ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jhumka Fashion: ಬಾಲಿವುಡ್‌ ಬೆಡಗಿಯರನ್ನೂ ಬಿಟ್ಟಿಲ್ಲ ಜುಮುಕಿ ವ್ಯಾಮೋಹ; ಸಾಂಪ್ರದಾಯಿಕ ಜುಮ್ಕಾ ಲುಕ್‌ನಲ್ಲಿ ಮಿಂಚಿರುವ ನಟಿಮಣಿಯರಿವರು

Jhumka Fashion: ಬಾಲಿವುಡ್‌ ಬೆಡಗಿಯರನ್ನೂ ಬಿಟ್ಟಿಲ್ಲ ಜುಮುಕಿ ವ್ಯಾಮೋಹ; ಸಾಂಪ್ರದಾಯಿಕ ಜುಮ್ಕಾ ಲುಕ್‌ನಲ್ಲಿ ಮಿಂಚಿರುವ ನಟಿಮಣಿಯರಿವರು

ಸೀರೆ, ಒಡವೆಗಳ ಮೇಲೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಒಲವು. ಸಾಂಪ್ರದಾಯಿಕ ದಿರಿಸು ಧರಿಸಿದಾಗ ಮೈ ತುಂಬಾ ಒಡವೆ ಧರಿಸುವ ಮೂಲಕ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಯಸುತ್ತಾರೆ. ಇದಕ್ಕೆ ಬಾಲಿವುಡ್‌ ಬೆಡಗಿಯರೂ ಹೊರತಲ್ಲ. ಅದರಲ್ಲೂ ಜುಮುಕಿ ಧರಿಸುವುದು ಹೆಣ್ಣುಮಕ್ಕಳಿಗೂ ಇನ್ನೂ ಇಷ್ಟ. ಜುಮುಕಿಯಲ್ಲಿ ಮಿಂಚಿದ ಬಾಲಿವುಡ್‌ ನಟಿಯರ ಫೋಟೊಗಳು ಇಲ್ಲಿವೆ ನೋಡಿ.

ಜುಮ್ಕಾ ಅಥವಾ ಜುಮುಕಿ ಆಕರ್ಷಣೆಯು ಫ್ಯಾಷನ್‌ ಜಗತ್ತನ್ನು ವ್ಯಾಪಿಸುತ್ತಿದೆ. ಜುಮುಕಿ ಧರಿಸುವುದರಿಂದ ಅಂದ ಹೆಚ್ಚುವುದೂ ಸುಳ್ಳಲ್ಲ. ಸೀರೆ, ಚೂಡಿದಾರ್‌, ಲೆಹಂಗಾದಂತಹ ಸಾಂಪ್ರದಾಯಿಕ ದಿರಿಸಿನೊಂದಿಗೆ ಜುಮುಕಿ ಹೇಳಿ ಮಾಡಿಸಿದ್ದು. ಈ ಜುಮ್ಕಾ ಇಷ್ಟು ಫೇಮಸ್ಸ್‌ ಎಂದರೆ ಇದರ ಮೇಲೆ ಹಲವು ಹಾಡುಗಳನ್ನು ಕೂಡ ಬರೆಯಲಾಗಿದೆ. ಇಂತಹ ಜುಮ್ಕಿ ಬಾಲಿವುಡ್‌ ನಟಿಮಣಿಯರಿಗೂ ಅಚ್ಚುಮೆಚ್ಚು. ಆಕ್ಸಿಡೈಟ್‌ ಜುಮುಕಿಯಿಂದ ಕ್ಲೇ ಜುಮುಕಿವರೆಗೆ ಬಾಲಿವುಡ್‌ ಬೆಡಗಿಯರ ಅಂದ ಹೆಚ್ಚಿಸಿದ ಫೋಟೊಗಳು ಇಲ್ಲಿವೆ ನೋಡಿ. 
icon

(1 / 8)

ಜುಮ್ಕಾ ಅಥವಾ ಜುಮುಕಿ ಆಕರ್ಷಣೆಯು ಫ್ಯಾಷನ್‌ ಜಗತ್ತನ್ನು ವ್ಯಾಪಿಸುತ್ತಿದೆ. ಜುಮುಕಿ ಧರಿಸುವುದರಿಂದ ಅಂದ ಹೆಚ್ಚುವುದೂ ಸುಳ್ಳಲ್ಲ. ಸೀರೆ, ಚೂಡಿದಾರ್‌, ಲೆಹಂಗಾದಂತಹ ಸಾಂಪ್ರದಾಯಿಕ ದಿರಿಸಿನೊಂದಿಗೆ ಜುಮುಕಿ ಹೇಳಿ ಮಾಡಿಸಿದ್ದು. ಈ ಜುಮ್ಕಾ ಇಷ್ಟು ಫೇಮಸ್ಸ್‌ ಎಂದರೆ ಇದರ ಮೇಲೆ ಹಲವು ಹಾಡುಗಳನ್ನು ಕೂಡ ಬರೆಯಲಾಗಿದೆ. ಇಂತಹ ಜುಮ್ಕಿ ಬಾಲಿವುಡ್‌ ನಟಿಮಣಿಯರಿಗೂ ಅಚ್ಚುಮೆಚ್ಚು. ಆಕ್ಸಿಡೈಟ್‌ ಜುಮುಕಿಯಿಂದ ಕ್ಲೇ ಜುಮುಕಿವರೆಗೆ ಬಾಲಿವುಡ್‌ ಬೆಡಗಿಯರ ಅಂದ ಹೆಚ್ಚಿಸಿದ ಫೋಟೊಗಳು ಇಲ್ಲಿವೆ ನೋಡಿ. (Instagram)

ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ಅವರನ್ನು ಜುಮುಕಿ ಕ್ವೀನ್‌ ಎಂದು ಕರೆಯಲಾಗುತ್ತದೆ. ಇವರು ಸಾಮಾನ್ಯವಾಗಿ ಸಾಂಪ್ರದಾಯಿಕ ದಿರಿಸು ಧರಿಸಿದಾಗೆಲ್ಲಾ ಜುಮುಕಿ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳುತ್ತಾರೆ.  ಬಿಳಿ ಬಣ್ಣದ ಚಿಕ್‌ ಶಿಫಾನ್‌ ಸೀರೆಯೊಂದಿಗೆ ಮುತ್ತಿನ ಆಕ್ಸಿಡೈಡ್‌ ಜುಮುಕಿ ಧರಿಸಿರುವ ಆಲಿಯಾ ಅಂದಕ್ಕೆ ಅವರೇ ಸಾಟಿ. 
icon

(2 / 8)

ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ಅವರನ್ನು ಜುಮುಕಿ ಕ್ವೀನ್‌ ಎಂದು ಕರೆಯಲಾಗುತ್ತದೆ. ಇವರು ಸಾಮಾನ್ಯವಾಗಿ ಸಾಂಪ್ರದಾಯಿಕ ದಿರಿಸು ಧರಿಸಿದಾಗೆಲ್ಲಾ ಜುಮುಕಿ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳುತ್ತಾರೆ.  ಬಿಳಿ ಬಣ್ಣದ ಚಿಕ್‌ ಶಿಫಾನ್‌ ಸೀರೆಯೊಂದಿಗೆ ಮುತ್ತಿನ ಆಕ್ಸಿಡೈಡ್‌ ಜುಮುಕಿ ಧರಿಸಿರುವ ಆಲಿಯಾ ಅಂದಕ್ಕೆ ಅವರೇ ಸಾಟಿ. (Instagram/@AliaBhatt)

