Gorilla Lady Fatou: ಜರ್ಮನಿಯ ಬರ್ಲಿನ್ ಝೂನಲ್ಲಿರುವ ಈ ಅಜ್ಜಿ ಗೊರಿಲ್ಲಾಕ್ಕೆ 68ನೇ ಹುಟ್ಟುಹಬ್ಬದ ಸಂಭ್ರಮ - ಇಲ್ಲಿದೆ ಆ ಚಿತ್ರನೋಟ
Gorilla Lady Fatou: ಜರ್ಮನಿಯ ಬರ್ಲಿನ್ ಝೂ ಪಾಲಿಗೆ ಏಪ್ರಿಲ್ 11 ಬಹು ವಿಶೇಷ. ಕಾರಣ ಜಗತ್ತಿನ ಅತಿ ಹಿರಿಯ ಹೆಣ್ಣು ಗೊರಿಲ್ಲಾ ಫಟೌ (Fatou)ನ 68ನೇ ಹುಟ್ಟುಹಬ್ಬದ ಸಂಭ್ರಮ. ಅದರ ಆಕರ್ಷಕ ಚಿತ್ರನೋಟ ಇಲ್ಲಿದೆ
(1 / 10)
ಜಗತ್ತಿನ ಅತಿ ಹಿರಿಯ ಹೆಣ್ಣು ಗೊರಿಲ್ಲಾ ಫಟೌ ಬಗ್ಗೆ ಕೆಲವರು ಈಗಾಗಲೇ ತಿಳಿದುಕೊಂಡಿರಬಹುದು. ಇನ್ನು ಕೆಲವರಿಗೆ ಈ ಅಜ್ಜಿ ಗೊರಿಲ್ಲಾ ಕಥೆ ಹೊಸದಿರಬಹುದು. ಅದೇನೇ ಇರಲಿ, ಪ್ರತಿ ವರ್ಷ ಏಪ್ರಿಲ್ ಬಂದರೆ ಜರ್ಮನಿಯ ಬರ್ಲಿನ್ ಝೂನಲ್ಲಿ ಸಂಭ್ರಮ. ಅದಕ್ಕೆ ಕಾರಣ ಫಟೌ (Fatou) ಗೊರಿಲ್ಲಾದ ಹುಟ್ಟುಹಬ್ಬ.
(2 / 10)
ಹೆಣ್ಣು ಗೊರಿಲ್ಲಾ ಫಟೌಗೆ 68ನೇ ಹುಟ್ಟುಹಬ್ಬದ ಸಂಭ್ರಮವಾಗಿ ಗೊರಿಲ್ಲಾ ಫುಡ್ ಸರ್‌ಪ್ರೈಸ್ ನೀಡುವುದನ್ನು ಬರ್ಲಿನ್ ಝೂ ಸಿಬ್ಬಂದಿ ಈ ವರ್ಷವೂ ಮುಂದುವರಿಸಿದ್ದಾರೆ.
(AFP)(3 / 10)
ಗೊರಿಲ್ಲಾ ಫುಡ್ ಸರ್‌ಪ್ರೈಸ್ ಬಾಸ್ಕೆಟ್‌ನಲ್ಲಿ ಕಲ್ಲಂಗಡಿ ಹಣ್ಣಿನ ಮೇಲೆ ನೇರಳೆ ಹಣ್ಣುಗಳನ್ನು ಚುಚ್ಚಿ 6 ಎಂದು ಬರೆದಿದ್ದು, ಕರಬೂಜ ಹಣ್ಣನ್ನು ಕತ್ತರಿಸಿ ಎರಡು ಭಾಗ ಮಾಡಿ 8 ಎಂದು ಕಾಣುವಂತೆ ಇರಿಸಿದ್ಧಾರೆ. ದೂರದಿಂದಲೇ 68 ಎಂಬುದು ಗೋಚರಿಸುತ್ತದೆ.
(AFP)(5 / 10)
ಗೊರಿಲ್ಲಾಗಳು ಕೂಡ ಮನುಷ್ಯರಂತೆಯೇ ವಯಸ್ಸಾದಂತೆ ಆಹಾರ ತಿನ್ನುವ ಪ್ರಮಾಣ ಕಡಿಮೆಯಾಗುತ್ತದೆ. ಸಕ್ಕರೆ/ ಸಿಹಿ ತಿನ್ನುವ ಪ್ರಮಾಣ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ವರ್ಷಕ್ಕೊಮ್ಮೆ ಅದಕ್ಕೆ ಈ ರೀತಿ ಗೊರಿಲ್ಲಾ ಫುಡ್ ಸರ್‌ಪ್ರೈಸ್ ನೀಡಲಾಗುತ್ತದೆ.
(AFP)(7 / 10)
ಗೊರಿಲ್ಲಾ ಫುಡ್ ಸರ್‌ಪ್ರೈಸ್ ಬಾಸ್ಕೆಟ್‌ನಲ್ಲಿ ಏನೇನು ಇರುತ್ತವೆ - ಸೊಪ್ಪು ತರಕಾರಿಗಳ ಜತೆಗೆ ಒಂದು ಕಲ್ಲಂಗಡಿ ಹಣ್ಣು, ಒಂದು ಕರಬೂಜ ಹಣ್ಣು, ಒಂದಷ್ಟು ಪ್ಲಮ್ ಹಣ್ಣು, ಪೀಚ್ ಹಣ್ಣು ಹಾಗೂ ಸ್ಟ್ರಾಬೆರಿ, ಬಿದುರಿನ ಸೊಪ್ಪುಗಳನ್ನು ಇರಿಸಲಾಗುತ್ತದೆ.
(Photo by Odd ANDERSEN / AFP)(8 / 10)
ಫಟೌ ಗೊರಿಲ್ಲಾ 1957ರಲ್ಲಿ ಜನಿಸಿದ್ದು ಪಶ್ಚಿಮ ಆಫ್ರಿಕಾದಲ್ಲಿ ಎಂದು ಹೇಳಲಾಗುತ್ತಿದ್ದು, ನಾವಿಕನೊಬ್ಬ ಅದನ್ನು 1959ರಲ್ಲಿ ಫ್ರಾನ್ಸ್‌ಗೆ ಕೊಂಡೊಯ್ದ. ಅಲ್ಲಿಂದ ಬರ್ಲಿನ್ ಝೂನವರು ಅದನ್ನು ತಮ್ಮಲ್ಲಿಗೆ ಕರೆಯಿಸಿಕೊಂಡರು ಎಂದು ಅದರ ಇತಿಹಾಸ ಹೇಳುತ್ತಿದೆ.
(AFP)(9 / 10)
ಬರ್ಲಿನ್ ಝೂನಲ್ಲಿ 1974ರ ಅಕ್ಟೋಬರ್ 30ರಂದು ಫಟೌ ಮೊದಲ ಮರಿಗೆ ಜನ್ಮ ನೀಡಿತು. ಅದಕ್ಕೆ ಡಫ್ಟಿ (Dufte) ಎಂದು ನಾಮಕರಣ ಮಾಡಲಾಗಿದೆ.
(AFP)ಇತರ ಗ್ಯಾಲರಿಗಳು