ಹೊಸದಾಗಿ ಸೀರೆ ಖರೀದಿಸಿದ್ದರೆ ಈ ರೀತಿ ಫ್ಯಾನ್ಸಿ ಬ್ಲೌಸ್ ಡಿಸೈನ್ ಮಾಡಿಸಿ, ಎಲ್ಲರೂ ನಿಮ್ಮನ್ನು ಫ್ಯಾಷನ್ ಕ್ವೀನ್ ಅಂತಾರೆ
ನೀವು ಹೊಸ ಸೀರೆ ಖರೀದಿಸಿದ್ದು ಸ್ಟೈಲಿಶ್ ಆಗಿ ಬ್ಲೌಸ್ ಡಿಸೈನ್ ಮಾಡಿಸಬೇಕು ಅಂತಿದ್ರೆ ಇಲ್ಲಿರುವ ಟ್ರೆಂಡಿ ವಿನ್ಯಾಸಗಳು ನಿಮಗೆ ಇಷ್ಟವಾಗಬಹುದು. ಇವೆಲ್ಲವೂ ಲೇಟೆಸ್ಟ್ ಫ್ಯಾನಿ ಡಿಸೈನ್‌ಗಳು, ಇದರಿಂದ ನೀವು ಫ್ಯಾಷನ್ ಕ್ವೀನ್ ಅನ್ನಿಸಿಕೊಳ್ಳೋದು ಖಂಡಿತ.
(1 / 9)
ಈಗೀಗ ಸೀರೆ ಖರೀದಿ ಮಾಡೋದು ದೊಡ್ಡ ಕೆಲಸವಲ್ಲ, ಬದಲಿಗೆ ಬ್ಲೌಸ್ ಡಿಸೈನ್ ಮಾಡಿಸೋದು ತಲೆ ನೋವು ತರಿಸುವ ಕೆಲಸವಾಗಿರುತ್ತದೆ. ಪ್ರತಿ ಬಾರಿ ಸೀರೆ ಖರೀದಿ ಮಾಡಿದಾಗಲೂ ಹೇಗಪ್ಪಾ ಬ್ಲೌಸ್ ಡಿಸೈನ್ ಮಾಡಿಸೋದು ಅಂತ ಹೆಣ್ಣುಮಕ್ಕಳು ತಲೆ ಕೆಡಿಸಿಕೊಳ್ಳುತ್ತಾರೆ. ನೀವು ಲೇಟೆಸ್ಟ್ ಟ್ರೆಂಡ್‌ನ ಬ್ಲೌಸ್ ಡಿಸೈನ್‌ಗಳಿಗಾಗಿ ಹುಡುಕುತ್ತಿದ್ದರೆ ನಿಮಗಾಗಿ ಇಲ್ಲಿ ಒಂದಿಷ್ಟು ಆಯ್ಕೆಗಳಿವೆ. ಈ ಬ್ಲೌಸ್ ಡಿಸೈನ್‌ಗಳಿಂದ ನೀವು ಆತ್ಮೀಯರು, ಆತ್ಮೀಯರ ನಡುವೆ ಫ್ಯಾಷನ್ ಕ್ವೀನ್ ಎಂದು ಕರೆಸಿಕೊಳ್ಳಬಹುದು.
(Pinterest)(2 / 9)
ಬ್ಲೌಸ್‌ನ ಹಿಂಭಾಗ ಸರಳವಾಗಿ ಇಡುವ ಬದಲು ಈ ರೀತಿ ಸ್ಟೈಲಿಶ್ ಟಚ್ ಕೊಡಿ. ಇದು ಸಖತ್ ಟ್ರೆಂಡಿಯಾಗಿದೆ. ಕೊನೆಯಲ್ಲಿ ಬಟನ್ ಇರಿಸಿ. ಫ್ಯಾನ್ಸಿ ಸೀರೆಗಂತೂ ಇದು ಹೇಳಿ ಮಾಡಿಸಿದ ಡಿಸೈನ್.
(Pinterest)(3 / 9)
ನೀವು ಅಗಲವಾದ ಬೆನ್ನು ಹೊಂದಿದ್ದರೆ ಈ ರೀತಿ ಬ್ಲೌಸ್ ಡಿಸೈನ್ ನಿಮಗೆ ಸಖತ್ ಆಗಿ ಕಾಣುತ್ತದೆ. ಬೇಸಿಗೆಗಂತೂ ಇದು ಹೇಳಿ ಮಾಡಿಸಿದ್ದು. ಜೊತೆಗೆ ಸಖತ್ ಟ್ರೆಂಡಿ ಹಾಗೂ ಮಾದಕವಾಗಿಯೂ ಕಾಣುತ್ತದೆ. ಇದಕ್ಕೆ ಸ್ಲೀವ್ ಫ್ರಿಲ್ ಇಡಿಸಿದ್ದು ಇನ್ನಷ್ಟು ಸ್ಟೈಲ್ ಆಗಿ ಕಾಣುವಂತಿದೆ.
