Blouse Designs: ಸೀರೆ ಉಟ್ಟಾಗ ಸ್ಟೈಲಿಶ್ ಆಗಿ ಕಾಣಬೇಕು ಅಂದ್ರೆ ಹೀಗಿರಲಿ ನಿಮ್ಮ ಬ್ಲೌಸ್ ಸ್ಲೀವ್‌ ಡಿಸೈನ್‌; ಇಲ್ಲಿವೆ ಲೇಟೆಸ್ಟ್‌ ವಿನ್ಯಾಸ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Blouse Designs: ಸೀರೆ ಉಟ್ಟಾಗ ಸ್ಟೈಲಿಶ್ ಆಗಿ ಕಾಣಬೇಕು ಅಂದ್ರೆ ಹೀಗಿರಲಿ ನಿಮ್ಮ ಬ್ಲೌಸ್ ಸ್ಲೀವ್‌ ಡಿಸೈನ್‌; ಇಲ್ಲಿವೆ ಲೇಟೆಸ್ಟ್‌ ವಿನ್ಯಾಸ

Blouse Designs: ಸೀರೆ ಉಟ್ಟಾಗ ಸ್ಟೈಲಿಶ್ ಆಗಿ ಕಾಣಬೇಕು ಅಂದ್ರೆ ಹೀಗಿರಲಿ ನಿಮ್ಮ ಬ್ಲೌಸ್ ಸ್ಲೀವ್‌ ಡಿಸೈನ್‌; ಇಲ್ಲಿವೆ ಲೇಟೆಸ್ಟ್‌ ವಿನ್ಯಾಸ

ನೀವು ಹೊಸ ಸೀರೆ ಖರೀದಿಸಿದ್ದು, ಬ್ಲೌಸ್ ಹೊಲಿಯಲು ಹೊರಟಿದ್ದರೆ ಇತ್ತೀಚಿನ ಫ್ಯಾನ್ಸಿ ಸ್ಲೀವ್‌ ಡಿಸೈನ್‌ಗಳನ್ನು ಒಮ್ಮೆ ಗಮನಿಸಿ. ಸಿಂಪಲ್ ಆಗಿ ತೋಳಿನ ವಿನ್ಯಾಸ ಮಾಡಿಸುವ ಬದಲು ಈ ರೀತಿ ಡಿಸೈನ್ ಮಾಡಿಸಿದರೆ ನೀವು ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತೀರಿ. ಇದರಿಂದ ನಿಮ್ಮ ಅಂದ ಹೆಚ್ಚುವುದು ಸುಳ್ಳಲ್ಲ.

ಇತ್ತೀಚಿನ ದಿನಗಳಲ್ಲಿ ಸೀರೆ ಖರೀದಿ ಮಾಡುವುದಕ್ಕಿಂತ ಬ್ಲೌಸ್ ಹೊಲಿಸುವುದು ಬಹಳ ಕಷ್ಟಕರವಾಗಿದೆ. ಸೀರೆಗಿಂತ ಬ್ಲೌಸ್ ವಿನ್ಯಾಸ ಹೇಗಿರುತ್ತೆ ಎನ್ನುವುದರ ಮೇಲೆ ಅದನ್ನು ಉಟ್ಟಾಗ ನಮ್ಮ ಅಂದ ನಿರ್ಧಾರವಾಗುತ್ತದೆ. ಬ್ಲೌಸ್‌ ಹೊಲಿಸುವಾಗ ಸ್ಲೀವ್ಸ್ ಡಿಸೈನ್ ಕೂಡ ಬಹಳ ಮುಖ್ಯವಾಗುತ್ತದೆ. ನೀವು ಸ್ಟೈಲಿಶ್ ಆಗಿ ಸ್ಲೀವ್‌ ಡಿಸೈನ್ ಮಾಡಬೇಕು ಅಂತಿದ್ರೆ ಈ ವಿನ್ಯಾಸಗಳನ್ನು ಗಮನಿಸಿ. ಇವು ಲೇಟೆಸ್ಟ್ ಟ್ರೆಂಡ್‌ನ ವಿನ್ಯಾಸಗಳು.
icon

