ಬೇಸಿಗೆ ಜತೆ ಮಳೆಗಾಲದಲ್ಲೂ ಧರಿಸಲು ಸೂಕ್ತ ಎನ್ನಿಸುವ ಕಾಟನ್ ಶಾರ್ಟ್ ಕುರ್ತಾಗಳು; ಸಖತ್ ಸ್ಟೈಲಿಶ್ ಆಗಿವೆ ಗಮನಿಸಿ
ಬೇಸಿಗೆ ಹಾಗೂ ಮಳೆಗಾಲದಲ್ಲಿ ಧರಿಸಲು ಶಾರ್ಟ್ ಕುರ್ತಾಗಳು ಸೂಕ್ತ ಎನ್ನಿಸುತ್ತವೆ. ಜೊತೆಗೆ ಕಾಟನ್ ಉಡುಪು ಈ ಎರಡು ಕಾಲಕ್ಕೂ ಸೂಕ್ತವಾಗಿರುತ್ತವೆ. ಇಂತಹ ಒಂದಿಷ್ಟು ಸ್ಟೈಲಿಶ್ ಕುರ್ತಾ ಡಿಸೈನ್‌ಗಳು ಇಲ್ಲಿವೆ ಗಮನಿಸಿ.
(1 / 8)
ಬೇಸಿಗೆ ಹಾಗೂ ಮಳೆಗಾಲದಲ್ಲಿ ಶಾರ್ಟ್ ಕುರ್ತಾಗಳನ್ನು ಧರಿಸಲು ಹೆಣ್ಣುಮಕ್ಕಳು ಇಷ್ಟಪಡುತ್ತಾರೆ. ಈ ಎರಡು ಕಾಲಕ್ಕೂ ಹೊಂದುವ ಶಾರ್ಟ್ ಕುರ್ತಾಗಳು ಟ್ರೆಂಡಿ ಆಗಿಯೂ ಕಾಣಿಸುತ್ತವೆ. ಇವು ಆರಾಮದಾಯಕ ಹಾಗೂ ಸ್ಟೈಲಿಶ್ ಲುಕ್ ನೀಡುತ್ತವೆ. ಬೇಸಿಗೆ ಮುಗಿಯುವ ಮಳೆಗಾಲ ಹತ್ತಿರವಿರುವ ಈ ಸಮಯದಲ್ಲಿ ಎರಡೂ ಋತುಮಾನಕ್ಕೆ ಹೊಂದುವ ಡ್ರೆಸ್ ಹುಡುಕುತ್ತಿದ್ದರೆ ಇಲ್ಲಿ ಗಮನಿಸಿ.
(Pinterest)(2 / 8)
ಸ್ಲೀವ್ ಬಳಿ ಈ ರೀತಿ ಟೈ ಇರುವ ಶಾರ್ಟ್ ಕುರ್ತಾ ತುಂಬಾ ಅಲಂಕಾರಿಕ ನೋಟವನ್ನು ನೀಡುತ್ತದೆ. ಇದನ್ನು ಬೇಸಿಗೆಯಲ್ಲಿ ಧರಿಸುವುದು ಉತ್ತಮ. ನೀವು ಇವುಗಳನ್ನು ಹತ್ತಿ ಪಲಾಝೊ ಪ್ಯಾಂಟ್‌ಗಳೊಂದಿಗೆ ಜೋಡಿಸಬಹುದು. ಮಳೆಗಾಲದಲ್ಲಿ ಇದರ ಮೇಲೆ ಜಾಕೆಟ್ ಅಥವಾ ಶರ್ಗ್ ಧರಿಸಿದರೆ ನೋಟ ಬದಲಾಗುವುದಿಲ್ಲ. ಈ ಸಂಯೋಜನೆಯು ಸ್ಟೈಲಿಶ್ ಆಗಿ ಕಾಣುವುದರ ಜೊತೆಗೆ ಆರಾಮದಾಯಕವಾಗಿಯೂ ಇರುತ್ತದೆ.
