Fathers day 2024: ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳಾದರು, ಅಪ್ಪನ ಹೆಸರು ಉಳಿಸಿದರು photos
- ತಂದೆಯ ನಂತರ ಮಕ್ಕಳು ಅಖಿಲ ಭಾರತ ಆಡಳಿತ ಸೇವೆ ಪರೀಕ್ಷೆ ಉತ್ತೀರ್ಣರಾಗಿ ಐಎಎಸ್( IAS), ಐಪಿಎಸ್( IPS), ಐಎಫ್‌ಎಸ್ ( IFS) ಅಧಿಕಾರಿಗಳ ಉದಾಹರಣೆಯಿದೆ. ತಂದೆಯ ದಿನ( Father day) ದಿನದ ಸಂದರ್ಭದಲ್ಲಿ ಇಂತಹ ಸಾಧಕರ ನೋಟ ಇಲ್ಲಿದೆ.
- ತಂದೆಯ ನಂತರ ಮಕ್ಕಳು ಅಖಿಲ ಭಾರತ ಆಡಳಿತ ಸೇವೆ ಪರೀಕ್ಷೆ ಉತ್ತೀರ್ಣರಾಗಿ ಐಎಎಸ್( IAS), ಐಪಿಎಸ್( IPS), ಐಎಫ್‌ಎಸ್ ( IFS) ಅಧಿಕಾರಿಗಳ ಉದಾಹರಣೆಯಿದೆ. ತಂದೆಯ ದಿನ( Father day) ದಿನದ ಸಂದರ್ಭದಲ್ಲಿ ಇಂತಹ ಸಾಧಕರ ನೋಟ ಇಲ್ಲಿದೆ.
(1 / 8)
ಕರ್ನಾಟಕ ಕೇಡರ್ ನ ಅಧಿಕಾರಿಯಾಗಿ ಕಳೆದ ತಿಂಗಳಷ್ಟೇ ನಿವೃತ್ತಿಯಾದ ರಾಕೇಶ್ ಸಿಂಗ್ ಅವರು ಮೂರೂವರೆ ದಶಕ ಕರ್ನಾಟಕದಲ್ಲಿ ಕೆಲಸ ಮಾಡಿದವರು. ಅವರ ತಂದೆ ಭರತ್‌ಸಿಂಗ್ ಐಪಿಎಸ್ ಅಧಿಕಾರಿಯಾಗಿದ್ದರೆ, ತಾತಾ ಎಸ್‌ಪಿ ಸಿಂಗ್ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು. ರಾಕೇಶ್ ಪುತ್ರಿ ಸಂಸ್ಕೃತಿ ಸಿಂಗ್ ಈಗ ಯುಪಿಎಸ್‌ಸಿ ತೇರ್ಗಡೆಯಾಗಿದ್ದಾರೆ.
(2 / 8)
ಬಿಹಾರ ಮೂಲದವರಾದ ಕರ್ನಾಟಕ ಕೇಡರ್‌ನ ಹಿರಿಯ ಐಎಫ್‌ಎಸ್ ಅಧಿಕಾರಿ ಕುಮಾರಪುಷ್ಕರ್ ಅವರು ಮೂರು ದಶಕದಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ತಂದೆ ಸಹದೇವ್ ಝಾ ಅವರು ಬಿಹಾರ ಕೇಡರ್ ಐಎಫ್‌ಎಸ್ ಅಧಿಕಾರಿಯಾಗಿ ಪಿಸಿಸಿಎಫ್ ಆಗಿದ್ದರು.
(3 / 8)
ಖಡಕ್ ಅಧಿಕಾರಿ ಎಂದೇ ಹೆಸರಾದ ಸಿ.ಶಿಖಾ ಅವರು ಸದ್ಯ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಕೆ ಆಯುಕ್ತರು. ಅವರ ತಂದೆ ಸಿ.ಚಂದ್ರಮೋಹನ್ ಅವರು ತಮಿಳುನಾಡು ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ಶಿಖಾ ಪತಿ ಡಾ.ಅಜಯನಾಗಭೂಷಣ್ ಕೂಡ ಐಎಎಸ್ ಅಧಿಕಾರಿ.
(4 / 8)
ಕರ್ನಾಟಕದ ಐಪಿಎಸ್ ಅಧಿಕಾರಿಯಾಗಿದ್ದ ಶಂಕರ್ ಮಹದೇವ ಬಿದರಿ ಅವರ ಪುತ್ರಿ ವಿಜಯಲಕ್ಷ್ಮಿ ಬಿದರಿ ಅವರು ಮಹಾರಾಷ್ಟ್ರ ಕೇಡರ್ ಹಿರಿಯ ಐಎಎಸ್ ಅಧಿಕಾರಿ. ಎರಡೂವರೆ ದಶಕ ಸೇವೆ ಸಲ್ಲಿಸಿದ್ದಾರೆ.
(5 / 8)
ಕರ್ನಾಟಕದ ಡಿಜಿಪಿಯಾಗಿದ್ದ ಶಂಕರ್ ಬಿದರಿ ಅವರ ಪುತ್ರ ವಿಜಯೇಂದ್ರ ಬಿದರಿ ತಮಿಳುನಾಡು ಕೇಡರ್ ಐಪಿಎಸ್ ಅಧಿಕಾರಿ. ಸದ್ಯ ಸಿಬಿಐಯಲ್ಲಿದ್ದಾರೆ. ಎರಡು ದಶಕದ ಐಪಿಎಸ್ ಸೇವೆಯನ್ನು ಅವರು ಮುಗಿಸಿದ್ದಾರೆ.
(6 / 8)
ಮೈಸೂರು ಡಿಸಿಯಾಗಿದ್ದ ಹಾಲಿ ಆರೋಗ್ಯ ಇಲಾಖೆ ಆಯುಕ್ತ ಡಿ.ರಣದೀಪ್ ಅವರ ತಂದೆ ಐ.ದೇವೇಂದ್ರನ್ ಈ ಹಿಂದೆ ಐಎಎಸ್ ಅಧಿಕಾರಿಯಾಗಿದ್ದರು. ರಣದೀಪ್ ಕೂಡ ಕರ್ನಾಟಕದಲ್ಲಿ ಎರಡು ದಶಕದ ಸೇವೆ ಪೂರೈಸುತ್ತಿದ್ದಾರೆ.
(7 / 8)
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ, ಸಾರಿಗೆ ಆಯುಕ್ತರೂ ಆಗಿದ್ದ ಎಂ.ಸಿ.ನಾರಾಯಣಗೌಡ ಅವರ ಪುತ್ರ ಎಂ.ಎನ್.ಅನುಚೇತ್ ಕೂಡ ಕರ್ನಾಟಕದ ಐಪಿಎಸ್ ಅಧಿಕಾರಿ. ಹಾಲಿ ಬೆಂಗಳೂರು ನಗರ ಜಂಟಿ ಆಯುಕ್ತ
ಇತರ ಗ್ಯಾಲರಿಗಳು