ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್; ಮೇ 25ರಂದು ನ್ಯೂಯಾರ್ಕ್‌ ಹಾರಲಿದೆ ಭಾರತ ಮೊದಲ ತಂಡ; ಐಪಿಎಲ್‌ ಫೈನಲ್‌ ಬಳಿಕ 2ನೇ ಬ್ಯಾಚ್‌ ಪ್ರಯಾಣ

ಟಿ20 ವಿಶ್ವಕಪ್; ಮೇ 25ರಂದು ನ್ಯೂಯಾರ್ಕ್‌ ಹಾರಲಿದೆ ಭಾರತ ಮೊದಲ ತಂಡ; ಐಪಿಎಲ್‌ ಫೈನಲ್‌ ಬಳಿಕ 2ನೇ ಬ್ಯಾಚ್‌ ಪ್ರಯಾಣ

  • ಐಪಿಎಲ್‌ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್‌ ನಡೆಯುತ್ತಿದೆ. ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಇದೀಗ ಆಟಗಾರರು ಐಪಿಎಲ್‌ನಲ್ಲಿ ನಿರತರಾಗಿದ್ದಾರೆ. ಈ ನಡುವೆ ವಿಶ್ವಕಪ್‌ನಲ್ಲಿ ಆಡಲು ಆಟಗಾರರ ಮೊದಲ ತಂಡವು ಅಮೆರಿಕ ವಿಮಾನ ಹತ್ತಲು ಸಜ್ಜಾಗಿದೆ. ಸಹಾಯಕ ಸಿಬ್ಬಂದಿಯೊಂದಿಗೆ ಹೆಚ್ಚಿನ ಭಾರತೀಯ ಆಟಗಾರರು ಮೇ 25ರಂದು ನ್ಯೂಯಾರ್ಕ್‌ಗೆ ಹಾರಲಿದ್ದಾರೆ.

ಕೆಲವು ಆಟಗಾರರಿರುವ ಐಪಿಎಲ್‌ ತಂಡಗಳು ಈಗಾಗಲೇ ಐಪಿಎಲ್‌ ಟೂರ್ನಿಯಿಂದ ಎಲಿಮನೇಟ್‌ ಆಗಿವೆ. ಅಂಥಾ ಆಟಗಾರರು ಮೇ 25ರಂದು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಉಳಿದ ಆಟಗಾರರು, ಮೇ 26ರ ಐಪಿಎಲ್ ಫೈನಲ್ ಪಂದ್ಯ ನಡೆದ ನಂತರವೇ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
icon

(1 / 6)

ಕೆಲವು ಆಟಗಾರರಿರುವ ಐಪಿಎಲ್‌ ತಂಡಗಳು ಈಗಾಗಲೇ ಐಪಿಎಲ್‌ ಟೂರ್ನಿಯಿಂದ ಎಲಿಮನೇಟ್‌ ಆಗಿವೆ. ಅಂಥಾ ಆಟಗಾರರು ಮೇ 25ರಂದು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಉಳಿದ ಆಟಗಾರರು, ಮೇ 26ರ ಐಪಿಎಲ್ ಫೈನಲ್ ಪಂದ್ಯ ನಡೆದ ನಂತರವೇ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.(AFP)

ಈ ಹಿಂದಿನ ಯೋಜನೆಯ ಪ್ರಕಾರ, ಪ್ಲೇಆಫ್ ಅರ್ಹತೆ ಪಡೆಯಲು ವಿಫಲವಾದ ತಂಡಗಳ ಸದಸ್ಯರು ಮೇ 21ರಂದು ನ್ಯೂಯಾರ್ಕ್‌ಗೆ ತೆರಳಬೇಕಿತ್ತು. ಅಂದರೆ, ಮೇ 19ರಂದು ಐಪಿಎಲ್‌ನ ಅಂತಿಮ ಲೀಗ್ ಪಂದ್ಯದ ನಡೆದ ಎರಡು ದಿನಗಳ ನಂತರ ತೆರಳಬೇಕಿತ್ತು. ಆದರೆ ಯೋಜನೆಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಮೊದಲ ಬ್ಯಾಚ್ ಮೇ 25ರಂದು ಹೊರಡಲಿದೆ ಎಂದು ತಿಳಿದುಬಂದಿದೆ.
icon

(2 / 6)

ಈ ಹಿಂದಿನ ಯೋಜನೆಯ ಪ್ರಕಾರ, ಪ್ಲೇಆಫ್ ಅರ್ಹತೆ ಪಡೆಯಲು ವಿಫಲವಾದ ತಂಡಗಳ ಸದಸ್ಯರು ಮೇ 21ರಂದು ನ್ಯೂಯಾರ್ಕ್‌ಗೆ ತೆರಳಬೇಕಿತ್ತು. ಅಂದರೆ, ಮೇ 19ರಂದು ಐಪಿಎಲ್‌ನ ಅಂತಿಮ ಲೀಗ್ ಪಂದ್ಯದ ನಡೆದ ಎರಡು ದಿನಗಳ ನಂತರ ತೆರಳಬೇಕಿತ್ತು. ಆದರೆ ಯೋಜನೆಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಮೊದಲ ಬ್ಯಾಚ್ ಮೇ 25ರಂದು ಹೊರಡಲಿದೆ ಎಂದು ತಿಳಿದುಬಂದಿದೆ.(AFP)

"ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಉಪನಾಯಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಅವರಂಥ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮೇ 25ರಂದು ಹೊರಡುವ ನಿರೀಕ್ಷೆಯಿದೆ" ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
icon

(3 / 6)

"ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಉಪನಾಯಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಅವರಂಥ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮೇ 25ರಂದು ಹೊರಡುವ ನಿರೀಕ್ಷೆಯಿದೆ" ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.(AP)

ಐಪಿಎಲ್ ಫೈನಲ್‌ ಪಂದ್ಯದಲ್ಲಿ ಆಡಲಿರುವ ಆಟಗಾರರು ಮಾತ್ರ ಭಾರತದಲ್ಲೇ ಉಳಿಯಲಿದ್ದಾರೆ. ಆಟಗಾರರು ಮೇ 27ರಂದು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.
icon

(4 / 6)

ಐಪಿಎಲ್ ಫೈನಲ್‌ ಪಂದ್ಯದಲ್ಲಿ ಆಡಲಿರುವ ಆಟಗಾರರು ಮಾತ್ರ ಭಾರತದಲ್ಲೇ ಉಳಿಯಲಿದ್ದಾರೆ. ಆಟಗಾರರು ಮೇ 27ರಂದು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.(PTI)

ಭಾರತ ವಿಶ್ವಕಪ್ ತಂಡ‌: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
icon

(5 / 6)

ಭಾರತ ವಿಶ್ವಕಪ್ ತಂಡ‌: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.(AP)

ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್‌ನಲ್ಲಿ ತನ್ನವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆ ಬಳಿಕ ಜೂನ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ.
icon

(6 / 6)

ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್‌ನಲ್ಲಿ ತನ್ನವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆ ಬಳಿಕ ಜೂನ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ.(AFP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು