ಬೇಸಿಗೆಯಲ್ಲಿ ಜೀನ್ಸ್, ಪಲಾಜೊ ಮೇಲೆ ಧರಿಸಲು ಬೆಸ್ಟ್ ಎನ್ನಿಸುವ ಹತ್ತಿ ಬಟ್ಟೆಯ ಕುರ್ತಾಗಳಿವು, ಟ್ಯೂನಿಕ್ ಟಾಪ್ ಕೂಡ ಟ್ರೆಂಡ್‌ನಲ್ಲಿದೆ
ಬೇಸಿಗೆಯಲ್ಲಿ ಧರಿಸಲು ಹತ್ತಿ ಬಟ್ಟೆ ಹೆಚ್ಚು ಸೂಕ್ತ. ಜೀನ್ಸ್, ಪಲಾಜೊ ಜೊತೆ ಧರಿಸಲು ಸೂಕ್ತ ಎನ್ನಿಸುವ ಸ್ಟೈಲಿಶ್ ಕುರ್ತಾ ಟಾಪ್‌ಗಳನ್ನು ಹುಡುಕುತ್ತಿದ್ದರೆ ಇಲ್ಲಿ ಗಮನಿಸಿ. ಟ್ಯೂನಿಕ್ ಟಾಪ್ ಕೂಡ ಈಗ ಟ್ರೆಂಡ್‌ನಲ್ಲಿದೆ.
(1 / 8)
ಬೇಸಿಗೆಯಲ್ಲಿ ಧರಿಸಲು ಹತ್ತಿ ಬಟ್ಟೆಯ ಕುರ್ತಾಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ಆಫೀಸ್, ಕಾಲೇಜಿಗೆ ಹೋಗಲು ಇವು ಬೆಸ್ಟ್. ಹತ್ತಿ ಬಟ್ಟೆಯಿಂದ ತಯಾರಿಸಿದ ಸ್ಟೈಲಿಶ್ ಕುರ್ತಾಗಳು ಈಗ ಟ್ರೆಂಡ್‌ನಲ್ಲಿವೆ. ಜೀನ್ಸ್ ಹಾಗೂ ಪಲಾಜೊ ಮೇಲೆ ಧರಿಸಲು ಈ ಕುರ್ತಾಗಳು ಸೂಕ್ತ ಎನ್ನಿಸುತ್ತವೆ. ಇದರ ಆರಾಮದಾಯಕ ಶೈಲಿಯು ಬೇಸಿಗೆಗೆ ಹೇಳಿ ಮಾಡಿಸಿದಂತಿರುತ್ತದೆ. ನೀವು ಈ ಬೇಸಿಗೆಯಲ್ಲಿ ಟ್ರೆಂಡಿ ಕುರ್ತಾಗಳನ್ನು ಹುಡುಕುತ್ತಿದ್ದರೆ ಇಲ್ಲೊಮ್ಮೆ ಗಮನಿಸಿ.
(Pinterest)(2 / 8)
ಇತ್ತೀಚಿನ ದಿನಗಳಲ್ಲಿ ಸಡಿಲ ತೋಳುಗಳು ಒಂದು ಟ್ರೆಂಡ್ ಆಗಿದೆ. ಇವು ತುಂಬಾ ಸ್ಟೈಲಿಶ್ ಆಗಿ ಕಾಣುತ್ತವೆ ಮತ್ತು ಆರಾಮದಾಯಕವಾಗಿಯೂ ಇರುತ್ತವೆ. ಈ ಬೇಸಿಗೆಯಲ್ಲಿ ನೀವು ಈ ಸ್ಟೈಲಿಶ್ ಶಾರ್ಟ್ ಕುರ್ತಿಯನ್ನು ನಿಮ್ಮ ವಾರ್ಡ್‌ರೋಬ್‌ಗೆ ಸೇರಿಸಿಕೊಳ್ಳಬಹುದು.