ಕಿಯಾರಾ ಅಡ್ವಾಣಿ ತನ್ನ ಅಪರೂಪದ ಸೌಂದರ್ಯದ ಮೂಲಕ ಗಮನ ಸೆಳೆಯುತ್ತಾರೆ. ಗುಲಾಬಿ ಬಣ್ಣದ ಸೀರೆಯೊಂದಿಗೆ ಜುಮುಕಿ ಧರಿಸಿರುವ ಕಿಯಾರಾ ನೋಟ ಕಣ್ಣನ್ನೇ ಕೊಲ್ಲುವಂತಿದೆ. ಐಷಾರಾಮಿ ಹರಳುಗಳ ಜುಮುಕಿ ಆಕೆಯ ಅಂದದೊಂದಿಗೆ ಪೈಪೋಟಿ ನೀಡಿದಂತಿದೆ. ಬಿಳಿ ಹಾಗೂ ಪಚ್ಚೆ ಹಸಿರಿನ ಜುಮುಕಿಯಲ್ಲಿ ಮಿಂಚಿದ್ದಾರೆ ಈ ಬೆಡಗಿ. 
icon

(3 / 8)

ಕಿಯಾರಾ ಅಡ್ವಾಣಿ ತನ್ನ ಅಪರೂಪದ ಸೌಂದರ್ಯದ ಮೂಲಕ ಗಮನ ಸೆಳೆಯುತ್ತಾರೆ. ಗುಲಾಬಿ ಬಣ್ಣದ ಸೀರೆಯೊಂದಿಗೆ ಜುಮುಕಿ ಧರಿಸಿರುವ ಕಿಯಾರಾ ನೋಟ ಕಣ್ಣನ್ನೇ ಕೊಲ್ಲುವಂತಿದೆ. ಐಷಾರಾಮಿ ಹರಳುಗಳ ಜುಮುಕಿ ಆಕೆಯ ಅಂದದೊಂದಿಗೆ ಪೈಪೋಟಿ ನೀಡಿದಂತಿದೆ. ಬಿಳಿ ಹಾಗೂ ಪಚ್ಚೆ ಹಸಿರಿನ ಜುಮುಕಿಯಲ್ಲಿ ಮಿಂಚಿದ್ದಾರೆ ಈ ಬೆಡಗಿ. (Instagram/@kiaraaliaadvani)

ಕಪ್ಪು ಬಣ್ಣದ ಕುರ್ತಾ ಧರಿಸಿರುವ ಅದಿತಿ ರಾವ್‌ ಹೈದರಿ, ಇದರೊಂದಿಗೆ ಎರಡೆಳೆಯ ಮುತ್ತಿನ ಜುಮುಕಿ ಧರಿಸಿದ್ದು, ಸುಂದರವಾಗಿ ಕಾಣುತ್ತಿದ್ದಾರೆ. ಹಳ್ಳಿ ಸೊಗಡಿನ ಈ ಕಿವಿಯೋಲೆ ಅವರ ಅಂದಕ್ಕೆ ಇನ್ನಷ್ಟು ಮೆರುಗು ನೀಡಿದೆ. 
icon

(4 / 8)

ಕಪ್ಪು ಬಣ್ಣದ ಕುರ್ತಾ ಧರಿಸಿರುವ ಅದಿತಿ ರಾವ್‌ ಹೈದರಿ, ಇದರೊಂದಿಗೆ ಎರಡೆಳೆಯ ಮುತ್ತಿನ ಜುಮುಕಿ ಧರಿಸಿದ್ದು, ಸುಂದರವಾಗಿ ಕಾಣುತ್ತಿದ್ದಾರೆ. ಹಳ್ಳಿ ಸೊಗಡಿನ ಈ ಕಿವಿಯೋಲೆ ಅವರ ಅಂದಕ್ಕೆ ಇನ್ನಷ್ಟು ಮೆರುಗು ನೀಡಿದೆ. (Instagram/@aditiraohydari)

