ನವ ತರುಣಿಯರ ಅಂದ ದುಪ್ಪಟ್ಟು ಮಾಡುವ ಬ್ಲೌಸ್ ಡಿಸೈನ್‌ಗಳಿವು; ಈ ಟ್ರೆಂಡ್ ನಿಮಗೆ ಸ್ಪೆಷಲ್ ಲುಕ್ ನೀಡೋದು ಖಂಡಿತ
ನೀವು ನವ ತರುಣಿಯರಾಗಿದ್ದು, ಸ್ಟೈಲಿಶ್ ಆಗಿ ಸೀರೆ ಉಡಬೇಕು ಅಂತಿದ್ದರೆ ಮೊದಲು ಬ್ಲೌಸ್ ಡಿಸೈನ್ ಮೇಲೆ ಗಮನ ಹರಿಸಿ. ನಿಮ್ಮ ಸೀರೆಗೆ ಹೊಂದುವ ಟ್ರೆಂಡಿ ಹಾಗೂ ಸಖತ್ ಸ್ಟೈಲಿಶ್ ಆಗಿರುವ ರವಿಕೆ ವಿನ್ಯಾಸಗಳು ಇಲ್ಲಿವೆ ಗಮನಿಸಿ.
(1 / 8)
ಸಾಮಾನ್ಯವಾಗಿ ಮೊದಲ ಬಾರಿಗೆ ಸೀರೆ ಉಡುವ ತರುಣಿಯರಲ್ಲಿ ಸೀರೆ, ಬ್ಲೌಸ್ ಬಗ್ಗೆ ಕ್ರೇಜ್ ಜಾಸ್ತಿ ಇರುತ್ತದೆ. ಯಾವುದೇ ಕಾಲೇಜು ಫಂಕ್ಷನ್ ಆಗಿರಬಹುದು ಅಥವಾ ಮದುವೆಯಂತಹ ಕಾರ್ಯಕ್ರಮವಿರಬಹುದು. ನೀವು ಸೀರೆ ಉಡುವ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕೂ ಮೊದಲು ಬ್ಲೌಸ್ ಡಿಸೈನ್ ಅನ್ನು ಗಮನಿಸಬೇಕು. ಟ್ರೆಂಡಿ ಹಾಗೂ ಸಖತ್ ಸ್ಟೈಲಿಶ್ ಆಗಿ ಕಾಣುವ ಬ್ಲೌಸ್ ಡಿಸೈನ್‌ಗಳು ಇಲ್ಲಿವೆ. ಈ ಬ್ಲೌಸ್ ಡಿಸೈನ್‌ಗಳು ನಿಮಗೆ ಬೇರೆಯದ್ದೇ ನೋಟ ಸಿಗುವಂತೆ ಮಾಡುವುದು ಸುಳ್ಳಲ್ಲ.
(2 / 8)
ಈ ಬ್ಲೌಸ್ ವಿನ್ಯಾಸ ಗಮನಿಸಿ. ನೆಕ್‌ಗೆ ವಿ ಶೇಪ್ ನೀಡಲಾಗಿದೆ. ಸರಳ ಬಟ್ಟೆಯ ಮೇಲೆ ಸುಂದರವಾದ ಎಂಬ್ರಾಯಿಡರಿ ಡಿಸೈನ್ ಮಾಡಲಾಗಿದೆ. ನ್ಯೂಡ್ ಬಣ್ಣದ ರವಿಕೆಗೆ ಕೆಂಪು ಹಾಗೂ ಕಪ್ಪು ಬಣ್ಣದ ದಾರಗಳಿಂದ ಎಂಬ್ರಾಯಿಡರಿ ಡಿಸೈನ್ ಮಾಡಿಸಿರುವುದು ರವಿಕೆಯ ಅಂದ ಹೆಚ್ಚಿಸಿದೆ.
(PC: Pintrest)(3 / 8)
ಇತ್ತೀಚಿನ ದಿನಗಳಲ್ಲಿ ಕಾರ್ಸೆಟ್ ಬ್ಲೌಸ್‌ಗಳು ತುಂಬಾ ಟ್ರೆಂಡ್‌ನಲ್ಲಿವೆ. ಹುಡುಗಿಯರು ಈ ಬ್ಲೌಸ್ ಅನ್ನು ಸೀರೆ, ಲೆಹೆಂಗಾ ಮತ್ತು ಸ್ಕರ್ಟ್ ಧರಿಸಬಹುದು. ರೆಡಿಮೇಡ್ ಕಾರ್ಸೆಟ್ ಬ್ಲೌಸ್ ಕೂಡ ಸಿಗುತ್ತದೆ. ಇದನ್ನು ನೀವು ನಿಮ್ಮ ಸೀರೆ ಮ್ಯಾಚ್ ಮಾಡಿಕೊಳ್ಳಬಹುದು.