(1 / 8)

(Instagram)

ರಿಬ್ಬನ್ ಆಕಾರದ ತೋಳುಗಳುನಿಮ್ಮ ಬ್ಲೌಸ್‌ನಲ್ಲಿ ಸರಳವಾದ ತೋಳಿನ ವಿನ್ಯಾಸ ಮಾಡಿಸುವ ಬದಲು, ನೀವು ಈ ರಿಬ್ಬನ್ ವಿನ್ಯಾಸವನ್ನು ಪ್ರಯತ್ನಿಸಬಹುದು. ಇದರಲ್ಲಿ, ತೋಳುಗಳಲ್ಲಿ V ಆಕಾರದ ಕಟ್ ವರ್ಕ್‌ ಮಾಡಲಾಗಿದ್ದು, ಕೊನೆಯಲ್ಲಿ ಇದನ್ನು ಟೈ ಮಾಡಬಹುದು. ಈ ವಿನ್ಯಾಸವು ಸರಳ ಸೀರೆಗಳಿಗೆ ವಿಶೇಷ ಲುಕ್ ಸಿಗುವಂತೆ ಮಾಡುತ್ತದೆ. 
icon

(2 / 8)

ರಿಬ್ಬನ್ ಆಕಾರದ ತೋಳುಗಳು
ನಿಮ್ಮ ಬ್ಲೌಸ್‌ನಲ್ಲಿ ಸರಳವಾದ ತೋಳಿನ ವಿನ್ಯಾಸ ಮಾಡಿಸುವ ಬದಲು, ನೀವು ಈ ರಿಬ್ಬನ್ ವಿನ್ಯಾಸವನ್ನು ಪ್ರಯತ್ನಿಸಬಹುದು. ಇದರಲ್ಲಿ, ತೋಳುಗಳಲ್ಲಿ V ಆಕಾರದ ಕಟ್ ವರ್ಕ್‌ ಮಾಡಲಾಗಿದ್ದು, ಕೊನೆಯಲ್ಲಿ ಇದನ್ನು ಟೈ ಮಾಡಬಹುದು. ಈ ವಿನ್ಯಾಸವು ಸರಳ ಸೀರೆಗಳಿಗೆ ವಿಶೇಷ ಲುಕ್ ಸಿಗುವಂತೆ ಮಾಡುತ್ತದೆ. 

( (Image Credit: sadhnauniquedesign))

ನೀವು ಬ್ಲೌಸ್ ತೋಳುಗಳಿಗೆ ಸರಳವಾದ, ಸೊಗಸಾದ ಮಾದರಿಯನ್ನು ಹುಡುಕುತ್ತಿದ್ದರೆ ಈ ಟಿಯರ್ ಡ್ರಾಪ್ ಕಟ್ ವರ್ಕ್ ವಿನ್ಯಾಸ ಅತ್ಯುತ್ತಮವಾಗಿದೆ. ಸಿಂಪಲ್ ಆಗಿದ್ರು ಸ್ಟೈಲಿಶ್ ಆಗಿ ಕಾಣಿಸಬೇಕು ಅನ್ನುವವರಿಗೆ ಈ ವಿನ್ಯಾಸ ಇಷ್ಟವಾಗುತ್ತದೆ. ವಿಶೇಷವೆಂದರೆ ಇದು ಎಲ್ಲಾ ರೀತಿಯ ಸೀರೆಗಳಿಗೂ ಹೊಂದುವ ಡಿಸೈನ್ ಆಗಿದೆ. 
icon

(3 / 8)

( (Image Credit: blouselehenga))

