Puttur Jatre 2024: ಪುತ್ತೂರು ಜಾತ್ರೆ ಆರಂಭ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸುಂದರ ಫೋಟೋಗಳು
- Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲೀಗ ಜಾತ್ರೆಯ ಸಂಭ್ರಮ. ಏಪ್ರಿಲ್ 10ರಿಂದ ಆರಂಭವಾದ ಜಾತ್ರೆಯು ಏ 20ರವರೆಗೆ ಇರಲಿದೆ. ಏ 17ರಂದು ಸುಡುಮದ್ದು ಪ್ರದರ್ಶನ ಮತ್ತು ಆಕರ್ಷಕ ರಥೋತ್ಸವ ನಡೆಯಲಿದೆ. ಪುತ್ತೂರು ಜಾತ್ರೆಯ ದಿನಾಂಕ, ಕಾರ್ಯಕ್ರಮಗಳ ವಿವರ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
- Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲೀಗ ಜಾತ್ರೆಯ ಸಂಭ್ರಮ. ಏಪ್ರಿಲ್ 10ರಿಂದ ಆರಂಭವಾದ ಜಾತ್ರೆಯು ಏ 20ರವರೆಗೆ ಇರಲಿದೆ. ಏ 17ರಂದು ಸುಡುಮದ್ದು ಪ್ರದರ್ಶನ ಮತ್ತು ಆಕರ್ಷಕ ರಥೋತ್ಸವ ನಡೆಯಲಿದೆ. ಪುತ್ತೂರು ಜಾತ್ರೆಯ ದಿನಾಂಕ, ಕಾರ್ಯಕ್ರಮಗಳ ವಿವರ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
(1 / 11)
Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೀಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೆಯ ಸಂಭ್ರಮ. ಏಪ್ರಿಲ್ 10ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರಕಿತ್ತು. ದೇವಾಲಯದ ಗದ್ದೆಯ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ, ಇನ್ನೊಂದೆಡೆ ಜಾತ್ರೆ ಸಂತೆಗಳು, ಆಟ ಆಕರ್ಷಣೆಗಳ ತಾಣ. ಏಪ್ರಿಲ್ 17ರಂದು ಪುತ್ತೂರು ಬೆಡಿ ಎಂದೇ ಜನಪ್ರಿಯತೆ ಪಡೆದ ಸುಡುಮದ್ದು ಪ್ರದರ್ಶನ ಇರಲಿದ್ದು, ಅಂದು ಹಲವು ಲಕ್ಷ ಜನರು ಸೇರುವ ನಿರೀಕ್ಷೆಯಿದೆ. (ಚಿತ್ರಗಳು: ಉಮೇಶ್ ಶಿಮ್ಲಡ್ಕ)
(2 / 11)
ಪುತ್ತೂರಿನಲ್ಲಿ ಜಾತ್ರೆ ಆರಂಭವಾದ ಎರಡನೇ ದಿನವೂ ಸಾಕಷ್ಟು ಜನರು ನೆರೆದಿದ್ದರು. ಗದ್ದೆಯ ಶ್ರೀ ಪಾರ್ವತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ನಡೆಯುತ್ತಿತ್ತು. ಸಾಕಷ್ಟು ಜನರು ಜಾತ್ರೆಯಲ್ಲಿ ಏನೂ ಖರೀದಿಸುವುದೆಂದು ನೋಡುವುದರಲ್ಲಿ ಮಗ್ನರಾಗಿದ್ದರು.
(3 / 11)
ಸುಡುಮದ್ದು ಪ್ರದರ್ಶನ ಮತ್ತು ರಥ ಎಳೆಯುವ ದಿನವಾದ ಏಪ್ರಿಲ್ 17 ಹೊರತುಪಡಿಸಿ ಏಪ್ರಿಲ್ 20ರ ವರೆಗೆ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದೆ. ಏಪ್ರಿಲ್ 10 ಅಂದರೆ ನಿನ್ನೆ ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರೋತ್ಸವ ಆರಂಭವಾಗಿತ್ತು.
