ಕನ್ನಡ ಸುದ್ದಿ  /  Photo Gallery  /  Feeling Too Cold, These Are The Possible Reasons For Cold Intolerance

Cold Intolerance: ಎಲ್ಲರಿಗಿಂತ ನಿಮಗೇ ಜಾಸ್ತಿ ಚಳಿ ಆಗ್ತಾ ಇದೆಯಾ? ಇದಕ್ಕೆ ಕಾರಣ ಇಲ್ಲಿದೆ

  • ಚಳಿಗಾಲದಲ್ಲಿ ಚಳಿಯಾಗುವುದು ಸಹಜ. ಆದರೆ ನೀವು ಎಲ್ಲರಿಗಿಂತಲೂ ಹೆಚ್ಚು ಚಳಿಯಿಂದ ನಡುಗುತ್ತಿದ್ದೀರಾ? ಆದರೆ ಅದಕ್ಕೆ ಕೆಲವು ಕಾರಣಗಳಿವೆ, ಅವುಗಳನ್ನು ನೋಡೋಣ ಬನ್ನಿ..

ನಿಮಗೆ ವಿಪರೀತ ಚಳಿ ಇದ್ದರೆ, ನಿಮ್ಮ ದೇಹವು ಶೀತವನ್ನು ನಿಭಾಯಿಸುತ್ತಿಲ್ಲ ಎಂದರ್ಥ. ಇದಕ್ಕೆ ಕಾರಣಗಳು ತಿಳಿದಿದೆಯೇ?
icon

(1 / 6)

ನಿಮಗೆ ವಿಪರೀತ ಚಳಿ ಇದ್ದರೆ, ನಿಮ್ಮ ದೇಹವು ಶೀತವನ್ನು ನಿಭಾಯಿಸುತ್ತಿಲ್ಲ ಎಂದರ್ಥ. ಇದಕ್ಕೆ ಕಾರಣಗಳು ತಿಳಿದಿದೆಯೇ?(Unsplash)

ಮಧುಮೇಹ: ಮಧುಮೇಹವು ಮೂತ್ರಪಿಂಡಗಳ ಮೇಲೆ ಮಾತ್ರವಲ್ಲದೆ ದೇಹದಲ್ಲಿನ ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಮಧುಮೇಹ ರೋಗಿಗಳು ಚಳಿಗಾಲದಲ್ಲಿ ಶೀತಕ್ಕೆ ಹೆಚ್ಚು ಒಳಗಾಗುತ್ತಾರೆ. ಮಧುಮೇಹ ರೋಗಿಗಳು ಸಹ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ಹೆಚ್ಚು ಚಳಿಯಿಂದ ನಡುಗುತ್ತಾರೆ.
icon

(2 / 6)

ಮಧುಮೇಹ: ಮಧುಮೇಹವು ಮೂತ್ರಪಿಂಡಗಳ ಮೇಲೆ ಮಾತ್ರವಲ್ಲದೆ ದೇಹದಲ್ಲಿನ ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಮಧುಮೇಹ ರೋಗಿಗಳು ಚಳಿಗಾಲದಲ್ಲಿ ಶೀತಕ್ಕೆ ಹೆಚ್ಚು ಒಳಗಾಗುತ್ತಾರೆ. ಮಧುಮೇಹ ರೋಗಿಗಳು ಸಹ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ಹೆಚ್ಚು ಚಳಿಯಿಂದ ನಡುಗುತ್ತಾರೆ.(Stock Photo)

ವಿಟಮಿನ್ ಬಿ12 ಕೊರತೆ: ಅತಿ ಚಳಿ, ಆಯಾಸ, ಉಸಿರಾಟದ ತೊಂದರೆ, ಹಸಿವಾಗದಿರುವುದು ವಿಟಮಿನ್ ಬಿ12 ಕೊರತೆಯ ಕೆಲವು ಲಕ್ಷಣಗಳಾಗಿವೆ. ದೇಹದಲ್ಲಿ ವಿಟಮಿನ್ ಬಿ12 ಪ್ರಮಾಣ ಕಡಿಮೆಯಾಗದಂತೆ ಹಾಲು, ಮೊಟ್ಟೆ, ಪನೀರ್ ಸೇವಿಸಬೇಕು.
icon

(3 / 6)

ವಿಟಮಿನ್ ಬಿ12 ಕೊರತೆ: ಅತಿ ಚಳಿ, ಆಯಾಸ, ಉಸಿರಾಟದ ತೊಂದರೆ, ಹಸಿವಾಗದಿರುವುದು ವಿಟಮಿನ್ ಬಿ12 ಕೊರತೆಯ ಕೆಲವು ಲಕ್ಷಣಗಳಾಗಿವೆ. ದೇಹದಲ್ಲಿ ವಿಟಮಿನ್ ಬಿ12 ಪ್ರಮಾಣ ಕಡಿಮೆಯಾಗದಂತೆ ಹಾಲು, ಮೊಟ್ಟೆ, ಪನೀರ್ ಸೇವಿಸಬೇಕು.