ಟ್ರೆಂಡಿ ರಫಲ್ ಸ್ಲೀವ್ಸ್‌ ‌ಈ ರಫಲ್ ತೋಳುಗಳು ಸೀರೆ, ಲೆಹೆಂಗಾಗಳಿಂದ ಹಿಡಿದು ಇಂಡೋ-ವೆಸ್ಟರ್ನ್ ಉಡುಪುಗಳು ಮತ್ತು ಗೌನ್‌ಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿವೆ. ಇವು ತುಂಬಾ ಸ್ಟೈಲಿಶ್ ಆಗಿ ಕಾಣುತ್ತವೆ ಮತ್ತು ಸಾಂಪ್ರದಾಯಿಕ ತೋಳುಗಳಿಗಿಂತ ಸಾಕಷ್ಟು ಭಿನ್ನವಾಗಿವೆ. ಈ ವಿನ್ಯಾಸವು ಜಾರ್ಜೆಟ್, ಶಿಫೋನ್, ನೆಟ್‌ನಂತಹ ಹಗುರವಾದ ಬಟ್ಟೆಯಿಂದ ಮಾಡಿದ ಸೀರೆಗಳಿಗೆ ಸೂಕ್ತವಾಗಿದೆ.
icon

(4 / 8)

ಟ್ರೆಂಡಿ ರಫಲ್ ಸ್ಲೀವ್ಸ್‌ 
‌ಈ ರಫಲ್ ತೋಳುಗಳು ಸೀರೆ, ಲೆಹೆಂಗಾಗಳಿಂದ ಹಿಡಿದು ಇಂಡೋ-ವೆಸ್ಟರ್ನ್ ಉಡುಪುಗಳು ಮತ್ತು ಗೌನ್‌ಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿವೆ. ಇವು ತುಂಬಾ ಸ್ಟೈಲಿಶ್ ಆಗಿ ಕಾಣುತ್ತವೆ ಮತ್ತು ಸಾಂಪ್ರದಾಯಿಕ ತೋಳುಗಳಿಗಿಂತ ಸಾಕಷ್ಟು ಭಿನ್ನವಾಗಿವೆ. ಈ ವಿನ್ಯಾಸವು ಜಾರ್ಜೆಟ್, ಶಿಫೋನ್, ನೆಟ್‌ನಂತಹ ಹಗುರವಾದ ಬಟ್ಟೆಯಿಂದ ಮಾಡಿದ ಸೀರೆಗಳಿಗೆ ಸೂಕ್ತವಾಗಿದೆ.

((Image Credit: designerblouse58))

ವಿಶಿಷ್ಟ ಬ್ಲಾಕ್ ಸ್ಲೀವ್ಸ್ ಪ್ಯಾಟರ್ನ್ಇಲ್ಲಿಯವರೆಗೆ ಕೆಲವೇ ಜನರು ನೋಡಿರುವ ಮತ್ತು ಎಲ್ಲರ ಗಮನವನ್ನು ಸೆಳೆಯುವಷ್ಟು ಟ್ರೆಂಡಿಯಾಗಿ ಕಾಣುವ ವಿನ್ಯಾಸವನ್ನು ನೀವು ಮಾಡಿಸಿಕೊಳ್ಳಲು ಬಯಸಿದರೆ, ಈ ವಿನ್ಯಾಸಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಈ ಮಾದರಿಯು ತುಂಬಾ ಸುಂದರವಾಗಿ ಕಾಣುವ ಬ್ಲಾಕ್ ಆಕಾರದ ವಿನ್ಯಾಸವನ್ನು ನೀಡುತ್ತಿದೆ. ಇದು ರೇಷ್ಮೆಯಂತಹ ಸೀರೆಗಳಿಗೆ ಹೆಚ್ಚು ಹೊಂದುತ್ತದೆ. 
icon

(5 / 8)

