ರೈಲ್ವೆಯಲ್ಲಿ ಲವ್ ಆರಂಭ, ವಿಮಾನ ನಿಲ್ದಾಣದಲ್ಲಿ ಪ್ರಪೋಸ್; ಇದು ವಿನೇಶ್ ಫೋಗಾಟ್-ಸೋಮವೀರ್ ಲವ್ಸ್ಟೋರಿ
Vinesh Phogat: ಪ್ಯಾರಿಸ್ ಒಲಿಂಪಿಕ್ಸ್ನ ಕುಸ್ತಿ ಫೈನಲ್ನಲ್ಲಿ ಅನರ್ಹಗೊಂಡ ಸಂದರ್ಭದಲ್ಲಿ ವಿನೇಶ್ ಫೋಗಾಟ್ಗೆ ಬಂಡೆಯಂತೆ ನಿಂತವರು ಆಕೆಯ ಪತಿ ಮತ್ತು ಸಹ ಕುಸ್ತಿಪಟು ಸೋಮವೀರ್ ರಾಠಿ.
(1 / 6)
ಅಧಿಕ ತೂಕದ ಕಾರಣದಿಂದ ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್ನಿಂದ ಕುಸ್ತಿಪಟು ವಿನೇಶ್ ಫೋಗಾಟ್ ಅವರನ್ನು ಅನರ್ಹಗೊಳಿಸಲಾಗಿತ್ತು. ಹೀಗಾಗಿ ಅವರು ಫೈನಲ್ ತಲುಪಿದರೂ ಪದಕ ಗೆಲ್ಲುವಲ್ಲಿ ವಿಫಲರಾದರು.(IG Vinesh Phogat)
(2 / 6)
ಒಲಿಂಪಿಕ್ಸ್ ಕುಸ್ತಿ ಇತಿಹಾಸದಲ್ಲಿ ಫೈನಲ್ಗೇರಿದ ಭಾರತದ ಮೊದಲ ಮಹಿಳಾ ರೆಸ್ಲರ್ ಎಂಬ ದಾಖಲೆ ಬರೆದಿದ್ದ ವಿನೇಶ್ ಅವರಿಗೆ ದೊಡ್ಡ ಬೆಂಬಲವಾಗಿ ನಿಂತಿರುವುದು ಅವರ ಪತಿ ಸೋಮವೀರ್ ರಾಠಿ. ಇದೀಗ ಅವರಿಬ್ಬರ ಪ್ರೇಮಕಥೆ ಹೇಗಿದೆ ಎಂಬುದನ್ನು ಈ ಮುಂದೆ ತಿಳಿಯೋಣ.
(3 / 6)
ವಿನೇಶ್ ಮತ್ತು ಸೋಮವೀರ್ 2011ರಲ್ಲಿ ರೈಲ್ವೆಯಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಅಂದು ಇಬ್ಬರೂ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಅಂದು ಕೆಲಸಕ್ಕೆ ಬರುತ್ತಿದ್ದಾಗ ಮಾತ್ರ ಭೇಟಿಯಾಗುತ್ತಿದ್ದ ಈ ಜೋಡಿ, ಮೊದಲು ಸ್ನೇಹಿತರಾಗಿ ನಂತರ ಪ್ರೀತಿಯಲ್ಲಿ ಬಿದ್ದರು.(IG Vinesh Phogat)
(4 / 6)
2018ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು ವಿನೇಶ್. ಇಂಡೋನೇಷ್ಯಾ ಈ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿತ್ತು. ಅಂದು ಚಿನ್ನ ಗೆದ್ದು ಭಾರತಕ್ಕೆ ಮರಳಿದ ವಿನೇಶ್, ಸರ್ಪ್ರೈಸ್ ನೀಡಿದ್ದರು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವೀರ್, ವಿನೇಶ್ಗೆ ಫಿಲ್ಮಿ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದರು.
(5 / 6)
ವಿನೇಶ್ ಮತ್ತು ಸೋಮವೀರ್ 2018ರ ಡಿಸೆಂಬರ್ನಲ್ಲಿ ಹರಿಯಾಣದ ಚಕ್ರಿ ದಾದ್ರಿಯಲ್ಲಿ ವಿವಾಹವಾದರು. ಗಣ್ಯರು, ಸಹ ಆಟಗಾರರು, ಇತರೆ ಕ್ರೀಡಾಪಟುಗಳು, ಆಪ್ತರು, ಸ್ನೇಹಿತರು, ಸಂಬಂಧಿಕರು ಅವರ ವಿವಾಹದಲ್ಲಿ ಪಾಲ್ಗೊಂಡಿದ್ದರು.
ಇತರ ಗ್ಯಾಲರಿಗಳು