ಜಾಹ್ನವಿ ಕಪೂರ್‌ ಮಾರ್ಡನ್‌ ಉಡುಪುಗಳು ಮಾತ್ರವಲ್ಲ, ಸಾಂಪ್ರದಾಯಿಕ ಉಡುಪಿನಲ್ಲೂ ಅಷ್ಟೇ ಮುದ್ದಾಗಿ ಕಾಣುತ್ತಾರೆ. ಸೀರೆ ಬಣ್ಣದ, ತೋಳಿಲ್ಲದ ರವಿಕೆಯೊಂದಿಗೆ ಕುಂದನ್‌ ಜುಮುಕಿ ಧರಿಸಿರುವ ಜಾನು ಕಿಲ್ಲರ್‌ ನೋಟಕ್ಕೆ ಫಿದಾ ಆಗದೇ ಇರಲಾರರು. ಹೂವಿನ ವಿನ್ಯಾಸದ ಬಿಳಿ ಬಣ್ಣದ ಕುಂದನ್‌ ಹರಳಿನ ಜುಮುಕಿಯಲ್ಲಿ ಜಾಹ್ನವಿ ಅಂದ ಇನ್ನಷ್ಟು ಹೆಚ್ಚಿದೆ.
icon

(5 / 8)

ಜಾಹ್ನವಿ ಕಪೂರ್‌ ಮಾರ್ಡನ್‌ ಉಡುಪುಗಳು ಮಾತ್ರವಲ್ಲ, ಸಾಂಪ್ರದಾಯಿಕ ಉಡುಪಿನಲ್ಲೂ ಅಷ್ಟೇ ಮುದ್ದಾಗಿ ಕಾಣುತ್ತಾರೆ. ಸೀರೆ ಬಣ್ಣದ, ತೋಳಿಲ್ಲದ ರವಿಕೆಯೊಂದಿಗೆ ಕುಂದನ್‌ ಜುಮುಕಿ ಧರಿಸಿರುವ ಜಾನು ಕಿಲ್ಲರ್‌ ನೋಟಕ್ಕೆ ಫಿದಾ ಆಗದೇ ಇರಲಾರರು. ಹೂವಿನ ವಿನ್ಯಾಸದ ಬಿಳಿ ಬಣ್ಣದ ಕುಂದನ್‌ ಹರಳಿನ ಜುಮುಕಿಯಲ್ಲಿ ಜಾಹ್ನವಿ ಅಂದ ಇನ್ನಷ್ಟು ಹೆಚ್ಚಿದೆ.(Instagram/@janhvikapoor)

ಜುಮುಕಿ ಧರಿಸಲು ಸಾಂಪ್ರದಾಯಿಕ ಉಡುಪು ಮಾತ್ರ ಧರಿಸಬೇಕೆಂದಿಲ್ಲ, ಮಾರ್ಡನ್‌ ಉಡುಪಿನೊಂದಿಗೂ ಜುಮುಕಿ ಧರಿಸಿ, ಅಂದ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ ಬಾಲಿವುಡ್‌ ಬೆಡಗಿ ತಾರಾ ಸುತಾರಿಯಾ. ಎಲೆಯಾಕಾರದ ಕಿವಿಯೋಲೆ, ಹೂವಿನ ವಿನ್ಯಾಸದ ಆಕ್ಸಿಡೈಡ್‌ ಜುಮ್ಕಾ ಧರಿಸಿರುವ ತಾರಾ ಸೌಂದರ್ಯದ ಮೆರುಗು ಹೆಚ್ಚಿದೆ. 
icon

(6 / 8)

