ಕನ್ನಡ ಸುದ್ದಿ  /  Photo Gallery  /  First Two Match Lost Australias Road To Final In Icc Odi World Cup 2023 Ind Vs Aus Cwc Final Prs

ಸೋತು ಗೆದ್ದ ಆಸೀಸ್ ವಿಶ್ವಕಪ್ ಜರ್ನಿಯೇ ರೋಚಕ; ಲೀಗ್​​ನಿಂದ ಫೈನಲ್ ತನಕ ಬಂದ ಹಾದಿ ಹೇಗಿದೆ?

  • India vs Australia Final: ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲು ಕಂಡಿತ್ತು. ಆದರೆ ಆ ಬಳಿಕ ಪುಟಿದೆದ್ದಿತು. ಸತತ 8 ಪಂದ್ಯಗಳನ್ನು ಗೆದ್ದು ಫೈನಲ್​ಗೆ ಪ್ರವೇಶಿಸಿದೆ. ಲೀಗ್​​ನಿಂದ ಫೈನಲ್ ತನಕ ಬಂದ ಆಸೀಸ್​ ಜರ್ನಿ ಹೇಗಿದೆ?

ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತದ ಎದುರು ಆಸ್ಟ್ರೇಲಿಯಾ ಹೀನಾಯ ಸೋಲಿನೊಂದಿಗೆ ಅಭಿಯಾನ ಆರಂಭಿಸಿತು. ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್, 199 ರನ್​ಗಳಿಗೆ ಆಲೌಟ್​ ಆಗಿತ್ತು. 200 ರನ್​ ಗುರಿ ಬೆನ್ನಟ್ಟಿದ ಭಾರತ, 41.2 ಓವರ್​​​ಗಳಲ್ಲಿ ಗೆದ್ದು ಬೀಗಿತು. 
icon

(1 / 10)

ಆಸ್ಟ್ರೇಲಿಯಾ ತನ್ನ 2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋಲನ್ನು ಅನುಭವಿಸಿತು. ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತು. ಆದರೆ 177 ರನ್​​ಗಳಿಗೆ ಆಲೌಟ್​ ಆಯಿತು. ಇದರೊಂದಿಗೆ ಸತತ 2ನೇ ಸೋಲಿಗೆ ಶರಣಾಯಿತು.
icon

(2 / 10)

ಸತತ 2 ಪಂದ್ಯ ಸೋತಿದ್ದ ಆಸ್ಟ್ರೇಲಿಯಾ, ತನ್ನ ಮೂರನೇ ಪಂದ್ಯದಲ್ಲಿ ಪುಟಿದೆದ್ದಿತು. ಶ್ರೀಲಂಕಾ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು. ಆ್ಯಡಂ ಜಂಪಾ 8 ಓವರ್ ಗಳಲ್ಲಿ 47 ರನ್ ನೀಡಿ 4 ವಿಕೆಟ್ ಪಡೆದರು. ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ಶ್ರೀಲಂಕಾ, 209 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 35.2 ಓವರ್​​ಗಳಲ್ಲಿ ಗೆಲುವಿನ ತೆರೆ ದಾಟಿತು.
icon

(3 / 10)

ಶ್ರೀಲಂಕಾ ವಿರುದ್ದ ಗೆದ್ದ ನಂತರ ಆಸೀಸ್ ಹಿಂತಿರುಗಿ ನೋಡಲಿಲ್ಲ. ತನ್ನ 4ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತು. ಡೇವಿಡ್ ವಾರ್ನರ್ (163 ) ಮತ್ತು ಮಿಚೆಲ್ ಮಾರ್ಷ್ (121) ಇಬ್ಬರೂ ಬ್ಯಾಟ್ಸ್​​ಮನ್​​ಗಳು ಶತಕ ಬಾರಿಸಿದರು. ಮೊದಲ ಬ್ಯಾಟಿಂಗ್ ನಡೆಸಿದ ಆಸೀಸ್ 367 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಪಾಕ್, 305 ರನ್​​ಗಳಿಗೆ ಆಲೌಟ್ ಆಯಿತು. ಆಸೀಸ್ 62 ರನ್​ಗಳ ಗೆಲುವು ಸಾಧಿಸಿತು
icon

(4 / 10)

