147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು; ಪದಾರ್ಪಣೆ ಪಂದ್ಯದಲ್ಲೇ ಚರಿತ್ರೆ ಸೃಷ್ಟಿಸಿದ ಸೌತ್ ಆಫ್ರಿಕಾ ಆಟಗಾರ
- Corbin Bosch: ಸೆಂಚುರಿಯನ್ ಟೆಸ್ಟ್ನಲ್ಲಿ ಪಾಕಿಸ್ತಾನ ವಿರುದ್ಧ ಪದಾರ್ಪಣೆ ಮಾಡಿದ ಸೌತ್ ಆಫ್ರಿಕಾ ಆಟಗಾರ ಕಾರ್ಬಿನ್ ಬಾಷ್ ಅವರು 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಹೋನ್ನತ ದಾಖಲೆ ನಿರ್ಮಿಸಿದ್ದಾರೆ.
- Corbin Bosch: ಸೆಂಚುರಿಯನ್ ಟೆಸ್ಟ್ನಲ್ಲಿ ಪಾಕಿಸ್ತಾನ ವಿರುದ್ಧ ಪದಾರ್ಪಣೆ ಮಾಡಿದ ಸೌತ್ ಆಫ್ರಿಕಾ ಆಟಗಾರ ಕಾರ್ಬಿನ್ ಬಾಷ್ ಅವರು 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಹೋನ್ನತ ದಾಖಲೆ ನಿರ್ಮಿಸಿದ್ದಾರೆ.
(1 / 8)
ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕಾರ್ಬಿನ್ ಬಾಷ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆಗೈದ ಪಂದ್ಯದಲ್ಲೇ ತನ್ನ ಅದ್ಭುತ ಪ್ರದರ್ಶನದ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಚೊಚ್ಚಲ ಟೆಸ್ಟ್ ಆಡುತ್ತಿರುವ ಕಾರ್ಬಿನ್, ಬೌಲಿಂಗ್-ಬ್ಯಾಟಿಂಗ್ ಎರಡರಲ್ಲೂ ಮಿಂಚಿನ ಪ್ರದರ್ಶನ ನೀಡುವ ಮೂಲಕ ದಾಖಲೆ ಬರೆದಿದ್ದಾರೆ.
(AFP)(2 / 8)
ಪಾಕಿಸ್ತಾನ ವಿರುದ್ಧದ ಸೆಂಚುರಿಯನ್ ಟೆಸ್ಟ್ ಪಂದ್ಯದ ಮೊದಲ ದಿನ ಬೌಲಿಂಗ್ನಲ್ಲಿ 63 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದ ದಕ್ಷಿಣ ಆಫ್ರಿಕಾದ ಈ ಆಲ್ರೌಂಡರ್, 2ನೇ ದಿನ ಬ್ಯಾಟಿಂಗ್ನಲ್ಲಿ ಅಜೇಯ 81 ರನ್ ಸಿಡಿಸಿ ದಾಖಲೆಯ ಪುಸ್ತಕದಲ್ಲಿ ಹೆಸರನ್ನು ಸೇರ್ಪಡೆ ಮಾಡಿದರು.
(AP)(3 / 8)
ಸೆಂಚುರಿಯನ್ ಟೆಸ್ಟ್ನ 2ನೇ ದಿನದಂದು ಕಾರ್ಬಿನ್ ಬಾಷ್ ತಮ್ಮ ಅರ್ಧಶತಕ ಪೂರ್ಣಗೊಳಿಸಿದ ಬೆನ್ನಲ್ಲೇ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಬೌಲಿಂಗ್ನಲ್ಲಿ 4 ವಿಕೆಟ್ ಮತ್ತು ಬ್ಯಾಟಿಂಗ್ನಲ್ಲಿ ಅರ್ಧಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಪರ ಈ ಸಾಧನೆ ಮಾಡಿದ್ದು ಇದೇ ಮೊದಲು.
(AP)(4 / 8)
ಪದಾರ್ಪಣೆ ಪಂದ್ಯದಲ್ಲೇ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಧಿಕ ಸ್ಕೋರ್ ಮಾಡಿದ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಸೌತ್ ಆಫ್ರಿಕಾ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ.
(AFP)(5 / 8)
ಗಾಯಗೊಂಡಿದ್ದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರ ಜಾಗದಲ್ಲಿ ಅವಕಾಶ ಪಡೆದ 30 ವರ್ಷದ ಆಟಗಾರ, ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್, ಒಂದು ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರ ಜೊತೆಗೆ ತಾನು ಬೌಲಿಂಗ್ ಮಾಡಿದ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕವೂ ಗಮನ ಸೆಳೆದಿದ್ದರು.
(AP)(6 / 8)
ಚೊಚ್ಚಲ ಪಂದ್ಯದಲ್ಲೇ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮತ್ತು ಬ್ಯಾಟಿಂಗ್ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಈ ಶತಮಾನದ 3ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ 2008ರಲ್ಲಿ ಇಂಗ್ಲೆಂಡ್ ವಿರುದ್ಧದ ನ್ಯೂಜಿಲೆಂಡ್ನ ಟಿಮ್ ಸೌಥಿ (77 ರನ್, 5 ವಿಕೆಟ್), 2020ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾದ ವನಿಂದು ಹಸರಂಗ (4 ವಿಕೆಟ್, 59 ರನ್) ಸಾಧನೆ ಮಾಡಿದ್ದರು.
(AP)(7 / 8)
ಒಟ್ಟಾರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಪಂದ್ಯದಲ್ಲೇ ಕನಿಷ್ಠ ನಾಲ್ಕು ವಿಕೆಟ್ ಮತ್ತು ಅರ್ಧಶತಕ ಗಳಿಸಿದ ವಿಶ್ವದ 16ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕಾರ್ಬನ್ ಬಾಷ್ ಪಾತ್ರರಾಗಿದ್ದಾರೆ.
(AFP)ಇತರ ಗ್ಯಾಲರಿಗಳು