ಜುಮುಕಿ ಧರಿಸಲು ಸಾಂಪ್ರದಾಯಿಕ ಉಡುಪು ಮಾತ್ರ ಧರಿಸಬೇಕೆಂದಿಲ್ಲ, ಮಾರ್ಡನ್‌ ಉಡುಪಿನೊಂದಿಗೂ ಜುಮುಕಿ ಧರಿಸಿ, ಅಂದ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ ಬಾಲಿವುಡ್‌ ಬೆಡಗಿ ತಾರಾ ಸುತಾರಿಯಾ. ಎಲೆಯಾಕಾರದ ಕಿವಿಯೋಲೆ, ಹೂವಿನ ವಿನ್ಯಾಸದ ಆಕ್ಸಿಡೈಡ್‌ ಜುಮ್ಕಾ ಧರಿಸಿರುವ ತಾರಾ ಸೌಂದರ್ಯದ ಮೆರುಗು ಹೆಚ್ಚಿದೆ. (Instagram/@tarasutaria)

ಸ್ಟೈಲ್‌, ಫ್ಯಾಷನ್‌ ವಿಷಯಕ್ಕೆ ಬಂದರೆ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಮಾತ್ರವಲ್ಲ ಈಕೆ ಸ್ಟೈಲ್‌ ಐಕಾನ್‌, ಟ್ರೆಂಡ್‌ ಸೆಟರ್‌ ಕೂಡ ಹೌದು. ಕೆಂಪು ಬಣ್ಣದ ಸೀರೆಯೊಂದಿಗೆ ಎಳೆ ಎಳೆಯಾಗಿರುವ ಹಸಿರು ಬಣ್ಣದ ಹರಳಿನ ಜುಮುಕಿ ಕತ್ರಿನಾ ಅಂದಕ್ಕೆ ಹೊಸ ಅರ್ಥ ನೀಡುವಂತಿದೆ.   
icon

(7 / 8)

ಸ್ಟೈಲ್‌, ಫ್ಯಾಷನ್‌ ವಿಷಯಕ್ಕೆ ಬಂದರೆ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಮಾತ್ರವಲ್ಲ ಈಕೆ ಸ್ಟೈಲ್‌ ಐಕಾನ್‌, ಟ್ರೆಂಡ್‌ ಸೆಟರ್‌ ಕೂಡ ಹೌದು. ಕೆಂಪು ಬಣ್ಣದ ಸೀರೆಯೊಂದಿಗೆ ಎಳೆ ಎಳೆಯಾಗಿರುವ ಹಸಿರು ಬಣ್ಣದ ಹರಳಿನ ಜುಮುಕಿ ಕತ್ರಿನಾ ಅಂದಕ್ಕೆ ಹೊಸ ಅರ್ಥ ನೀಡುವಂತಿದೆ.   (Instagram/@katrinakaif)

ಟಾಲಿವುಡ್‌ ಸುಂದರಿ, ಬಾಲಿವುಡ್‌ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಕೂಡ ಜುಮುಕಿ ಪ್ರಿಯೆ. ಇವರು ಸದಾ ಜುಮುಕಿ ತೊಡಲು ಇಷ್ಟ ಪಡುತ್ತಾರೆ. ಇವರು ಸೀರೆಯ ಮಾಡ್‌ ಲುಕ್‌ನೊಂದಿಗೆ ಹಸಿರು ಬಣ್ಣ ಕ್ಲೇ ಜುಮುಕಿಯಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಾರೆ. 
icon

(8 / 8)

ಟಾಲಿವುಡ್‌ ಸುಂದರಿ, ಬಾಲಿವುಡ್‌ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಕೂಡ ಜುಮುಕಿ ಪ್ರಿಯೆ. ಇವರು ಸದಾ ಜುಮುಕಿ ತೊಡಲು ಇಷ್ಟ ಪಡುತ್ತಾರೆ. ಇವರು ಸೀರೆಯ ಮಾಡ್‌ ಲುಕ್‌ನೊಂದಿಗೆ ಹಸಿರು ಬಣ್ಣ ಕ್ಲೇ ಜುಮುಕಿಯಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಾರೆ. (Instagram/@rakulpreet)


IPL_Entry_Point

ಇತರ ಗ್ಯಾಲರಿಗಳು