಾಪ ಭೂಮಿನಾ ಅಪಾರ್ಥ ಮಾಡ್ಕೊಂಡೆ ಅಲ್ವ ಅದಕ್ಕೆ ನಿನ್ಗೆ ಹೀಗೆ ಆಗ್ಬೇಕು ನಿನ್ಗೆ" "ಈಗೆ ಆಗಬೇಕು ಈ ***ಗೆ. ಅಪೇಕ್ಷ ನಿಗೂ ಏನಾದ್ರೂ ಆಗಬೇಕು ಆವಾಗ್ಲೇ ಅಕ್ಕ ನ ಬೆಲೆ ತಿಳಿಯೋದು" ಎಂದೆಲ್ಲ ಪ್ರೇಕ್ಷಕರು ತಮ್ಮ ಆಕ್ರೋಶವನ್ನು ಮಲ್ಲಿ ವಿರುದ್ಧ ತೋರಿಸಿದ್ದಾರೆ.
icon

(5 / 8)

ಯಾರಿದು ಮಲ್ಲಿ?: ಮಲ್ಲಿ ಗೌತಮ್‌ ದಿವಾನ್‌ ಮನೆಯ ಕೆಲಸದ ತಾತಾನ ಮೊಮ್ಮಗಳು. ಜೈದೇವ್‌ ಈಕೆಯನ್ನು ಮರಳು ಮಾಡಿ ಗರ್ಭಿಣಿ ಮಾಡಿದ್ದ. ಈ ವಿಷಯ ತಿಳಿದ ಭೂಮಿಕಾ, ಗೌತಮ್‌ ಮಲ್ಲಿ ಜತೆ ಜೈದೇವ್‌ಗೆ ಮದುವೆ ಮಾಡಿಸಿದ್ದರು. ಅಂದಿನಿಂದ ಜೈದೇವ್‌ ಈಕೆಯನ್ನು ಸಾಯಿಸಲು ಯತ್ನಿಸುತ್ತಿದ್ದ. ಇದೇ ಸಮಯದಲ್ಲಿ ಮಲ್ಲಿಗೆ ತಿಳಿಯದಂತೆ ದಿಯಾಳ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ತಿಳಿದ ಗೌತಮ್‌, ಭೂಮಿಕಾ ಜೈದೇವ್‌ಗೆ ಬುದ್ಧಿ ಹೇಳಿದ್ದರು. ಗೃಹ ಬಂಧನದ ಶಿಕ್ಷೆ ವಿಧಿಸಿದ್ದರು.
icon

(6 / 8)

ಏನೂ ಮಾಡಿದರೂ ಜೈದೇವ್‌ ದಿಯಾಳ ಸಹವಾಸ ಬಿಡಲಿಲ್ಲ. ಆಗಾಗ ಕದ್ದುಮುಚ್ಚಿ ದಿಯಾಳನ್ನು ಭೇಟಿಯಾಗುತ್ತಿದ್ದ. ಈ ಸುಳಿವು ದೊರಕಿದ ಭೂಮಿಕಾ ಮಲ್ಲಿಗೆ "ಜೈದೇವ್‌ ವಿಚಾರದಲ್ಲಿ ಎಚ್ಚರಿಕೆಯಿಂದ ಇರು" ಎಂದು ಸಲಹೆ ನೀಡಿದ್ದರು. ಈ ಸಮಯದಲ್ಲಿ ಭೂಮಿಕಾಳಿಗೆ ಮಲ್ಲಿ ಎದುರು ಮಾತನಾಡಿದ್ದಳು. ಅಪೇಕ್ಷಾಳ ಬಳಿಯೂ "ಭೂಮಿಕಾ ಹಿಂಗಿಂಗೆ ಹೇಳಿದ್ರು" ಅಂತ ಚಾಡಿ ಹೇಳಿದ್ದಳು. ಈಗ ಮಲ್ಲಿಗೆ ಸತ್ಯ ದರ್ಶನವಾಗಿದೆ. 
icon

(7 / 8)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಅಣ್ಣಯ್ಯ ಸೀರಿಯಲ್‌, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(8 / 8)

ಇತರ ಗ್ಯಾಲರಿಗಳು