(PC: Pintrest)(4 / 8)
ಈ ಡಿಸೈನ್ ಗಮನಿಸಿ, ಇದು ಹಳೆಯ ಬ್ಲೌಸ್ ಡಿಸೈನ್ ಟ್ರೆಂಡಿ. ಇದು ಈಗ ಮತ್ತೆ ಚಾಲ್ತಿಯಲ್ಲಿದೆ. ಈ ರೀತಿಯ ಡೀಪ್ ವಿ ನೆಕ್ ಸೀರೆ ಜೊತೆ ಚೆನ್ನಾಗಿ ಕಾಣುತ್ತದೆ. ಇದು ಎಲ್ಲಾ ವಯೋಮಾನದವರಿಗೂ ಹೊಂದುವ ಬ್ಲೌಸ್ ಡಿಸೈನ್ ಆಗಿದೆ. ಈ ರೀತಿಯ ಮಲ್ಟಿಕಲರ್ ರವಿಕೆಯನ್ನು ಬೇರೆ ಬೇರೆ ಸೀರೆಯೊಂದಿಗೆ ಮ್ಯಾಚಿಂಗ್ ಮಾಡಿಕೊಂಡು ಧರಿಸಬಹುದು.
(PC: Pintrest)(5 / 8)
ಸ್ವೀಟ್‌ಹಾರ್ಟ್ ನೆಕ್‌ಲೈನ್ ಬ್ಲೌಸ್ ಸದ್ಯದ ಟಾಪ್ ಟ್ರೆಂಡ್. ಇದರಲ್ಲ ನೀವು ಬೇರೆ ಬೇರೆ ಡಿಸೈನ್ ಅನ್ನು ರೂಪಿಸಬಹುದು. ಈ ಚಿತ್ರದಲ್ಲಿ ಕೊಟ್ಟಿರುವ ರೀತಿ ಬ್ಲೌಸ್ ಹೊಲಿಸಿದರೆ ನೀವು ಟ್ರೆಂಡಿ ಆಗಿ ಕಾಣ್ತೀರಿ. ಪ್ಲೇನ್ ಬ್ಲೌಸ್‌ನ ತುದಿಗೆ ಡಿಸೈನ್ ಬಟ್ಟೆಗಳನ್ನು ಜೋಡಿಸಲಾಗಿದೆ.
( PC: Pintrest)(6 / 8)
ಈ ಬ್ಲೌಸ್ ವಿನ್ಯಾಸ ನವತರುಣಿಯರಿಗೆ ಹೇಳಿ ಮಾಡಿಸಿದಂತಿದೆ. ಹಿಂಭಾಗದಲ್ಲಿ ಯು ಆಕಾರ ನೀಡಿದ್ದು ಬ್ಲೌಸ್‌ನ ಸ್ಟ್ರಿಪ್‌ನಲ್ಲಿ ಹೂವಿನ ಚಿತ್ತಾರಗಳನ್ನು ಮೂಡಿಸಲಾಗಿದೆ. ಈ ರೀತಿಯ ಬ್ಲೌಸ್ ಡಿಸೈನ್ ಫ್ಯಾನ್ಸಿ ಸೀರೆಗಳ ಅಂದವನ್ನು ದುಪ್ಪಟ್ಟು ಮಾಡೋದು ಖಂಡಿತ. ಅಲ್ಲದೇ ಸೀರೆ ಉಟ್ಟವರಿಗೂ ಸೂಪರ್ ಆಗಿ ಕಾಣಿಸುತ್ತೆ.
(PC: Pintrest)(7 / 8)
ಕೌಲ್ ನೆಕ್‌ಲೈನ್ ವಿನ್ಯಾಸ ಸೂಪರ್ ಸ್ಟೈಲಿಶ್ ಆಗಿದೆ. ಲೆಹೆಂಗಾದ ಜೊತೆ ಧರಿಸುವಾಗ ಇದು ಟ್ರೆಂಡ್ ಎನ್ನಿಸಿದರೂ ಸೀರೆಯ ಜೊತೆ ಧರಿಸಲು ಸೂಪರ್ ಆಗಿರುತ್ತೆ. ಬ್ಲೌಸ್ ಮೇಲೆ ಪಲ್ಲುವನ್ನು ಬೇರೆ ಬೇರೆ ರೀತಿ ಕೂಡ ಡಿಸೈನ್ ಮಾಡಬಹುದು.
(PC: Pintrest)ಇತರ ಗ್ಯಾಲರಿಗಳು