ದುರ್ಬಲ ಚಯಾಪಚಯ: ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ, ವಯಸ್ಸಾದ ಕಾರಣ ದೇಹದ ಚಯಾಪಚಯವು ನಿಧಾನಗೊಳ್ಳುತ್ತದೆ. ಇದು ದೇಹದ ಶಾಖವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಸಹ ಕಡಿಮೆ ಮಾಡುತ್ತದೆ. ಅಂತಹವರಿಗೂ ಶೀತ ಮತ್ತು ನಡುಕ ಉಂಟಾಗುತ್ತದೆ.
icon

(4 / 6)

ದುರ್ಬಲ ಚಯಾಪಚಯ: ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ, ವಯಸ್ಸಾದ ಕಾರಣ ದೇಹದ ಚಯಾಪಚಯವು ನಿಧಾನಗೊಳ್ಳುತ್ತದೆ. ಇದು ದೇಹದ ಶಾಖವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಸಹ ಕಡಿಮೆ ಮಾಡುತ್ತದೆ. ಅಂತಹವರಿಗೂ ಶೀತ ಮತ್ತು ನಡುಕ ಉಂಟಾಗುತ್ತದೆ.(Unsplash)

ರಕ್ತಹೀನತೆ: ರಕ್ತಹೀನತೆಯಿಂದಾಗಿ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯು ಕೆಂಪು ರಕ್ತ ಕಣಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ದೇಹವನ್ನು ತೀರಾ ತಂಪಾಗಿಸುತ್ತದೆ. ಪುರುಷರಿಗಿಂತ ಮಹಿಳೆಯರು ರಕ್ತಹೀನತೆಗೆ ಹೆಚ್ಚು ಒಳಗಾಗುತ್ತಾರೆ.
icon

(5 / 6)

ರಕ್ತಹೀನತೆ: ರಕ್ತಹೀನತೆಯಿಂದಾಗಿ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯು ಕೆಂಪು ರಕ್ತ ಕಣಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ದೇಹವನ್ನು ತೀರಾ ತಂಪಾಗಿಸುತ್ತದೆ. ಪುರುಷರಿಗಿಂತ ಮಹಿಳೆಯರು ರಕ್ತಹೀನತೆಗೆ ಹೆಚ್ಚು ಒಳಗಾಗುತ್ತಾರೆ.

ನರಗಳ ಬಲಹೀನತೆ: ಬಲಹೀನತೆಇರುವವರು ಚಳಿಗಾಲದಲ್ಲಿ ತುಂಬಾ ನಡುಗುತ್ತಾರೆ. ಅವರು ಆಯಾಸ, ತಲೆತಿರುಗುವಿಕೆ ಮತ್ತು ಕಣ್ಣುಗಳಲ್ಲಿ ಉರಿಯುವಿಕೆಯಿಂದ ಬಳಲುತ್ತಿರುತ್ತಾರೆ. ಅಂತಹ ಜನರು ವಿಟಮಿನ್ ಮತ್ತು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.
icon

(6 / 6)

ನರಗಳ ಬಲಹೀನತೆ: ಬಲಹೀನತೆಇರುವವರು ಚಳಿಗಾಲದಲ್ಲಿ ತುಂಬಾ ನಡುಗುತ್ತಾರೆ. ಅವರು ಆಯಾಸ, ತಲೆತಿರುಗುವಿಕೆ ಮತ್ತು ಕಣ್ಣುಗಳಲ್ಲಿ ಉರಿಯುವಿಕೆಯಿಂದ ಬಳಲುತ್ತಿರುತ್ತಾರೆ. ಅಂತಹ ಜನರು ವಿಟಮಿನ್ ಮತ್ತು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.(Unsplash)


IPL_Entry_Point

ಇತರ ಗ್ಯಾಲರಿಗಳು