Father’s Day: ಟೆಕ್‌ಪ್ರಿಯ ಅಪ್ಪನಿಗೆ ಗ್ಯಾಡ್ಜೆಟ್ ಉಡುಗೊರೆ ನೀಡಿ, ಹೆಡ್‌ಸೆಟ್‌ನಿಂದ ಲ್ಯಾಪ್‌ಟಾಪ್‌ವರೆಗೆ ಇಲ್ಲಿದೆ ಗಿಫ್ಟ್ ಐಡಿಯಾ
Father's day gift Ideas: ವಿಶ್ವ ಅಪ್ಪಂದಿರ ದಿನ ಹತ್ತಿರದಲ್ಲಿದೆ. ನಿಮ್ಮ ಪ್ರೀತಿಯ ತಂದೆಯು ಸ್ಮಾರ್ಟ್‌ಫೋನ್, ಗ್ಯಾಡ್ಜೆಟ್ ಇಷ್ಟಪಡುವ ಟೆಕ್‌ಪ್ರಿಯರಾಗಿದ್ದರೆ ಅವರಿಗೆ ಇಷ್ಟವಾಗುವಂತಹ ಗ್ಯಾಡ್ಜೆಟ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ಅಪ್ಪನಿಗೆ ಉಡುಗೊರೆ ನೀಡಬಹುದಾದ ಕೆಲವು ಗ್ಯಾಡ್ಜೆಟ್‌ಗಳ ವಿವರ ಇಲ್ಲಿದೆ.
(1 / 5)
ಅಪ್ಪಂದಿರ ದಿನಕ್ಕೆ ಏನಾದರೂ ಗ್ಯಾಡ್ಜೆಟ್ ಉಡುಗೊರೆ ನೀಡುವುದಾದರೆ ಇಂದೇ ಪ್ಲಾನ್ ಮಾಡಬೇಕು. ಆನ್‌ಲೈನ್‌ನಲ್ಲಿ ಆರ್ಡ್ ಮಾಡುವುದಾದರೆ ಅಥವಾ ಗ್ಯಾಡ್ಜೆಟ್ ಶಾಪ್‌ಗೆ ಹೋಗಲು ಇನ್ನು ಹೆಚ್ಚು ಸಮಯವಿಲ್ಲ. ನೀವು ಮತ್ತು ನಿಮ್ಮ ತಂದೆ ಎಚ್‌ಪಿ ಕಂಪನಿಯ ಫ್ಯಾನ್ ಆಗಿದ್ದರೆ ಇಲ್ಲಿ ಎಚ್‌ಪಿ ಪೆವಿಲಿಯನ್ ಎಕ್ಸ್360, ಎಚ್‌ಪಿ `14 ಲ್ಯಾಪ್‌ಟಾಪ್‌ನಿಂದ ಹೈಪರ್‌ಎಕ್ಸ್ ಕ್ಲೌಡ್ ಸ್ಟ್ರಿಂಗರ್ ಕೋರ್ ಗೇಮಿಂಗ್ ಹೆಡ್‌ಸೆಟ್‌ವರೆಗೆ ಹಲವು ಆಯ್ಕೆಗಳಿವೆ. ಇವುಗಳಲ್ಲಿ ನಿಮ್ಮ ತಂದೆಗೆ ಏನು ನೀಡಲು ಬಯಸುವಿರಿ? ಯೋಚಿಸಿ.
(Pexels)(2 / 5)
HP Pavilion x360: ಬಹು ಅಗತ್ಯಗಳಿಗೆ ಸೂಕ್ತವಾದ ಲ್ಯಾಪ್‌ಟಾಪ್ ಇದು. ಇದನ್ನು ಸಾಂಪ್ರದಾಯಿಕ ಲ್ಯಾಪ್‌ಟಾಪ್‌ನಂತೆಯೂ ಬಳಸಬಹುದು ಅಥವಾ ಟ್ಯಾಬ್ಲೆಟ್‌ನಂತೆಯೇ ಬಳಸಬಹುದು. ಕೆಲಸ, ಮನರಂಜನೆ, ಸೃಜನಶೀಲ ಕೆಲಸಗಳಿಗೆ ನಿಮ್ಮ ತಂದೆಗಿದು ಸೂಕ್ತವಾಗಿದೆ. P Pavilion x360 ದರ ಸುಮಾರು 78,999 ರೂಪಾಯಿ ಇದೆ.
(3 / 5)
HP 14: ಎಚ್‌ಪಿ 14 2023ರ ಲ್ಯಾಪ್‌ಟಾಪ್ ಕೂಡ ನಿಮ್ಮ ತಂದೆಗೆ ಇಷ್ಟವಾಗಬಹುದು. ಇದರಲ್ಲಿ ಪವರ್‌ಫುಲ್ ಇಂಟೆಲ್ ಕೋರ್ ಐ3 ಪ್ರೊಸೆಸರ್ ಇದೆ. ಇದು 16 ಜಿಬಿವರೆಗೆ ರಾಮ್ ಹೊಂದಿದೆ. ಹೀಗಾಗಿ ಅತ್ಯುತ್ತಮ ಕಾರ್ಯಕ್ಷಮತೆ ನಿರೀಕ್ಷಿಸಬಹುದು. ಇದರ ದರ 62,999 ರೂಪಾಯಿ.
(4 / 5)
HP M24f FHD Monitor:ಇದು ಹೈ ಡೆಫಿನೇಷನ್ ಮಾನಿಟರ್ ಆಗಿದ್ದು, 24 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಎಚ್‌ಡಿಎಎಂಐ ಮತ್ತು ವಿಜೆಎ ಕನೆಕ್ಟಿವಿಟಿ ಆಯ್ಕೆಯೂ ಇದರಲ್ಲಿದೆ. ನಿಮ್ಮ ತಂದೆ ಗೇಮ್, ಕೆಲಸ ಮತ್ತು ಸಿನಿಮಾ ವೀಕ್ಷಣೆ ಇಷ್ಟಪಟ್ಟರೆ ಇದನ್ನು ಉಡುಗೊರೆಯಾಗಿ ನೀಡಬಹುದು. ಇದರ ದರ 12,999 ರೂಪಾಯಿ ಇದೆ.
ಇತರ ಗ್ಯಾಲರಿಗಳು