(Pinterest)(3 / 8)
ಬೇಸಿಗೆಯಲ್ಲಿ ಸ್ಲೀವ್‌ಲೆಸ್ ಕುರ್ತಾ ಕೂಡ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ. ಇದು ನಿಮಗೆ ಸ್ಟೈಲಿಶ್ ಲುಕ್ ಕೂಡ ನೀಡುತ್ತದೆ. ತೋಳಿಲ್ಲದ ಹತ್ತಿಯ ಕುರ್ತಾವನ್ನು ನೀವು ಖರೀದಿ ಮಾಡಬಹುದು.
(Pinterest)(4 / 8)
ಸಿಂಪಲ್ ಆಗಿ ಕಾಣಿಸಬೇಕು ಅಂತಿದ್ದರೆ ಈ ರೀತಿ ಹತ್ತಿಯ ಕುರ್ತಾ ಹೊಲಿಸಬಹುದು. ಇದು ಸರಳ ಡಿಸೈನ್ ಹೊಂದಿರುವ ಬೇಸಿಗೆಗೆ ಸೂಕ್ತ ಎನ್ನಿಸುವ ಲಾಂಗ್ ಕುರ್ತಾ. ಇದನ್ನು ಜೀನ್ಸ್ ಜೊತೆಗೂ ಧರಿಸಬಹುದು.
(Pinterest)(5 / 8)
ಹತ್ತಿಯ ಶಾರ್ಟ್ ಕುರ್ತಾ ಅಥವಾ ಲಾಂಗ್ ಟ್ಯೂನಿಕ್ ಟಾಪ್ ನಿಮಗೆ ಇಷ್ಟವಾದರೆ ಇಲ್ಲಿ ಗಮನಿಸಿ. ಈ ರೀತಿಯ ಲೇಸ್ ಮತ್ತು ಪೋಮ್ ಇರುವ ಟ್ಯೂನಿಕ್ ಟಾಪ್‌ಗಳು ನಿಮಗೆ ವಿಶೇಷ ನೋಟ ಸಿಗುವಂತೆ ಮಾಡುತ್ತದೆ. ಇದು ಜೀನ್ಸ್, ಪಲಾಜೊ, ಪೆನ್ಸಿಲ್ ಪ್ಯಾಂಟ್ ಜೊತೆ ಧರಿಸಲು ಸೂಕ್ತ ಎನ್ನಿಸುತ್ತದೆ.
(Pinterest)(6 / 8)
ಕಾಲೇಜು ಅಥವಾ ಕಚೇರಿ ಉಡುಪುಗಳಿಗೆ ಸ್ವಲ್ಪ ಔಪಚಾರಿಕ ನೋಟ ನೀಡಲು ಬಯಸಿದರೆ, ಸ್ಟ್ಯಾಂಡಿಂಗ್ ಕಾಲರ್ ರೀತಿಯ ಶಾರ್ಟ್ ಕುರ್ತಾವನ್ನು ಹೊಲಿಸಬಹುದು. ಇದರ ಸ್ಟೈಲಿಶ್ ಲುಕ್ ನಿಮ್ಮ ಲುಕ್‌ಗೆ ಮೆರುಗು ನೀಡುತ್ತದೆ.
(Pinterest)(7 / 8)
ಸ್ವೀಟ್‌ಹಾರ್ಟ್ ನೆಕ್ ಡಿಸೈನ್ ಎಲ್ಲಾ ರೀತಿಯ ಡ್ರೆಸ್‌ಗಳಿಗೂ ಹೊಂದಿಕೆಯಾಗುತ್ತದೆ, ಆದರೆ ಇದು ಕುರ್ತಾ ಟಾಪ್‌ಗಳಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇದು ಯಾವಾಗಲೂ ಟ್ರೆಂಡಿ ಹಾಗೂ ತುಂಬಾ ಸುಂದರವಾಗಿ ಕಾಣಿಸುತ್ತದೆ. ಇದರೊಂದಿಗೆ ಸ್ಲೀವ್‌ಲೆಸ್ ಕೂಡ ಧರಿಸಬಹುದು
(Pinterest)ಇತರ ಗ್ಯಾಲರಿಗಳು