ನೆದರ್ಲೆಂಡ್ಸ್ ವಿರುದ್ಧದ 5ನೇ ಲೀಗ್​ ಪಂದ್ಯದಲ್ಲೂ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆ ಹಾಕಿತು. ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಶತಕ ಸಿಡಿಸಿದರು. ಮೊದಲು ಬ್ಯಾಟಿಂಗ್ ನಡೆಸಿ 8 ವಿಕೆಟ್ ನಷ್ಟಕ್ಕೆ ಆಸೀಸ್ 399 ರನ್ ಗಳಿಸಿತು. ಆದರೆ ಡಚ್ಚರು ಕೇವಲ 90 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆಸೀಸ್​ 309 ರನ್​ಗಳ ಬೃಹತ್ ಗೆಲುವು ಸಾಧಿಸಿತು.
icon

(5 / 10)

ಲೀಗ್​​ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ ಕಾಂಗರೂ ಪಡೆ, ನ್ಯೂಜಿಲೆಂಡ್ ಎದುರು 5 ರನ್​​ಗಳ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್​ ನಡೆಸಿದ ಆಸೀಸ್ 388 ರನ್​​ ಕಲೆ ಹಾಕಿತು. ಟ್ರಾವಿಸ್ ಹೆಡ್ ಶತಕ ಸಿಡಿಸಿ ಮಿಂಚಿದರು. ಈ ಪಂದ್ಯದಲ್ಲಿ ಕಿವೀಸ್, 9 ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿತು. 
icon

(6 / 10)

ನ್ಯೂಜಿಲೆಂಡ್ ಕದನ ಗೆದ್ದ ನಂತರ ಹಾಲಿ ಚಾಂಪಿಯನ್ ಇಂಗ್ಲೆಂಡ್​​ಗೆ ಮಣ್ಣುಮುಕ್ಕಿಸಿತು. 49.3 ಓವರ್​​​ಗಳಲ್ಲಿ ಆಸ್ಟ್ರೇಲಿಯಾ 286 ರನ್​ ಗಳಿಸಿದರೆ, ಇಂಗ್ಲೆಂಡ್​​ 48.1 ಓವರ್​​​ನಲ್ಲಿ 253 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ 33 ರನ್​ಗಳ ಸೋಲನುಭವಿಸಿತು. ಆ್ಯಡಂ ಜಂಪಾ 3 ವಿಕೆಟ್ ಪಡೆದು ಮಿಂಚಿದರು.
icon

(7 / 10)

ವಿಶ್ವಕಪ್‌ನ ಅತ್ಯುತ್ತಮ ಪಂದ್ಯಗಳಲ್ಲಿ ಒಂದು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಪಂದ್ಯ. ಸೋಲಿನ ಅಂಚಿನಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಗ್ಲೆನ್ ಮ್ಯಾಕ್ಸ್​ವೆಲ್ ಏಕಾಂಗಿಯಾಗಿ ನಿಂತು ಗೆಲ್ಲಿಸಿದರು. ಮ್ಯಾಕ್ಸ್​ವೆಲ್ ದ್ವಿಶತಕ ಸಿಡಿಸಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿದರು. ಅಫ್ಘನ್ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು. ಆದರೆ ಆಸೀಸ್​ 46.5 ಓವರ್​​ಗಳಲ್ಲಿ ಗೆದ್ದು ಬೀಗಿತು. 8ನೇ ವಿಕೆಟ್​ಗೆ 200 ರನ್​ಗಳ ಜೊತೆಯಾಟ ಬಂತು.
icon

(8 / 10)

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ದೊಡ್ಡ ರನ್ ಚೇಸ್ ಮಾಡುವ ಮೂಲಕ ಜಯಭೇರಿ ಬಾರಿಸಿತ್ತು. ಮಿಚೆಲ್ ಮಾರ್ಷ್ ಅಮೋಘ ಶತಕ ಬಾರಿಸಿದರು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 306 ರನ್ ಗಳಿಸಿತ್ತು. ಆಸೀಸ್​ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಪುಟಿದೆದ್ದು ಲೀಗ್​ನಲ್ಲಿ ಸತತ 7 ಗೆಲುವು ದಾಖಲಿಸಿದ್ದು ನಿಜಕ್ಕೂ ಶ್ಲಾಘನೀಯ. 
icon

(9 / 10)

ಸೆಮಿಫೈನಲ್‌ನಲ್ಲೂ ಆಸೀಸ್​, ಗೆಲುವಿನ ಓಟ ಉಳಿಸಿಕೊಂಡರು. ದಕ್ಷಿಣ ಆಫ್ರಿಕಾ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿ, ಮತ್ತೊಮ್ಮೆ ಫೈನಲ್ ತಲುಪಿತು. ಇದೀಗ 20 ವರ್ಷಗಳ ನಂತರ ಆಸ್ಟ್ರೇಲಿಯಾ, ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.
icon

(10 / 10)

ಇತರ ಗ್ಯಾಲರಿಗಳು