Fathers Day 2023: ದುಬಾರಿ ವಸ್ತುಗಳನ್ನ ಗಿಫ್ಟ್ ನೀಡುವ ಹೊರತಾಗಿ ಅಪ್ಪನ ಮೊಗದಲ್ಲಿ ನಗು ಹೇಗೆ ತರಿಸಬಹುದು? ಇಲ್ಲಿದೆ ಐಡಿಯಾಗಳು
- Fathers Day 2023 gift ideas: ಅಪ್ಪಂದಿರ ದಿನವನ್ನು ವಿಶೇಷವಾಗಿ ಆಚರಿಸಬೇಕೆಂದು ಪ್ಲಾನ್ ಮಾಡಿದ್ದೀರಾ? ಮಾರುಕಟ್ಟೆಯಿಂದ, ಅಂಗಡಿಯಿಂದ ದುಬಾರಿ ಗಿಫ್ಟ್ ತಂದು ತಂದೆಗೆ ಕೊಟ್ಟು ಅವರನ್ನು ಖುಷಿಪಡಿಸಬೇಕೆಂದು ಸಾಮಾನ್ಯವಾಗಿ ಎಲ್ಲರೂ ಪ್ಲಾನ್ ಮಾಡಿರುತ್ತಾರೆ. ಆದರೆ, ಅದರ ಹೊರತಾಗಿ ಅಪ್ಪನ ಮೊಗದಲ್ಲಿ ನಗು ಹೇಗೆ ತರಿಸಬಹುದು ಎಂಬುದಕ್ಕೆ ಇಲ್ಲಿದೆ ಸಿಂಪಲ್ ಐಡಿಯಾಗಳು..

(1 / 8)
ನಿಮ್ಮ ಅಪ್ಪ ವಾಟ್ಸ್ ಆಪ್ ಬಳಸುತ್ತಿದ್ದರೆ ಹಾರ್ಟ್ ಟಚಿಂಗ್ ಆಗಿ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿ. ಮೊಬೈಲ್ ಇಲ್ಲ ಅಂದ್ರೆ ನೀವು ವಾಯ್ಸ್ ರೆಕಾರ್ಡ್ ಮಾಡಿ ಮನೆಯಲ್ಲಿ ಅವರಿಗೆ ಕೇಳುವ ಹಾಗೆ ಪ್ಲೇ ಮಾಡಿ
(2 / 8)
ನೀವು ಬಾಲ್ಯದಲ್ಲಿ ಅಪ್ಪನೊಂದಿಗೆ ತೆಗೆಸಿಕೊಂಡ ಹಳೆಯ ಫೋಟೋವನ್ನು ರಿಕ್ರಿಯೇಟ್ ಮಾಡಿ. ಹಳೆಯ ಮತ್ತು ಹೊಸ ಫೋಟೋ ಕೊಲ್ಯಾಜ್ ಮಾಡಿ ಅದನ್ನು ಅವರಿಗೆ ಕಳುಹಿಸಿ ಅಥವಾ ತೋರಿಸಿ.
(3 / 8)
ಪ್ರಾತಿನಿಧಿಕ ಚಿತ್ರ ಅಥವಾ ಅಪ್ಪನ ಫೋಟೋ ಅಥವಾ ನಿಮ್ಮ ಫ್ಯಾಮಿಲಿಯ ಫೋಟೋಗಳನ್ನು ಬಳಸಿ ಅಪ್ಪ ಪಟ್ಟ ಕಷ್ಟಗಳನ್ನ, ತ್ಯಾಗಗಳನ್ನು ಬಿಂಬಿಸುವ ವಿಡಿಯೋ ಮಾಡಿ, ಅದಕ್ಕೆ ನೀವು ವಾಯ್ಸ್ ಓವರ್ ಕೊಡಿ. ಈ ವಿಡಿಯೋವನ್ನು ಮನೆಯವರೆಲ್ಲರು ಇರುವಾಗ ಪ್ಲೇ ಮಾಡಿ.
(4 / 8)
ಅಪ್ಪನಿಗೆ ಇಷ್ಟವಾಗಿರೋ ಸ್ಥಳಕ್ಕೆ ಕರೆದುಕೊಂಡು ಹೋಗಿ, ಆದಷ್ಟು ಇದನ್ನು ಸರ್ಪ್ರೈಸ್ ಆಗಿ ಇಡಿ. ಫ್ಯಾಮಿಲಿ ಟ್ರಿಪ್ ಆದಂತೂ ಆಗುತ್ತದೆ.
(5 / 8)
ದೂರದ ಊರುಗಳಲ್ಲಿರುವ ಅಪ್ಪನ ಹಳೆಯ ಸ್ನೇಹಿತರು ಅಪ್ಪನ ಬಗ್ಗೆ ಹೇಳುವ ಸೆಲ್ಫಿ ವಿಡಿಯೋಗಳನ್ನ ಮಾಡಿಸಿ, ಅಪ್ಪನಿಗೆ ಕಳುಹಿಸಿ/ತೋರಿಸಿ.
(6 / 8)
ಚಿಕ್ಕ ವಯಸ್ಸಿನಲ್ಲಿ ಅಪ್ಪ ನಿಮಗೆ ಮುತ್ತು ನೀಡುವುದು, ನೀವು ಅಪ್ಪನಿಗೆ ಮುತ್ತು ನೀಡುತ್ತಾ ಇದ್ದಿರಿ. ಆದರೆ ಬೆಳೆದು ದೊಡ್ಡವರಾದ ಮೇಲೆ ಇಷ್ಟೊಂದು ಬಾಂಧವ್ಯ ಎಲ್ಲರ ಮನೆಯಲ್ಲೂ ಇರುವುದಿಲ್ಲ. ಹೀಗಾಗಿ ಈ ವಿಶೇಷ ದಿನದಂದು ಅಪ್ಪನಿಗೊಂದು ಸಿಹಿ ಮುತ್ತು ನೀಡಿ ಹ್ಯಾಪಿ ಫಾದರ್ಸ್ ಡೇ ಎಂದು ವಿಶ್ ಮಾಡಿ. ಅವರ ಆಶೀರ್ವಾದ ಪಡೆಯಿರಿ.
(7 / 8)
ಅಪ್ಪನಿಗೆ ಇಷ್ಟವಾದ ತಿನಿಸು ಮಾಡಿ ಉಣಬಡಿಸಿ. ನೀವೇ ಕೈತುತ್ತು ತಿನ್ನಿಸಿದರೆ ಮತ್ತಷ್ಟು ಖುಷಿಯಾಗುತ್ತಾರೆ ಅಪ್ಪ.
ಇತರ ಗ್ಯಾಲರಿಗಳು