(Pinterest)(4 / 9)
ನೀವು ಬ್ಲೌಸ್‌ನ ಹಿಂಭಾಗಕ್ಕೆ ಈ ರೀತಿ ಅಲಂಕಾರಿಕ ಚಿಟ್ಟೆ ವಿನ್ಯಾಸವನ್ನು ಆಯ್ಕೆ ಮಾಡಬಹುದು. ಇದು ಕಾಟನ್ ಸೀರೆಗಳೊಂದಿಗೆ ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಇದನ್ನು ವಿಶೇಷ ಸಂದರ್ಭಕ್ಕೆ ಉಡುವ ಸೀರೆಗೂ ಆಯ್ಕೆ ಮಾಡಬಹುದು.
(Pinterest)(5 / 9)
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚೋಲಿ ಕಟ್ ಬ್ಲೌಸ್ ಸಾಕಷ್ಟು ಟ್ರೆಂಡ್‌ನಲ್ಲಿದೆ. ಇದು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ ಮತ್ತು ನಿಮ್ಮ ಸೀರೆಗೆ ಆಧುನಿಕ ತಿರುವನ್ನು ನೀಡುತ್ತದೆ. ಬೇಸಿಗೆಗಾಗಿ ಹತ್ತಿ ಬಟ್ಟೆ ಬ್ಲೌಸ್ ಹೊಲಿಸುತ್ತಿದ್ದರೆ ಇದು ಬಹಳ ಸುಂದರವಾಗಿ ಕಾಣುತ್ತದೆ.
(Pinterest)(6 / 9)
ಬ್ಲೌಸ್‌ನ ಬ್ಯಾಕ್ ಡಿಸೈನ್ ಡಿಫ್ರೆಂಟ್ ಆಗಿರೋದು ನೋಡ್ತಾ ಇದ್ರೆ ಈ ಡಿಸೈನ್ ಮಾಡಿಸಬಹುದು ನೋಡಿ. ಇದು ನಿಮ್ಮ ಫ್ಯಾಷನ್ ಟ್ರೆಂಡ್‌ನ ಕ್ವೀನ್ ಮಾಡಿಸೋದು ಪಕ್ಕಾ.
(Pinterest)(7 / 9)
ಬ್ಲೌಸ್‌ನ ಮುಂಭಾಗದ ಕಂಠರೇಖೆಯನ್ನು ಸರಳವಾಗಿ ಇಡುವ ಬದಲು, ಈ ರೀತಿ ಸ್ವೀಟ್ ಹಾರ್ಟ್ ನೆಕ್‌ಲೈನ್ ಪ್ರಯತ್ನಿಸಬಹುದು. ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉಡುಪುಗಳು ಮತ್ತು ಗೌನ್‌ಗಳಲ್ಲಿ ಈ ಕಂಠರೇಖೆಯನ್ನು ತಯಾರಿಸಲಾಗುತ್ತದೆ, ಇದು ತುಂಬಾ ಸುಂದರವಾದ ನೋಟವನ್ನು ನೀಡುತ್ತದೆ.
(Pinterest)(8 / 9)
ನೀವು ಬ್ಲೌಸ್ ಪೀಸ್‌ಗೆ ಸ್ವಲ್ಪ ಆಧುನಿಕ ತಿರುವು ನೀಡಿ, ಟಾಪ್‌ನಂತೆ ಫ್ಯಾನ್ಸಿ ಲುಕ್ ನೀಡಲು ಬಯಸಿದರೆ, ಈ ವಿನ್ಯಾಸವು ಪರಿಪೂರ್ಣವಾಗಿರುತ್ತದೆ. ಇದರ ಪಫ್ ಸ್ಲೀವ್‌ಗಳು ಮತ್ತು ಬ್ಯಾಕ್‌ಲೆಸ್ ವಿನ್ಯಾಸವು ತುಂಬಾ ಸುಂದರವಾಗಿ ಕಾಣುತ್ತದೆ. ಈ ರೀತಿಯ ಬ್ಲೌಸ್ ಪೀಸ್‌ಗಳು ಬೇಸಿಗೆಯಲ್ಲಿ ಪರಿಪೂರ್ಣವಾಗಿರುತ್ತವೆ.
(Pinterest)ಇತರ ಗ್ಯಾಲರಿಗಳು