(Pinterest)(3 / 8)
ಕಾಟನ್ ಬಟ್ಟೆಯ ಸರಳ ಶಾರ್ಟ್ ಕುರ್ತಾಗಳು ಜೀನ್ಸ್ ಮೇಲೆ ಧರಿಸಲು ಹೇಳಿ ಮಾಡಿಸಿದಂತಿರುತ್ತವೆ. ಇವು ನಿಮ್ಮ ಲುಕ್ ಬದಲಿಸೋದು ಖಂಡಿತ. ಕಾಲ ಯಾವುದೇ ಇರಲಿ ನೀವು ಮಾರ್ಡನ್ ಆಗಿ ಕಾಣಿಸಲು ಈ ರೀತಿಯ ಕುರ್ತಾ ಆಯ್ಕೆ ಮಾಡಿಕೊಳ್ಳಬಹುದು.
(Pinterest)(4 / 8)
ಬೇಸಿಗೆಯಲ್ಲಿ ಈ ರೀತಿ ಹೂವಿನ ಚಿತ್ತಾರವಿರುವ ಕಾಟನ್ ಕುರ್ತಾಗಳು ಧರಿಸಲು ಚೆನ್ನಾಗಿರುತ್ತವೆ, ಇವು ಬೇಗನೆ ಒಣಗುವ ಕಾರಣ ಮಳೆಗಾಲಕ್ಕೂ ಧರಿಸಲು ಹೇಳಿ ಮಾಡಿಸಿದಂತಿರುತ್ತವೆ. ಇದನ್ನು ಧರಿಸುವುದರಿಂದ ಆರಾಮದಾಯಕ ನೋಟ ನಿಮ್ಮದಾಗುತ್ತದೆ.
(Pinterest)(5 / 8)
ನಿಮ್ಮ ಯಾವುದೇ ಸರಳ ಹತ್ತಿ ಕುರ್ತಿಗಳಿಗೆ ಬೋಹೊ ಲುಕ್ ನೀಡಲು, ನೀವು ಈ ರೀತಿಯ ದಪ್ಪನೆಯ ಲೇಸ್ ಅನ್ನು ಜೋಡಿಸಬಹುದು. ಇದು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ತೋಳು, ಟಾಪ್‌ನ ತುದಿಗೆ ಲೇಸ್ ಅಳವಡಿಸುವುದರಿಂದ ಡ್ರೆಸ್‌ನ ನೋಟ ಸಂಪೂರ್ಣ ಬದಲಾಗುತ್ತದೆ.
(Pinterest)(6 / 8)
ಸ್ಟೈಲಿಶ್ ಮತ್ತು ಆರಾಮದಾಯಕ ಲುಕ್‌ಗಾಗಿ ನೀವು ಶಾರ್ಟ್ ಕುರ್ತಾವನ್ನು ಬ್ಯಾಗಿ ಜೀನ್ಸ್‌ನೊಂದಿಗೆ ಜೋಡಿಸಬಹುದು. ಕಾಲೇಜು ಹೋಗುವ ಹುಡುಗಿಯರಲ್ಲಿ ಇಂತಹ ಲುಕ್ ಸಾಕಷ್ಟು ಜನಪ್ರಿಯವಾಗಿದೆ. ಈ ಕಂಫರ್ಟ್ ಫಿಟ್ ಬೇಸಿಗೆಗೆ ಸೂಕ್ತವಾಗಿರುತ್ತದೆ.
(Pinterest)(7 / 8)
ನೀವು ಕುರ್ತಾಗೆ ಗ್ರ್ಯಾಂಡ್ ಲುಕ್ ನೀಡಲು ಬಯಸಿದರೆ ಗ್ರ್ಯಾಂಡ್ ಪಲಾಝೊ ಹಾಗೂ ವೇಲ್ ಜೊತೆ ಕುರ್ತಾವನ್ನು ಮ್ಯಾಚಿಂಗ್ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ನೋಟ ಬದಲಾಗುತ್ತದೆ.
(Pinterest)ಇತರ ಗ್ಯಾಲರಿಗಳು