ಜೀನ್ಸ್ ಜೊತೆ ಧರಿಸಲು ಸ್ಟೈಲಿಶ್ ಕುರ್ತಾಗಳಿಗಾಗಿ ನೋಡ್ತಾ ಇದೀರಾ, ಈ ರೀತಿ ಲಾಂಗ್ ಕುರ್ತಾ ನಿಮ್ಮ ನೋಟ ಬದಲಿಸುತ್ತೆ
ಜೀನ್ಸ್ ಮೇಲೆ ಕುರ್ತಾ ಧರಿಸೋದು ಈಗಿನ ಟ್ರೆಂಡ್, ಆದರೆ ಯಾವ ರೀತಿಯ ಕುರ್ತಾ ಧರಿಸೋದು ಅನ್ನೋ ಡೌಟ್ ಇದ್ರೆ ಇಲ್ಲಿ ಗಮನಿಸಿ. ಜೀನ್ಸ್ ಮೇಲೆ ಧರಿಸಲು ಹೇಳಿ ಮಾಡಿಸಿದ ಲಾಂಗ್ ಕುರ್ತಾಗಳು ಇಲ್ಲಿವೆ ಗಮನಿಸಿ.
(1 / 7)
ಫ್ಯಾಷನ್ ಜಗತ್ತಿನ ಟ್ರೆಂಡ್ ಪ್ರತಿದಿನ ಬದಲಾಗುತ್ತಲೇ ಇರುತ್ತದೆ. ಮೇಕಪ್ ಆಗಿರಲಿ, ಕೂದಲಿನ ಪರಿಕರಗಳಾಗಿರಲಿ ಅಥವಾ ಹೊಸ ಬಟ್ಟೆಗಳಾಗಿರಲಿ, ಮಹಿಳೆಯರು ತಮ್ಮನ್ನು ತಾವು ಸ್ಟೈಲಿಶ್ ಆಗಿಟ್ಟುಕೊಳ್ಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಫ್ಯಾಷನ್ ಜಗತ್ತಿನಲ್ಲಿ ಸದ್ಯ ಕುರ್ತಾ ಟ್ರೆಂಡ್ ಟಾಪ್‌ನಲ್ಲಿದೆ. ಆದಾಗ್ಯೂ, ಯಾವುದೇ ಕುರ್ತಿಯನ್ನು ಸರಿಯಾದ ಫಿಟ್ಟಿಂಗ್ ಮತ್ತು ವಿನ್ಯಾಸದೊಂದಿಗೆ ಧರಿಸಿದಾಗ ಮಾತ್ರ ಅದಕ್ಕೊಂದು ಲುಕ್ ಇರುತ್ತದೆ. ಜೀನ್ಸ್ ಮೇಲೆ ಧರಿಸಲು ಟ್ರೆಂಡಿ ಕುರ್ತಾಗಳಿಗಾಗಿ ಎದುರು ನೋಡುತ್ತಿದ್ದರೆ ಇಲ್ಲಿವೆ ನೋಡಿ.
(Pic Credit: Pinterest)(2 / 7)
ಮೊಣಕಾಲಿನವರೆಗೆ ಅಥವಾ ಸ್ವಲ್ಪ ಕೆಳಗೆ ಇರುವ ಉದ್ದನೆಯ ಕುರ್ತಾಗಳು ಜೀನ್ಸ್ ಜೊತೆ ಧರಿಸಿದಾಗ ಚೆನ್ನಾಗಿ ಕಾಣುತ್ತವೆ. ಇದು ಉದ್ದವಾಗಿಯೂ ಇರುವುದಿಲ್ಲ, ಚಿಕ್ಕದು ಎನ್ನಿಸುವುದಿಲ್ಲ. ದಪ್ಪ, ಸಪೂರ ಯಾವುದೇ ರೀತಿ ದೇಹಾಕೃತಿ ಇರುವವರಿಗೂ ಇದು ಹೊಂದಿಕೆಯಾಗುತ್ತದೆ.
(Pic Credit: Aziz Kouser Pinterest)(3 / 7)
ಜೀನ್ಸ್ ಜೊತೆ ಉದ್ದನೆಯ ಕುರ್ತಿ ಧರಿಸುವಾಗ, ನೀವು ಬಣ್ಣದ ಸಂಯೋಜನೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಇದಕ್ಕಾಗಿ, ನೀವು ಈ ಫ್ಯಾಷನ್ ಸಲಹೆಗೆ ವಿಶೇಷ ಗಮನ ನೀಡಬೇಕು, ಯಾವಾಗಲೂ ತಿಳಿ ಬಣ್ಣದ ಕುರ್ತಿಯೊಂದಿಗೆ ಗಾಢ ಬಣ್ಣದ ಜೀನ್ಸ್ ಮತ್ತು ತಿಳಿ ಬಣ್ಣದ ಜೀನ್ಸ್ ಜೊತೆ ಗಾಢ ಬಣ್ಣದ ಕುರ್ತಿ ಧರಿಸಿ. ನೀವು ಬಯಸಿದರೆ, ಕುರ್ತಿಯ ಬಣ್ಣಕ್ಕೆ ಹೊಂದಿಕೆಯಾಗುವ ದುಪಟ್ಟಾವನ್ನು ಸಹ ಧರಿಸಬಹುದು.
(Pic Credit: Fashion world Pinterest)(4 / 7)
ಜೀನ್ಸ್ ಜೊತೆ ಧರಿಸುವ ಸೈಡ್-ಸ್ಲಿಟ್ ಕುರ್ತಿಗಳು ಹುಡುಗಿಯರಿಗೆ ಆಧುನಿಕ ಮತ್ತು ಸ್ಟೈಲಿಶ್ ಲುಕ್ ನೀಡುತ್ತವೆ. ಹೂವಿನ ಅಥವಾ ಕಸೂತಿ ಮಾಡಿದ ಕುರ್ತಿಗಳು ಪಾರ್ಟಿಗಳು ಅಥವಾ ಫಂಕ್ಷನ್‌ಗಳಿಗೆ ಉತ್ತಮ.
(Pic Credit: kinjal singhal Pinterest)(5 / 7)
ಫ್ರಂಟ್ ಕಟ್ ಕುರ್ತಿ ಆಧುನಿಕ ನೋಟದ ಜೊತೆಗೆ ಆಕರ್ಷಕ ನೋಟವನ್ನು ನೀಡುತ್ತದೆ. ಇದು ನಿಮ್ಮ ಲುಕ್ ಡಿಫ್ರೆಂಟ್ ಆಗಿ ಕಾಣುವಂತೆ ಮಾಡುವುದು ಸುಳ್ಳಲ್ಲ.
( Pic Credit: Pinterest)(6 / 7)
ನೀವು ಈ ರೀತಿಯ ಚಿಕನ್ ಕರಿ ಕುರ್ತಾವನ್ನು ಜೀನ್ಸ್ ಜೊತೆ ಧರಿಸಬಹುದು. ಈ ಕುರ್ತಿಗಳು ಯಾವಾಗಲೂ ಫ್ಯಾಷನ್ ಟ್ರೆಂಡ್‌ನಲ್ಲಿ ಉಳಿಯುತ್ತವೆ. ಕಚೇರಿ, ಕಾಲೇಜು ಅಥವಾ ಪ್ರಯಾಣ ಮಾಡುವಾಗ ಧರಿಸಲು ಈ ಕುರ್ತಾ ಧರಿಸಲು ಸೂಕ್ತ ಎನ್ನಿಸುತ್ತದೆ.
(Pic Credit: 𝖘𝖔𝖚𝖑 𝖖𝖚𝖊𝖊𝖓 Pinterest)(7 / 7)
ನೀವು ಫ್ಲೇರ್ಡ್ ಕುರ್ತಾ, ಎ-ಲೈನ್ ಕುರ್ತಾ ಅಥವಾ ಸ್ಟ್ರೈಟ್ ಕಟ್ ಕುರ್ತಾವನ್ನು ಸ್ಟ್ರೈಟ್ ಲೇಯರ್ ಜೀನ್ಸ್ ಜೊತೆಗೆ ಪ್ರಯತ್ನಿಸಬಹುದು. ಫ್ಲೇರ್ಡ್ ಕುರ್ತಾ ಧರಿಸುವುದರಿಂದ ನೀವು ಚೆನ್ನಾಗಿ ಕಾಣುವುದಲ್ಲದೆ, ಜೀನ್ಸ್ ಜೊತೆ ಧರಿಸಲು ತುಂಬಾ ಆರಾಮದಾಯಕವಾಗಿರುತ್ತದೆ. ಎ-ಲೈನ್ ಕುರ್ತಾದ ಬಗ್ಗೆ ಮಾತನಾಡಿದರೆ, ಅದರ ಆಕರ್ಷಕ ನೋಟದಿಂದಾಗಿ ಫ್ಯಾಷನ್ ಪ್ರಿಯರು ಇದನ್ನು ತುಂಬಾ ಇಷ್ಟಪಡುತ್ತಾರೆ.
(Pic Credit: Suvarna Reddy Pinterest)ಇತರ ಗ್ಯಾಲರಿಗಳು