(4 / 11)
ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾರ್ಥನೆ ಸಲ್ಲಿಸಲಾಗಿತ್ತು. ನಿನ್ನೆ ಧ್ವಜರೋಹಣವಾದ ಬಳಿಕ ಇಂದೂ ಕೂಡ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು ನಡೆದಿವೆ. ಬಲಿ ಉತ್ಸವ ನೋಡುತ್ತ ಸಾಕಷ್ಟು ಭಕ್ತರು ಪುನೀತರಾದರು.
(5 / 11)
ನಾಳೆ ಅಂದರೆ ಏಪ್ರಿಲ್ 12ರಂದು ರಾತ್ರಿ ಉತ್ಸವ, ನಂತರ ಶಿವಪೇಟೆ, ತೆಂಕಿಲ, ಕೋಟಿಬೆಟ್ಟು ಏಳ್ನಾಡುಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ ಭಾಗದಲ್ಲಿ ದೇವರ ಸವಾರಿ ಇರಲಿದೆ.
(6 / 11)
ಶನಿವಾರ ಅಂದರೆ ಏಪ್ರಿಲ್ 13ರಂದು ಮೇಷ ಸಂಕ್ರಮಣ ರಾತ್ರಿ ಉತ್ಸವ ಇರಲಿದೆ. ಇದಾದ ಬಳಿಕ ಪೇಟೆ ಸವಾರಿ ಇರಲಿದೆ. ಕೋರ್ಟ್ ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳ್ವಾರ್ ಬೈಲು ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.
(7 / 11)
ಏಪ್ರಿಲ್ 14ರ ಭಾನುವಾರ ಬೆಳಗ್ಗೆ ವಿಷು ಉತ್ಸವ ಇರಲಿದೆ. ವಸಂತ ಕಟ್ಟೆಪೂಜೆ ಇರಲಿದೆ. ರಾತ್ರಿ ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ) ಇರಲಿದೆ. ಬಳಿಕ ದೇವರ ಸವಾರಿಯು ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳಿಪ್ಪಾಡಿ, ಡ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆಗೆ ಹೋಗಲಿದೆ.
(8 / 11)
ಸೋಮವಾರ (ಏಪ್ರಿಲ್ 15) ರಾತ್ರಿ ಉತ್ಸವ ಇರಲಿದೆ. ಬನ್ನೂರು, ಅಶೋಕ ನಗರ, ರೈಲ್ವೆ ಮಾರ್ಗ ಭಾಗದಲ್ಲಿ ದೇವರ ಸವಾರಿ ಇರಲಿದೆ.
(9 / 11)
ಏಪ್ರಿಲ್ 16ರ ಮಂಗಳವಾರ ಬೆಳಗ್ಗೆ 8.30 ಗಂಟೆಗೆ ತುಲಾಭಾರ ಸೇವೆ ನಡೆಯಲಿದೆ. ರಾತ್ರಿ ಉತ್ಸವ ಇರಲಿದೆ. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಣ್ಣ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ.
(10 / 11)
ಏಪ್ರಿಲ್ 17ರಂದು ಹಲವು ಲಕ್ಷ ಜನರು ಸೇರುವಂತಹ ದಿನವಾಗಿದೆ. ಅಂದು ಇತಿಹಾಸ ಪ್ರಸಿದ್ಧ ಬೆಡಿ (ಸುಡುಮದ್ದು ಪ್ರದರ್ಶನ) ಇರಲಿದೆ. ಪುತ್ತೂರು ಬೆಡಿ ಜತೆಗೆ ಆಕರ್ಷಕ ರಥೋತ್ಸವ ನಡೆಯಲಿದೆ. ಬಂಗಾರ್ ಕಾಯರ್‌ಕಟ್ಟೆ ಭಾಗದಲ್ಲಿ ದೇವರ ಸವಾರಿ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀಭೂತಬಲಿ, ಶಯನ ಇತ್ಯಾದಿ ಕಾರ್ಯಕ್ರಮಗಳು ಇರಲಿವೆ.
ಇತರ ಗ್ಯಾಲರಿಗಳು