ಪ್ಯಾಂಟ್, ಪಾಲಾಝೊಗೆ ಆಕರ್ಷಕ ನೋಟ ಸಿಗಲು ಈ ರೀತಿ ಡಿಸೈನ್ ಮಾಡಿಸಿ, ಇದರಿಂದ ನೀವು ಟ್ರೆಂಡಿ ಲುಕ್‌ನಲ್ಲಿ ಮಿಂಚಬಹುದು
ನಿಮ್ಮ ಚೂಡಿದಾರ್ ಅಥವಾ ಕುರ್ತಾದ ಪ್ಯಾಂಟ್ ನೋಟವನ್ನು ಸ್ಟೈಲಿಶ್ ಮತ್ತು ಟ್ರೆಂಡಿಯಾಗಿ ಮಾಡಲು ಬಯಸಿದರೆ ಸರಳ ವಿನ್ಯಾಸದ ಬದಲು ಈ ಸ್ಟೈಲಿಶ್ ಹಾಗೂ ಸ್ಪೆಷಲ್ ಡಿಸೈನ್‌ಗಳನ್ನು ಮಾಡಿಸಿ. ಇದರಿಂದ ಡ್ರೆಸ್‌ನ ಸಂಪೂರ್ಣ ನೋಟವೇ ಬದಲಾಗುತ್ತದೆ.
(1 / 8)
ನೀವು ಕುರ್ತಾ ಅಥವಾ ಪೈಜಾಮ ಧರಿಸಿದಾಗ ವಿಭಿನ್ನ ನೋಟ ಪಡೆಯಲು ಬಯಸಿದರೆ ಆ ಆಕರ್ಷಕ ವಿನ್ಯಾಸದ ಪ್ಯಾಂಟ್ ಡಿಸೈನ್‌ಗಳನ್ನು ಹೊಲಿಸಲು ಟ್ರೈ ಮಾಡಿ. ಇದು ನಿಮ್ಮ ಸರಳ ನೋಟವನ್ನು ಸ್ಟೈಲಿಶ್ ಆಗಿಸುವುದು ಮಾತ್ರವಲ್ಲ ಕ್ಲಾಸಿಯಾಗಿಯೂ ಕಾಣುವಂತೆ ಮಾಡುತ್ತದೆ. ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ಗಮನಿಸಿ.
(PC: All image Pintrest)(2 / 8)
ಪಲಾಝೊವನ್ನು ರೇಷ್ಮೆ ಅಥವಾ ಬ್ರೊಕೇಡ್‌ನಂತಹ ಬಟ್ಟೆಯಲ್ಲಿ ಹೊಲಿಸುತ್ತಿದ್ದರೆ, ಅದು ತುಂಬಾ ಬಿಗಿಯಾಗಿ ಮತ್ತು ಅಸಹ್ಯವಾಗಿ ಕಾಣಿಸಬಹುದು, ಮೈಗಂಟಿದಂತಿದ್ದು ನಿಮಗೆ ಧರಿಸಲು ಇಷ್ಟವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಈ ಪ್ಯಾಂಟ್‌ಗಳ ಮೇಲೆ ನೆರಿಗೆ ವಿನ್ಯಾಸ ಇರಿಸಿ, ಇದರಿಂದ ನಿಮಗೆ ಆಕರ್ಷಕ ನೋಟ ಸಿಗುತ್ತದೆ.
(3 / 8)
ನೀವು ಕುರ್ತಿಯ ಮ್ಯಾಚಿಂಗ್ ಪಲಾಝೊಗೆ ವಿಭಿನ್ನ ಲುಕ್ ನೀಡಲು ಬಯಸಿದರೆ, ಈ ರೀತಿಯ ಮುತ್ತಿನ ವಿನ್ಯಾಸದ ಲಟ್ಕನ್‌ಗಳನ್ನು ಇರಿಸಬಹುದು. ಇದು ಆಕರ್ಷಕವಾಗಿ ಕಾಣುತ್ತದೆ, ಮಾತ್ರವಲ್ಲ ನಿಮ್ಮ ಡ್ರೆಸ್‌ಗೆ ಗ್ರ್ಯಾಂಡ್ ಲುಕ್ ಕೂಡ ನೀಡುತ್ತದೆ.
(4 / 8)
ನೀವು ಕಣಕಾಲು ಉದ್ದದ ಪಲಾಝೋಗಳನ್ನು ವಿಭಿನ್ನವಾಗಿ ಡಿಸೈನ್ ಮಾಡಲು ಬಯಸಿದರೆ, ಲೇಸ್ ವಿವರಗಳನ್ನು ಸೇರಿಸಿ ಮತ್ತು ಹೆಮ್‌ಲೈನ್‌ನಿಂದ ಸ್ವಲ್ಪ ಮೇಲೆ ಫ್ರಿಂಜ್ ಮಾಡಿ. ಇದು ಲೇಟೆಸ್ಟ್ ಟ್ರೆಂಡ್ ಕೂಡ ಹೌದು.
(5 / 8)
ಶಾರ್ಟ್ ಪ್ಯಾಂಟ್ ವಿನ್ಯಾಸದ ಹೆಮ್‌ಲೈನ್‌ನಲ್ಲಿರುವ ಪೊಂಪೊಮ್‌ಗಳು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುತ್ತವೆ. ಇವು ನಿಮ್ಮ ಕುರ್ತಾ ಜೊತೆ ತುಂಬಾ ಸುಂದರವಾಗಿ ಕಾಣುತ್ತವೆ. ಇದು ಟ್ರೆಂಡಿ ಆಗಿಯೂ ಕಾಣಿಸುತ್ತದೆ.
(6 / 8)
ನೀವು ಬೇರೆಯದೇ ವಿನ್ಯಾಸದ ಸಲ್ವಾರ್ ಬಯಸಿದರೆ, ಕಣಕಾಲು ಉದ್ದದ ಅಫ್ಘಾನಿ ಸಲ್ವಾರ್ ಸ್ಟೈಲ್ ಮಾಡಿಸಿ. ಪಾದದ ಬಳಿ ಅದಕ್ಕೆ ಹೊಂದಿಕೆಯಾಗುವ ಬಟ್ಟೆಯನ್ನು ಫ್ರಿಲ್ ರೀತಿ ಇರಿಸಿ.
(7 / 8)
ಪ್ಯಾಂಟ್ ಸರಳವಾಗಿಯೂ ಕೊಂಚ ಅಂದವಾಗಿಯೂ ಕಾಣಿಸಬೇಕು ಅಂತಿದ್ದರೆ ಈ ರೀತಿ ಎಂಬ್ರಾಯಿಡರಿ ಡಿಸೈನ್ ಮಾಡಿಸಿ. ಕಾಟನ್ ಬಟ್ಟೆಯ ಮೇಲೆ ಈ ಎಂಬ್ರಾಯಿಡರಿ ಡಿಸೈನ್ ತುಂಬಾನೇ ಸ್ಟೈಲಿಶ್ ಆಗಿ ಕಾಣಿಸುತ್ತದೆ.
ಇತರ ಗ್ಯಾಲರಿಗಳು