ವಿಶಿಷ್ಟ ಬ್ಲಾಕ್ ಸ್ಲೀವ್ಸ್ ಪ್ಯಾಟರ್ನ್
ಇಲ್ಲಿಯವರೆಗೆ ಕೆಲವೇ ಜನರು ನೋಡಿರುವ ಮತ್ತು ಎಲ್ಲರ ಗಮನವನ್ನು ಸೆಳೆಯುವಷ್ಟು ಟ್ರೆಂಡಿಯಾಗಿ ಕಾಣುವ ವಿನ್ಯಾಸವನ್ನು ನೀವು ಮಾಡಿಸಿಕೊಳ್ಳಲು ಬಯಸಿದರೆ, ಈ ವಿನ್ಯಾಸಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಈ ಮಾದರಿಯು ತುಂಬಾ ಸುಂದರವಾಗಿ ಕಾಣುವ ಬ್ಲಾಕ್ ಆಕಾರದ ವಿನ್ಯಾಸವನ್ನು ನೀಡುತ್ತಿದೆ. ಇದು ರೇಷ್ಮೆಯಂತಹ ಸೀರೆಗಳಿಗೆ ಹೆಚ್ಚು ಹೊಂದುತ್ತದೆ. 

( (Image Credit: blousebook))

ಡೈಮಂಡ್ ಕಟ್ ವರ್ಕ್ ಸ್ಲೀವ್ಸ್ ಪ್ಯಾಟರ್ನ್ಈ ಡೈಮಂಡ್ ಕಟ್ ವರ್ಕ್ ಸ್ಲೀವ್ಸ್ ಪ್ಯಾಟರ್ನ್ ನಿಮ್ಮ ಬ್ಲೌಸ್‌ಗೆ ಪರಿಪೂರ್ಣ ಆಯ್ಕೆಯಾಗಿರಬಹುದು. ಈ ರೀತಿಯ ತೋಳುಗಳನ್ನು ಧರಿಸಿದರೆ ನೀವು ತುಂಬಾ ಸುಂದರವಾಗಿ ಕಾಣಬಹುದು. ವಿಶೇಷವೆಂದರೆ ಈ ತೋಳು ವಿನ್ಯಾಸಗಳನ್ನು ಪ್ರತಿಯೊಂದು ರೀತಿಯ ಸೀರೆಯೊಂದಿಗೆ ವಿನ್ಯಾಸಗೊಳಿಸಬಹುದು.
icon

(6 / 8)

ಡೈಮಂಡ್ ಕಟ್ ವರ್ಕ್ ಸ್ಲೀವ್ಸ್ ಪ್ಯಾಟರ್ನ್
ಈ ಡೈಮಂಡ್ ಕಟ್ ವರ್ಕ್ ಸ್ಲೀವ್ಸ್ ಪ್ಯಾಟರ್ನ್ ನಿಮ್ಮ ಬ್ಲೌಸ್‌ಗೆ ಪರಿಪೂರ್ಣ ಆಯ್ಕೆಯಾಗಿರಬಹುದು. ಈ ರೀತಿಯ ತೋಳುಗಳನ್ನು ಧರಿಸಿದರೆ ನೀವು ತುಂಬಾ ಸುಂದರವಾಗಿ ಕಾಣಬಹುದು. ವಿಶೇಷವೆಂದರೆ ಈ ತೋಳು ವಿನ್ಯಾಸಗಳನ್ನು ಪ್ರತಿಯೊಂದು ರೀತಿಯ ಸೀರೆಯೊಂದಿಗೆ ವಿನ್ಯಾಸಗೊಳಿಸಬಹುದು.

((Image Credit: blouse_designs_ideas))

ನೀವು ಹಾಫ್ ಸ್ಲೀವ್ ತೋಳಿನ ವಿನ್ಯಾಸ ಮಾಡಲು ಬಯಸಿದರೆ ಈ ವಿನ್ಯಾಸಕ್ಕಿಂತ ಚೆನ್ನಾಗಿರುವುದು ಬೇರೆ ಸಿಗಲಿಕ್ಕಿಲ್ಲ. ಇದು ಸಖತ್ ಟ್ರೆಂಡಿ ಆಗಿ ಹಾಗೂ ಸ್ಟೈಲಿಶ್ ಆಗಿಯೂ ಕಾಣಿಸುತ್ತದೆ. ಈ ವಿನ್ಯಾಸವು ನೀವು ತುಂಬಾ ಮುದ್ದಾಗಿ ಕಾಣುವಂತೆ ಮಾಡುತ್ತದೆ.
icon

(7 / 8)

( (Image Credit: garima91634))

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು